







ರಾಮಕುಂಜ: ಈದ್ ಮಿಲಾದ್ ಮೆರವಣಿಗೆ ವೇಳೆ ಮುಸ್ಲಿಂ ಬಾಂಧವರಿಗೆ ಸಿಹಿತಿಂಡಿ, ಪಾನೀಯ ವಿತರಿಸಿ ಹಿಂದೂ ಬಾಂಧವರು ಸೌಹಾರ್ದತೆ ಮೆರೆದ ಘಟನೆ ಕಡಬ ತಾಲೂಕಿನ ಕೊಯಿಲದಲ್ಲಿ ನಡೆದಿದೆ.



ಕೊಯಿಲ ಗ್ರಾ.ಪಂ.ಮಾಜಿ ಅಧ್ಯಕ್ಷ ಹರ್ಷಿತ್ಕುಮಾರ್, ವಂಶಿ ಸೂಪರ್ ಮಾರ್ಕೆಟ್ನ ಚಿದಾನಂದ, ಸಿಂಧೂರ ಫಿಶ್ ಮತ್ತು ಚಿಕನ್ ಮಾರ್ಕೆಟ್ನ ಸುಧೀಶ್ ಪಟ್ಟೆ, ಸುಭಾಷ್ ಶೆಟ್ಟಿ ಹಾಗೂ ಇತರರು ಈದ್ ಮಿಲಾದ್ ಮೆರವಣಿಗೆಯಲ್ಲಿ ಆಗಮಿಸಿದ ಮುಸ್ಲಿಂ ಬಾಂಧವರಿಗೆ ಸಿಹಿ ತಿಂಡಿ ಹಾಗೂ ಪಾನೀಯ ನೀಡಿ ಸೌಹಾರ್ದತೆ ಮೆರೆದಿದ್ದಾರೆ.













