ಸರಿಗಮಪ ಲಿಟ್ಲ್ ಚಾಂಪಿಯನ್ ಅಶ್ಮಿತ್ ಎ.ಜೆಗೆ ಸನ್ಮಾನ : ಬಾಲ ಪ್ರತಿಭೆ ಸೋನಿಕಾ ಜನಾರ್ದನ್ ಹುಟ್ಟು ಹಬ್ಬ ಆಚರಣೆ

0

ಪುತ್ತೂರು: ಸ್ವರ ಮಾಧುರ್ಯ ಸಂಗೀತ ಬಳಗ ಪುತ್ತೂರು ಇದರ ವತಿಯಿಂದ ಬಾಲ ಪ್ರತಿಭೆ ಸೋನಿಕಾ ಜನಾರ್ದನ್‌ರವರ ಹುಟ್ಟು ಹಬ್ಬ ಹಾಗೂ ಝೀ ಕನ್ನಡ ವಾಹಿನಿಯ ಸರಿಗಮಪ ಲಿಟ್ಲ್ ಚಾಂಪಿಯನ್ ಮಂಗಳೂರಿನ ಅಶ್ಮಿತ್ ಎ.ಜೆರವರಿಗೆ ಸನ್ಮಾನ ಕಾರ್ಯಕ್ರಮ ಸುದಾನ ವಸತಿ ಶಾಲೆಯ ಎಡ್ವಾರ್ಡ್ ಸಭಾಂಗಣದಲ್ಲಿ‌ ಆ.29 ರಂದು ನಡೆಯಿತು.

ಸ್ವರ ಮಾಧುರ್ಯ ಬಳಗದ ಹಿರಿಯ ಜಾನಪದ ಕಲಾವಿದರಾದ ಚೋಮ ಬೆಟ್ಟಂಪಾಡಿ ಹಾಗೂ ಹಿರಿಯ ಸಂಗೀತ ಕಲಾವಿದ ಬಾಬಣ್ಣ ಪುತ್ತೂರು ಅವರು ಅಶ್ಮಿತ್ ಎ. ಜೆ ಅವರಿಗೆ ಫಲ ಪುಷ್ಪ ಶಾಲು ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ವಕೀಲರಾದ ಕುಂಬ್ರ ದುರ್ಗಾ ಪ್ರಸಾದ್ ರೈ ಅವರು ಶುಭಾಶಯದ ಮಾತುಗಳನ್ನಾಡಿದರು. ಎ. ವಿ. ಜಿ ಸಂಸ್ಥೆಯ ಅಧ್ಯಕ್ಷರಾದ ಕಳುವಾಜೆ ವೆಂಕಟ್ರಮಣ ಗೌಡ, ನಾಟಿ ವೈದ್ಯ ಚಿದಾನಂದ್ ಮೂಲೆತ್ತಮಜಲು, ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಜಿ ಜಗನ್ನಾಥ ರೈ, ಜನ್ಮ ಕ್ರಿಯೇಷನ್ ಪುತ್ತೂರು ಇದರ ಡಾ. ಹರ್ಷ ಕುಮಾರ್ ರೈ ಮಾಡಾವು, ರೋಟರಿ ಅಧ್ಯಕ್ಷ ಶಾಕೀರ್, ಸುಳ್ಯ ನಗರಭಿವೃದ್ಧಿ ಪ್ರಧಿಕಾರದ ಅಧ್ಯಕ್ಷ ಮುಸ್ತಫಾ, ಅಶ್ಮಿತ್ ಎ ಜೆ ಅವರ ತಂದೆ ವಕೀಲರಾದ ಜಯರಾಮ್, ತಾಯಿ ಆಶಾ ಹಾಗೂ ಸೋನಿಕಾ ಜನಾರ್ಧನ್ ಕುಟುಂಬ ದವರು ಉಪಸ್ಥಿತರಿದ್ದರು.

ಇದೆ ಸಂದರ್ಭದಲ್ಲಿ ಆಲಂಕಾರಿನ ದಿ. ಲಿಂಗ ಅಜಿಲ ಸಹೋದರರ ಕುಟುಂಬದ ವತಿಯಿಂದಲೂ ಅಶ್ಮಿತ್ ಎ ಜೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಾಟಿ ವೈದ್ಯ ಚಿದಾನಂದ್ ಅವರು ಸನ್ಮಾನಿಸಿದರು. ಸೋನಿಕಾರವರ ತಾಯಿ ಶಿಕ್ಷಕಿ ಪ್ರಮೀಳಾ ಜನಾರ್ದನ್ ಸ್ವಾಗತಿಸಿ, ತಂದೆ ಎಪಿಪಿ ಜನಾರ್ಧನ್ ವಂದಿಸಿದರು. ಖ್ಯಾತ ಗಾಯಕ ಬಾಲ ಕೃಷ್ಣ ನೆಟ್ಟರ್ ಕಾರ್ಯಕ್ರಮ ನಿರೂಪಿಸಿದರು.

ಸೋನಿಕಾ ಜನಾರ್ದನ್‌ರವರ ಹುಟ್ಟು ಹಬ್ಬದ ಪ್ರಯುಕ್ತ ಮಧ್ಯಾಹ್ನ ಬೀರಮಲೆ ಪ್ರಜ್ಞಾ ಆಶ್ರಮದಲ್ಲಿ ವಿಶೇಷ ಮಕ್ಕಳೊಂದಿಗೆ ಸೋನಿಕಾ ಜನಾರ್ಧನ್ ಕುಟುಂಬದವರು ಸಹ ಭೋಜನ ನೆರೆವೇರಿಸಿದರು. ಗಾಯಕ ಬಾಲಕೃಷ್ಣನೆಟ್ಟಾರ್,ಗಾಯಕಿ ಭೂಮಿಕಾ ಗೋಪಾಲ್ ಮೂಡಬಿದ್ರಿ, ಗಾಯಕ ಮಿಥುನ್‌ರಾಜ್ ವಿದ್ಯಾಪುರ, ಕುಶಿತ ಬಿ ಹಾಗೂ ತಂಡದವರಿಂದ ಸಂಗೀತ ರಸಮಂಜರಿ ನಡೆಯಿತು. ಈ ಸಂದರ್ಭದಲ್ಲಿ ಅಶ್ಮಿತ್ ಎ.ಜೆಯವರ ಡಾ.ರಾಜ್‌ಕುಮಾರ್‌ರವರ ನಾದಮಯ ಹಾಡನ್ನು ಹಾಡುವ ಮೂಲಕ ಮನರಂಜಿಸಿದರು.

LEAVE A REPLY

Please enter your comment!
Please enter your name here