ಕಾವು: ಪುತ್ತಿಲ ಪರಿವಾರದಿಂದ ರೂ.20 ಸಾವಿರ ಚಿಕಿತ್ಸಾ ನೆರವು

0

ಕಾವು: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಾಡ್ನೂರು ಗ್ರಾಮದ ಅಶ್ವತ್ತಡಿ ನಿವಾಸಿ ಈಶ್ವರ ಆಚರ‍್ಯರವರ ವೈದ್ಯಕೀಯ ಖರ್ಚಿಗಾಗಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಇದರ ಕಾವು ಘಟಕದ ವತಿಯಿಂದ ರೂ.20 ಸಾವಿರ ಚಿಕಿತ್ಸಾ ನೆರವು ಹಸ್ತಾಂತರ ಮಾಡಲಾಯಿತು.

ವಿದ್ಯುತ್ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಈಶ್ವರ ಆಚರ‍್ಯರವರು ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿ ಅವರ ಕುಟುಂಬವು ಸಂಕಷ್ಟದಲ್ಲಿರುವುದನ್ನು ಮನಗಂಡ ಪುತ್ತಿಲ ಪರಿವಾರ ಕಾವು ಘಟಕದ ಸದಸ್ಯರು ವಾಟ್ಸಾಪ್ ಸಂದೇಶದ ಮೂಲಕ ಸಹಾಯಧನವನ್ನು ಒಟ್ಟುಮಾಡಿ ಪುತ್ತಿಲ ಪರಿವಾರ ಟ್ರಸ್ಟ್ ಮೂಲಕ ಈಶ್ವರ ಆಚರ‍್ಯರವರ ಚಿಕಿತ್ಸೆಯ ನೆರವಿಗಾಗಿ ಅವರ ಕುಟುಂಬಕ್ಕೆ ಸಹಾಯಧನವನ್ನು ಹಸ್ತಾಂತರ ಮಾಡಲಾಯಿತು.ಪುತ್ತಿಲ ಪರಿವಾರ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲರವರು ಈಶ್ವರ ಆಚರ‍್ಯರವರ ಪತ್ನಿ ಹರಿಣಾಕ್ಷಿಯವರಿಗೆ ಸಹಾಯಧನದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಟ್ರಸ್ಟ್‌ನ ತಾಲೂಕು ಪದಾಧಿಕಾರಿಗಳಾದ ಉಮೇಶ್ ಕೋಡಿಬೈಲು, ರವಿಪ್ರಸಾದ್ ರೈ ಕಾವು, ಕಾವು ಘಟಕದ ಅಧ್ಯಕ್ಷ ಹರೀಶ್ ಕುಂಜತ್ತಾಯ, ಸದಸ್ಯರುಗಳಾದ ಅನಂತಕೃಷ್ಣ ನಾಯಕ್, ಯೋಗೀಶ್ ಕಾವು, ಅಮೃತಲಿಂಗಂ ಕಾವು, ಸುಧೀಂದ್ರ ಕಾವು, ರವಿಕಿರಣ ಕಾವು, ಅಖಿಲೇಶ್ ಕಾಮತ್, ಚಿದಾನಂದ ಆಚರ‍್ಯ ಸಸ್ಪೆಟ್ಟಿ, ಕಮಲಾಕ್ಷ ಕಾವು, ಗಣೇಶ ಪೂವಂದೂರು ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here