ಅಪಘಾತ ಪಡಿಸಿ ಪರಾರಿಯಾಗಿದ್ದ ಲಾರಿ ಚಾಲಕನಿಗೆ ಶಿಕ್ಷೆ ವಿಧಿಸಿದ ಮಂಗಳೂರು ಕೋರ್ಟ್: ಎಪಿಪಿ ಆರೋನ್ ಡಿಸೋಜಾ ವಿಟ್ಲ ವಾದ ಮಂಡನೆ

0

ಪುತ್ತೂರು: ಅಪಘಾತ ನಡೆಸಿ ಪರಾರಿಯಾಗಿದ್ದ ಲಾರಿ ಚಾಲಕನಿಗೆ ಮಂಗಳೂರು ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


2024ರ ಜನವರಿ 24ರಂದು ಮಂಗಳೂರು ನಗರದ ಕೊಟ್ಟಾರ ಚೌಕಿ ಬಳಿ ಅನ್ಸಾರ್ ಜಿ. ಮಣಿಯಂಪಾರ ಪೆರ್ಲ ಎಂಬವರು ಲಾರಿಯನ್ನು(ಕೆ.ಎಲ್. 11-ಬಿ.ಡಿ. 2534) ಕೆ.ಪಿ.ಟಿ. ಕಡೆಯಿಂದ ಸುರತ್ಕಲ್ ಕಡೆಗೆ ಚಲಾಯಿಸಿಕೊಂಡು ಹೋಗುವಾಗ ಫೋರ್ಸ್ ಶೋ ರೂಮ್‌ನ ಎದುರು ರಸ್ತೆಯಲ್ಲಿ ಆಲ್ಟೋ ಕಾರಿಗೆ(ಕೆ.ಎ. 19-ಎಮ್.ಸಿ. 4965) ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ಪರಿಣಾಮ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ, ಹೊಡೆದು ಡಿವೈಡೆರ್ ಮೇಲಿದ್ದ ವಿದ್ಯುತ್ ಕಂಬಕ್ಕೆ ತಾಗಿ ಉಡುಪಿ ಕಡೆಯಿಂದ ಕೆಪಿಟಿ ಕಡೆಗೆ ಹಾದು ಹೋಗುವ ರಸ್ತೆಗೆ ಬಿದ್ದು ಕಾರಿನಲ್ಲಿದ್ದ ಆಯಿಷಾ ರಸ್ತೆಫಾ, ಅಬ್ದುಲ್ ರಜಾಕ್, ರಷೀದಾ ರಫಿಯಾ ಹಾಗೂ ಅಷಿಯಾ ಎಂಬವರಿಗೆ ಗಾಯಗಳಾಗಿತ್ತು. ಈ ಪೈಕಿ ಅಬ್ದುಲ್ ರಜಾಕ್ ಹಾಗೂ ಆಯಿಷಾ ಅವರಿಗೆ ತೀವ್ರ ಗಾಯವಾಗಿತ್ತು. ಬಳಿಕ ಆಷಿಯಾ ಅವರು ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿದ್ದರು. ಅಪಘಾತದ ಬಳಿಕ ಲಾರಿ ಚಾಲಕ ಅನ್ಸಾರ್ ಲಾರಿಯನ್ನು ಅಪಘಾತ ಸ್ಥಳದಲ್ಲಿ ನಿಲ್ಲಸದೆ ಲಾರಿ ಸಮೇತ ಸ್ಥಳದಿಂದ ಪರಾರಿಯಾಗಿದ್ದ. ಘಟನೆಯ ಕುರಿತು ಕಾರು ಚಾಲಕಿ ಸುಹಾನ ಅವರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಅಂದಿನ ಸಂಚಾರ ಪಶ್ಚಿಮ ಠಾಣಾ ಪೊಲೀಸ್ ನಿರೀಕ್ಷಕ ಹುಲಗಪ್ಪಾ ಡಿ. ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಿ ಚಾಲಕನ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಮಂಗಳೂರಿನ 8ನೇ ಜೆಎಮ್‌ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಮೋನಿಷಾ ಆರ್. ಅವರು ವಾದ ಪ್ರತಿವಾದಗಳನ್ನು ಆಲಿಸಿ ಆರೋಪಿಯು ಗಾಯಾಳುಗಳಿಗೆ ಯಾವುದೇ ವೈದ್ಯಕೀಯ ನೆರವು ನೀಡದೆ ಸ್ಥಳದಿಂದ ಪರಾರಿಯಾಗಿರುವುದನ್ನು ಪ್ರಾಸಿಕ್ಯೂಷನ್ ಸಾಭೀತು ಪಡಿಸಿದೆ ಎಂದು ತೀರ್ಮಾನಿಸಿ ಚಾಲಕ ಅನ್ಸಾರ್‌ಗೆ 187 ಐಎಮ್‌ವಿ ಕಾಯ್ದೆ ಅಡಿಯಲ್ಲಿ 2 ತಿಂಗಳ ಸಾದಾ ಸಜೆ ಮತ್ತು 5,೦೦೦ ರೂ ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ 8 ದಿನಗಳ ಸಾದಾ ಸಜೆ ಅನುಭವಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಆರೋನ್ ಡಿಸೋಜ ವಿಟ್ಲ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here