






ಆಲಂಕಾರು:ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು ಮಹಾನಗರದ ‘ಕೆಸರ್ಡ್ ಒಂಜಿ ದಿನ’ ಕಾರ್ಯಕ್ರಮ ಆಲಂಕಾರು ಮಾಯಿಲ್ಗ ಗದ್ದೆಯಲ್ಲಿ ನಡೆಯಿತು.
ಪುತ್ತೂರಿನ ಮಾಜಿ ಶಾಸಕರಾದ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಗತ್ತಿಗೆ ಯೋಗವನ್ನು ಪರಿಚಯಿಸಿದ ದೇಶ ಭಾರತ.ಎಸ್.ಪಿ.ವೈ.ಎಸ್.ಎಸ್ ಸಂಸ್ಥೆ ಯೋಗವನ್ನು ಎಲ್ಲಾರಿಗೂ ಉಚಿತವಾಗಿ ತಿಳಿಸಿಕೊಡುತ್ತಿದ್ದು ಇದರಿಂದ ಆನೇಕ ಮಂದಿಗೆ ಪ್ರಯೋಜನವಾಗಿದೆ. ಇದು ಎಲ್ಲಾರಿಗೂ ಮಾದರಿಯಾಗುವ ಕೆಲಸವಾಗಿದೆ ಎಂದು ತಿಳಿಸಿ ನಮ್ಮ ದೇಶ ಕೃಷಿ ಮತ್ತು ಖುಷಿ ಸಂಸ್ಕೃತಿಯಿಂದ ಅಭಿವೃದ್ಧಿ ಗೊಂಡಿದೆ.ನಾವೆಲ್ಲರೂ ಯೋಗದಲ್ಲಿ ಜೋಡಿಸಿಕೊಂಡು ನಮ್ಮ ಆರೋಗ್ಯವನ್ನು ಸದೃಡಗೊಳಿಸಬೇಕೆಂದು ತಿಳಿಸಿದರು.






ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಧ್ಯೇಯೋದ್ದೇಶಗಳನ್ನು ಹೊಗಳಿ ತುಳುನಾಡಿನ ಸಂಸ್ಕೃತಿ ಹಾಗು ಸನಾತನ ಧರ್ಮದ ಜೀವನ ಕ್ರಮದ ಬಗ್ಗೆ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಎಸ್.ಪಿ.ವೈ.ಎಸ್. ಎಸ್ ಮಂಗಳೂರು ಮಹಾನಗರ ಸಂಚಾಲಕರಾದ ಆನಂದ ಕುಂಟಿಣಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬಗ್ಗೆ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಎಸ್.ಪಿ.ವೈ.ಎಸ್.ಎಸ್ ಉಪ್ಪಿನಂಗಡಿ ವಲಯದ ಸಂಚಾಲಕ ಸಂತೋಷ್ ವಹಿಸಿದ್ದರು.ಆಲಂಕಾರು ಆಕಾಶ್ ಕ್ಲಿನಿಕ್ ನ ವೈದ್ಯರಾದ ಡಾ!.ಆಕಾಶ್ ರವರು ಗದ್ದೆಗೆ ಹಾಲು ಎರೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಗದ್ದೆಯ ಮಾಲಕರಾದ ಉಮೇಶ್ ಮಾಯಿಲ್ಗ ಉಪಸ್ಥಿತರಿದ್ದರು.ಯೋಗಬಂಧುಗಳಾದ ಕುಮಾರಿ ಖುಷಿ ಪ್ರಾರ್ಥಿಸಿ , ದಮಯಂತಿ ಸ್ವಾಗತಿಸಿ ಮುರಳಿ ಮೋಹನ್ ಕಾರ್ಯಕ್ರಮದ ಸಂಚಾಲಕರು ವಂದಿಸಿದರು. ನಾರಾಯಣ ನೆಕ್ಕರೆ ಕಾರ್ಯಕ್ರಮ ನಿರೂಪಿಸಿದರು.

ಯೋಗ ಬಂಧುಗಳಿಗೆ ಮತ್ತು ಅವರ ಕುಟುಂಬಿಕರಿಗೆ ವಯೋಮಿತಿಗೆ ಅನುಗುಣವಾಗಿ ವಿವಿಧ ಆಟೋಟಗಳನ್ನು ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲಿ ಮನರಂಜನೆ ಸಹಿತ ನಡೆಸಲಾಯಿತು. ಲೋಕ ಕಲ್ಯಾಣ ಮಂತ್ರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
ಚಿತ್ರದುರ್ಗ, ಬೆಂಗಳೂರು, ಮಂಗಳೂರಿನ ಕದ್ರಿ, ಕಂಕನಾಡಿ , ಮಳಲಿ ನಗರಗಳು, ಉಪ್ಪಿನಂಗಡಿ ನಗರದ ಸಹಸ್ರಲಿಂಗೇಶ್ವರ ಶಾಖೆ, ಗಾಣಿಗ ಸಮುದಾಯ ಭವನ ಶಾಖೆ, ಶಬರೀಶ ಶಾಖೆ ನೆಲ್ಯಾಡಿ, ನಮ್ಮ ಮನೆ ಶಾಖೆ ಗುರುವಾಯನಕೆರೆ, ಪಾಂಡುರಂಗ ಶಾಖೆ ಗುರುವಾಯನಕೆರೆ, ಸಮುದಾಯ ಭವನ ಶಾಖೆ, ಮದ್ದಡ್ಕ, ಶ್ರೀ ಭಾರತಿ ಶಾಖೆ ಆಲಂಕಾರಿನವರು ಸೇರಿದಂತೆ 400ಕ್ಕೂ ಅಧಿಕ ಯೋಗ ಹಾಗೂ ಯೋಗೇತರ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್.ಪಿ.ವೈ.ಎಸ್.ಎಸ್ ಪ್ರಾಂತ ಸಂಚಾಲಕ ರಾದ ರವೀಶ್ ಕುಮಾರ್, ಮಂಗಳೂರಿನ ಮಹಾನಗರದ ಮಾರ್ಗದರ್ಶಕರಾದ ಗೋಕುಲನಾಥ್ ಸೇರಿದಂತೆ ಹಲವು ಮಂದಿ ಪ್ರಮುಖರು ಉಪಸ್ಥಿತರಿದ್ದರು










