ಸಾಯ ಎಂಟರ್‌ಪ್ರೈಸಸ್ ವಿಟ್ಲ ಶಾಖೆ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಕಳೆದ ಹಲವಾರು ವರುಷಗಳಿಂದ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವೆ ನೀಡುತ್ತಿರುವ ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಾಯ ಎಂಟರ್ ಪ್ರೈಸಸ್‌ನ ವಿಟ್ಲ ಶಾಖೆಯು ಆ.29ರಂದು ಸ್ಥಳಾಂತರಗೊಂಡು ವಿಟ್ಲ ಮೇಗಿನಪೇಟೆ, ಕಾಂಚನ ಹೋಂಡಾ ಶೋರೂಮ್ ಎದುರುಗಡೆ ವಿಸ್ತಾರವಾಗಿ ವಿಶಾಲವಾದ ಪಾರ್ಕಿಂಗ್ ಸೌಲಭ್ಯಗಳೊಂದಿಗೆ ಶುಭಾರಂಭಗೊಂಡಿದೆ.


ಪುರೋಹಿತ ಉದನೇಶ್ವರ ಭಟ್ ಅಳಿಕೆ ಅವರು ಗಣಪತಿ ಹೋಮ ನೆರವೇರಿಸಿ, ಉದ್ಘಾಟನೆ ನೆರವೇರಿಸಿದರು. ಕಟ್ಟಡದ ಮಾಲಕ ಸುಬ್ರಾಯ ಪೈ, ಕೋಡಿಜಾಲ್ ಗೋವಿಂದ ಭಟ್, ಎದುರ್ಕಳ ಜಯರಾಮ್ ಭಟ್, ಕೃಷ್ಣರಾಜ, ನೋಟರಿ ವಕೀಲರು ಚರಣ್ ಕಜೆ ಮೊದಲಾದವರು ಆಗಮಿಸಿ ಶುಭ ಹಾರೈಸಿದರು.


ಸಾಯ ಎಂಟರ್ಪ್ರೈಸಸ್ 2003 ರಿಂದ ಕೃಷಿಗೆ ಅಗತ್ಯವಿರುವ ಹಾರ್ಡ್ವೇರ್ ಪೈಪು ಫಿಟ್ಟಿಂಗ್‌ಗಳು, ಬೇಲಿ ಸರಿಗೆ, ಡ್ರಿಪ್ ಇರಿಗೇಶನ್, ಸ್ಯಾನಿಟರಿ ವಸ್ತುಗಳನ್ನು ಗ್ರಾಹಕರಿಗೆ ಒದಗಿಸುತ್ತ, ಮುಂದೆ ಕೃಷಿಯಲ್ಲಿ ಕಾರ್ಮಿಕರ ಆಲಭ್ಯತೆಯನ್ನು ಮನಗಂಡು 2009ರಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ತರಿಸಿ, ಸರಕಾರಿ ಸಬ್ಸಿಡಿಯಲ್ಲಿ ಲಭ್ಯವಿರುವ ಯಂತ್ರೋಪಕರಣಗಳನ್ನು ಕೃಷಿಕರಿ ಗೆ ನೀಡುತ್ತಿದೆ. ಹುಲ್ಲು ಕತ್ತರಿಸಲು, ಮರ ಕಡಿಯಲು, ಅಡಿಕೆ ಕೊಯ್ಯಲು, ಅಡಿಕೆ ಮರಕ್ಕೆ ಮದ್ದು ಸಿಂಪಡಿಸುವ ಯಂತ್ರಗಳನ್ನು ಪರಿಚಯಿಸಿದೆ. ಸಂಸ್ಥೆಯಲ್ಲಿ ವಿಶೇಷವಾಗಿ, ಕಾರ್ಬನ್ ಫೈಬರ್ ದೋಟಿ, ಮೋಟೋ ಕಾರ್ಟ್ ಗಳು, ವೀಡರ್ಗಳು, ಎಲ್ಲಾ ಮಾದರಿಯ ಸ್ಪ್ರೇಯರ್ಗಳು, ಪೈಪ್ ,ಫೈಟ್ಯಿಂಗ್ ಗಳು ಲಭ್ಯ ವಿರುತ್ತದೆ. ಹೊಸ ಮಳಿಗೆಯಲ್ಲಿ ಮೊದಲಿನ ಎಲ್ಲಾ ಸೇವೆಗಳು ಮತ್ತಷ್ಟು ಉತ್ತಮವಾಗಿ ಹೊಸತನದಿಂದ ಕೂಡಿರುತ್ತದೆ ಹಾಗೂ ಗ್ರಾಹಕರು ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಾಲಕ ಗೋವಿಂದ ಪ್ರಕಾಶ್ ಸಾಯ ತಿಳಿಸಿದರು.


ಸಂಸ್ಥೆಯ ನಿರ್ದೇಶಕರಾದ ಪ್ರಜ್ವಲ್ ಸಾಯ, ಸಂಧ್ಯಾ ಸಾಯ, ಸೀನಿಯರ್ ಟೆಕ್ನಿಕಲ್ ಸೂಪರ್ವೈಸರ್ ರಾಜನಾರಾಯಣ, ಸೀನಿಯರ್ ಸೇಲ್ಸ್ ಸೂಪರ್ವೈಸರ್ ಗಣೇಶ್ ಭಟ್ ಬನಾರಿ, ಸೀನಿಯರ್ ಟೆಕ್ನಿಷಿಯನ್ ಗೋಪಾಲ್ ನಲ್ಕ, ಸೀನಿಯರ್ ಟೆಕ್ನಿಷಿಯನ್ ಪ್ರದೀಪ್, ಜೂನಿಯರ್ ಟೆಕ್ನಿಷಿಯನ್‌ಗಳು ಮತ್ತು ಸೇಲ್ಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿಟ್ಲ ಶಾಖೆಯ ವ್ಯವಸ್ಥಾಪಕ ಗಣೇಶ್ ನಕ್ಕರೆಕಾಡು ಸ್ವಾಗತಿಸಿದರು.

LEAVE A REPLY

Please enter your comment!
Please enter your name here