






ನೆಲ್ಯಾಡಿ: ಜೆಸಿಐ ಮಡಂತ್ಯಾರ್ ಘಟಕದ ಆತಿಥ್ಯದಲ್ಲಿ ನಡೆದ ವ್ಯವಹಾರ ಮತ್ತು ಅಭಿವೃದ್ಧಿ ಹಾಗೂ ಬೆಳವಣಿಗೆ ವಲಯ ಸಮ್ಮೇಳನದಲ್ಲಿ ಜೆಸಿಐ ನೆಲ್ಯಾಡಿ ಘಟಕದ ಪೂರ್ವಾಧ್ಯಕ್ಷ ವಿಶ್ವನಾಥ ಶೆಟ್ಟಿ ಅವರಿಗೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳನ್ನು ಗುರುತಿಸಿ ಪ್ರತಿಷ್ಠಿತ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ವಿಶ್ವನಾಥ ಶೆಟ್ಟಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕಲಾರತ್ನ ಪ್ರಶಸ್ತಿ, ಅಂತರ್ರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳು ಲಭಿಸಿವೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೆಸಿಐ ನೆಲ್ಯಾಡಿ ಘಟಕದ ಅಧ್ಯಕ್ಷೆ ಪ್ರವೀಣಿ ಶೆಟ್ಟಿ,ಪೂರ್ವಾಧ್ಯಕ್ಷರಾದ ನಾರಾಯಣ ಎನ್. ಬಲ್ಯ, ದಯಾಕರ್ ರೈ, ಮೋಹನ್ ಕುಮಾರ್ ಡಿ., ಪುರಂದರ ಗೌಡ, ಜಾನ್ ಪಿ. ಎಸ್., ನಿಕಟಪೂರ್ವಾಧ್ಯಕ್ಷ ಸುಧಾಕರ್ ಶೆಟ್ಟಿ, ಸದಸ್ಯರಾದ ಸೌಮ್ಯ ರೈ, ಸಾಯಿಧೃತಿ, ಜಾಹ್ನವಿ, ರಹಿಮಾನ್ ಉಪಸ್ಥಿತರಿದ್ದರು.













