






ಪುತ್ತೂರು: ಹುಣಸೂರು ಬಳಿ ನಡೆದ ಅಪಘಾತದಲ್ಲಿ ಕಾವು ಮಾಡನ್ನೂರಿನ ಯುವಕ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.


ಕಾವು ಮಾಡನ್ನೂರು ನಿವಾಸಿ ಸುಲೈಮಾನ್ ಅವರ ಪುತ್ರ ಸಂಶುದ್ದೀನ್ ಮೃತ ಯುವಕ.



ಮೃತರು ತಂದೆ, ಸಹೋದರರು ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಮೃತರ ಅಂತಿಮ ಕಾರ್ಯ ಇಂದು ಸಂಜೆ (ಆ.28) ಮಾಡನ್ನೂರು ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.










