






ಪುತ್ತೂರು: ಕೋಡಿಂಬಾಡಿಯ ವನಿತಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ಆ.26ರಂದು ನಡೆಯಿತು.


ಕಾರ್ಯಕ್ರಮದಲ್ಲಿ ಹೈನುಗಾರಿಕೆ ಮತ್ತು ಹೈನುಗಾರಿಕೆಗೆ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಹರಿಣಾಕ್ಷಿ ಕೈಪ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಸದಸ್ಯೆ ಲೀಲಾವತಿ ಲಕ್ಷ್ಮಣ ಗೌಡ ಮೇಲಿನಹಿತ್ಲು ಸ್ವಾಗತಿಸಿದರು. ಗೌರವಾಧ್ಯಕ್ಷೆ ಪೂರ್ಣಿಮಾ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಕಡತ ಹಸ್ತಾಂತರಿಸುವ ಮೂಲಕ ಸಾಂಕೇತಿಕವಾಗಿ ಪದ ಸ್ವೀಕಾರ ನಡೆಸಲಾಯಿತು. ಬಳಿಕ ಪಶು ಸಖಿ ಭವ್ಯ ಅವರು ಆಧುನಿಕ ಹೈನುಗಾರಿಕೆ ಮತ್ತು ಅದಕ್ಕೆ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ನೂತನ ಅಧ್ಯಕ್ಷೆ ವಿಜಯ ಶಾಂತಾರಾಮ ಗೌಡ ಬಾರ್ತಿಕುಮೇರು ಮುಂದಿನ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಕೋರಿದರು. ನೂತನ ಕಾರ್ಯದರ್ಶಿ ಕವಿತಾ ಉಮೇಶ್ ಗೌಡ ಮೇಲಿನಹಿತ್ಲು ಮತ್ತು ನೂತನ ಉಪಾಧ್ಯಕ್ಷೆ ಲೀಲಾವತಿ ಲಕ್ಷ್ಮಣ ಗೌಡ ಮೇಲಿನಹಿತ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.




ಮಾಜಿ ಕಾರ್ಯದರ್ಶಿ ಪವಿತ್ರ ಶೆಟ್ಟಿ ಬರಮೇಲು ಅನಿಸಿಕೆ ವ್ಯಕ್ತಪಡಿಸಿದರು. ಜೊತೆ ಕಾರ್ಯದರ್ಶಿ ಹರಿಣಾಕ್ಷಿ ರಮೇಶ್ ಕೈಪ, ಕೋಶಾಧಿಕಾರಿ ಯಶೋದ ಬಾಲಕೃಷ್ಣ ಕಾಪು, ಲೆಕ್ಕ ಪರಿಶೋಧಕಿ ವಿನುತ ಜಯಪ್ರಕಾಶ್ ಬದಿನಾರು, ಸಂಘಟನಾ ಕಾರ್ಯದರ್ಶಿ ಕುಸುಮ ವಿ. ರೈ ಸರೋಳಿ, ಪವಿತ್ರ ಸುರೇಶ್ ಶೆಟ್ಟಿ ಬರಮೇಲು, ಶಾರದಾ ಸಿ. ರೈ ಸರೋಳಿ, ಸ್ಪೂರ್ತಿ ರಾಜಮಣಿ ರೈ ಮಠಂತಬೆಟ್ಟು, ಗೌರವ ಸಲಹೆಗಾರರಾದ ರಾಧಿಕಾ ರಮೇಶ್ ಸಾಮಂತ್ ನೆಕ್ಕರಾಜೆ, ವಿಜಯಲಕ್ಷ್ಮಿ ರಮೇಶ್ ನಾಯಕ್ ನಿಡ್ಯ ಮತ್ತು ಗ್ರಾ.ಪಂ. ಮಾಜಿ ಅಧ್ಯಕ್ಷೆ ಮಲ್ಲಿಕಾ ಅಶೋಕ ಪೂಜಾರಿ ಕಾಂತಳಿಕೆ ಅವರು ಅತಿಥಿಗಳನ್ನು ಗೌರವಿಸಿದರು. ಭವ್ಯ, ಅಮಿತಾ ಗೌತಮ್, ಸುಗುಣ ಶೆಟ್ಟಿ, ಉಷಾ ಶೆಟ್ಟಿ, ಪೂರ್ಣಿಮಾ ಬರಮೇಲು, ಪ್ರೇಮ, ಧರ್ಮಾವತಿ, ವನಿತಾ ಮತ್ತಿತರರು ಭಾಗವಹಿಸಿದ್ದರು. ಹೈನುಗಾರಿಕೆಯ ಮಾಹಿತಿ ನೀಡಿದ ಪಶುಸಖಿ ಭವ್ಯ ಮತ್ತು ಕಾರ್ಯಕ್ರಮ ನಿರೂಪಣೆ ಮಾಡಿಸ ಪ್ರಸಕ್ತ ರೈ ಸರೋಳಿ ಅವರನ್ನು ಶಾಲು ಹೊದಿಸಿ ಮತ್ತು ಹೂವಿನ ಗಿಡ ನೀಡಿ ಗೌರವಿಸಲಾಯಿತು. ಇತ್ತೀಚೆಗೆ ಅಗಲಿದ ವನಿತಾ ಸಮಾಜದ ಮಾಜಿ ಅಧ್ಯಕ್ಷೆ ರಶ್ಮಿ ನಿರಂಜನ ರೈ ಮಠಂತಬೆಟ್ಟು ಅವರ ಪತಿ ನಿರಂಜನ ರೈ ಮಠಂತಬೆಟ್ಟು ಮತ್ತು ಹಿರಿಯ ಸದಸ್ಯೆ ಸುಲೋಚನ ಗೋಪಾಲಕೃಷ್ಣ ಸೇಡಿಯಾಪು ಅವರ ಪತಿ ಗೋಪಾಲಕೃಷ್ಣ ಸೇಡಿಯಾಪು ಅವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯದರ್ಶಿ ಕವಿತಾ ಉಮೇಶ ಗೌಡ ಮೇಲಿನಹಿತ್ಲು ವಂದಿಸಿದರು. ವಿಜಯ ಮತ್ತು ಕವಿತಾ ಉಪಹಾರದ ವ್ಯವಸ್ಥೆ ಮಾಡಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.










