







ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡುವ ದೊಡ್ಡ ಸಂಘಟನೆ – ಸಹಜ್ ರೈ ಬಳಜ್ಜ
ಬಜರಂಗದಳ ಯುವಕರನ್ನು ದೇಶ ಪ್ರೇಮಿಗಳನ್ನಾಗಿ ಮಾಡುತ್ತದೆ – ನವೀನ್ ಮೂಡುಶೆಡ್ಡೆ
ಯುವ ಪೀಳಿಗೆಗೆ ಕ್ರೀಡೆ ಸಂಘಟನೆಗೆ ಮಾರ್ಗ- ನೀಲಂತ್ ಬೊಳುವಾರು


ಪುತ್ತೂರು: ವಿಶ್ವ ಹಿಂದೂ ಪರಿಷದ್ ಮತ್ತು ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪಿಸಲ್ಪಟ್ಟ ವಿಶ್ವ ಹಿಂದೂ ಪರಿಷದ್ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸೆ.5ರಂದು ನಡೆಯುವ 16ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆಯ ಪೂರ್ವಭಾಗಿಯಾಗಿ ಆ.29ರಂದು ಹೊನಲು ಬೆಳಕಿನ ಪುರುಷರ 65 ಕೆ.ಜಿ ವಿಭಾಗದ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.



ಆಹ್ವಾನಿತ ಪ್ರೌಢಶಾಲೆ, ಪದವಿಪೂರ್ವ ವಿದ್ಯಾರ್ಥಿಗಳ ಕಬ್ಬಡಿ ಪಂದ್ಯಾಟವನ್ನು ಬೆಳಿಗ್ಗೆ ಶರತ್ ಆಳ್ವ ಕೂರೇಲು ಉದ್ಘಾಟಿಸಿದರು. ರಾತ್ರಿ ಸಭಾ ಕಾರ್ಯಕ್ರಮದಲ್ಲಿ ವಿಜಯ ಸಾಮ್ರಾಟ್ ಸ್ಥಾಪಕ ಸಹಜ್ ರೈ ಬಳಜ್ಜ ಅವರು ಮಾತನಾಡಿ ಹೋರಾಟದ ಸಲುವಾಗಿ ಸಂಘಟನೆ ಪ್ರಾರಂಭವಾಗಿದೆ. ಪರಿವಾರ ಸಂಘಟನೆಯಲ್ಲಿ ಮೊದಲು ನನಗೆ ಅವಕಾಶ ಕೊಟ್ಟದ್ದು ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ ಅವಕಾಶ ನೀಡಿದ್ದು, ಸೇವಾ ಸುರಕ್ಷಾದ ದೇಯದಡಿಯಲ್ಲಿ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಟ ಮಾಡುವ ದೊಡ್ಡ ಸಂಘಟನೆ ಎಂದ ಅವರು ಹೆಣ್ಮಕ್ಕಳಿಗೆ ಶಕ್ತಿಯಾಗಿ ಗೋವು ರಕ್ಷಣೆ ಮಾಡುವ ಮೂಲಕ ಹಿಂದು ಸಮಾಜಕ್ಕೆ ತಮ್ಮ ತ್ಯಾಗ ನೀಡುವ ಕೆಲಸ ಬಜರಂಗದಳ ವಿಶ್ವಹಿಂದು ಪರಿಷತ್ ಮಾಡುತ್ತಿದೆ. ಇವತ್ತು ಕ್ರೀಡೆಯ ಮೂಲಕ ಸಂಘಟನೆಗೆ ಶಕ್ತಿ ಸಿಗಲಿದೆ ಎಂದರು.
ಬಜರಂಗದಳ ಯುವಕರನ್ನು ದೇಶ ಪ್ರೇಮಿಗಳನ್ನಾಗಿ ಮಾಡುತ್ತದೆ:
ಬಜಂಗದಳ ಮಂಗಳೂರು ವಿಭಾಗ ಸಹ ಸಂಯೋಜಕ ನವೀನ್ ಮೂಡುಶೆಡ್ಡೆಯವರು ಮಾತನಾಡಿ ಕಬಡ್ಡಿಯಲ್ಲಿ ನೆಲಕ್ಕೆ ಬಿದ್ದರೂ ಎದ್ದು ನಿಲ್ಲುವ ಸಾಮಾರ್ಥ್ಯ ತೋರಿಸುತ್ತದೆ. ಅದೇ ರೀತಿ ನಮ್ಮ ಸಂಘಟನೆಗೆ ಸದಾ ಶಕ್ತಿಯಾಗಿರಬೇಕು. ಇವತ್ತು ಸಾಮಾಜಿಕ ಜಾಲತಾಣದ ಮಾಯಾಜಾಲದಲ್ಲಿ ಯುವಕರನ್ನು ಒಂದು ಕಡೆ ದೇಶವಿರೋಧಿಗಳನ್ನಾಗಿ ಮಾಡಲು ಪ್ರಯತ್ನ ಪಟ್ಟರೆ ಇಡಿ ದೇಶದಾದ್ಯಂತ ಬಜರಂಗದಳ ಯುವಕರನ್ನು ದೇಶ ಪ್ರೇಮಿ, ಧರ್ಮ ಪ್ರೇಮಿಗಳನ್ನಾಗಿ ಪರಿವರ್ತನೆ ಮಾಡುವಲ್ಲಿ ಮುಂದೆ ಮುಂದೆ ಸಾಗುತ್ತದೆ ಎಂದರು.
ಯುವ ಪೀಳಿಗೆಗೆ ಕ್ರೀಡೆ ಸಂಘಟನೆಗೆ ಮಾರ್ಗ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ ಇದರ ಕೋಶಾಧಿಕಾರಿ ನೀಲಂತ್ ಬೊಳುವಾರು ಅವರು ಮತನಾಡಿ ಯುವ ಪೀಳಿಗೆಗಳನ್ನು ಸರಿಯಾದ ದಾರಿಗೆ ತರಲು ಉತ್ತಮ ಕ್ರೀಡಾ ಚಟುವಟಿಕೆ ಅಗತ್ಯ. ಈ ನಿಟ್ಟಿನಲ್ಲಿ ಬಜರಂಗಳ ಹಮ್ಮಿಕೊಂಡ ಕಬಡ್ಡಿ ಪಂದ್ಯಾಟ ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ ಎಂದರು. ಮಾಜಿ ಸೈನಿಕ ಚಂದ್ರಶೇಖರ ಗುಂಡೋಳೆ ಶುಭ ಹಾರೈಸಿದರು.

ಸನ್ಮಾನ:
ಪುತ್ತೂರು ಚಿಕ್ಕಪುತ್ತೂರಿನ ಸ್ಮಶಾನ ಪಾಲಕರಾಗಿರುವ ಸತೀಶ್ ಮಡಿವಾಳ ಮತ್ತು ಯುವ ವಿಜ್ಞಾನಿ ಅರುಣ್ ಕುಮಾರ್ ಅವರನ್ನು ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ವಿಶ್ವಹಿಂದು ಪರಿಷದ್ ಪುತ್ತೂರು ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತು ಸನ್ಮಾನ ಪತ್ರ ವಾಚಿಸಿದರು. ಯುವ ಉದ್ಯಮಿ ಕಾರ್ತಿಕ್ ತೆಂಕಪ್ಪಾಡಿ, ವಿಶ್ವಹಿಂದುಪರಿಷತ್ ನಗರ ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ, ವಿಶ್ವಹಿಂದು ಪರಿಷದ್ ಗ್ರಾಮಾಂತರ ಪ್ರಖಂಡ ಅಧ್ಯಕ್ಷ ಜಯಂತ ಕಂಬಳತಡ್ಡ, ವಿಶ್ವಹಿಂದು ಪರಿಷದ್ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್, ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಸಂಚಾಲಕ ಕಿರಣ್ ಕುಮಾರ್, ಮೊಸರು ಕುಡಿಕೆ ಉತ್ಸವ ಸಮಿತಿ ಸಹ ಸಂಚಾಲಕ ಲಕ್ಷ್ಮಣ ಬೈಲಾಡಿ, ಮಾತೃಶಕ್ತಿ ವಿಭಾಗದ ಹರಿಣಿ ಪುತ್ತೂರಾಯ, ಮೊಸರು ಕುಡಿಕೆ ಉತ್ಸವ ಸಮಿತಿ ಕಾರ್ಯದರ್ಶಿ ಶೇಷಪ್ಪ ಬೆಳ್ಳಿಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೌಶಿಕ್ ಪಡುಮಲೆ, ಸಂದೀಪ್ ಸಿಂಗಾಣಿ, ಶೈಲೇಶ್, ನಾಗೇಶ್, ಕೌಶಿಕ್ ಪಡುಮಲೆ, ಸುಪ್ರಮ, ನಿತೇಶ್, ಶರತ್, ಜಗದೀಶ್ ನೀರ್ಪಾಡಿ, ಸಂಜಯತ್, ರಾಮ್ಪ್ರಸಾದ್ ಮಯ್ಯ, ಹರೀಶ್ ದೋಳ್ಪಾಡಿ ಅತಿಥಿಗಳನ್ನು ಗೌರವಿಸಿದರು. ಮೊಸರು ಕುಡಿಕೆ ಉತ್ಸವ ಸಮಿತಿ ಉಪಾಧ್ಯಕ್ಷ ವಿಜಯ ಪಾಲಾರ್ ಸ್ವಾಗತಿಸಿದರು. ಜಯಂತ್ ವಿಶಾಕ್ ರೈ ಕಾರ್ಯಕ್ರಮ ನಿರೂಪಿಸಿದರು. ಜಯಂತ್ ಕರ್ಕುಂಜ ವಂದಿಸಿದರು.










