







ಕಾವು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಇದರ ಕಾವು ಘಟಕದ ನೇತೃತ್ವದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಕಾರದೊಂದಿಗೆ ಒಂದು ದಿನದ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರವು ಸೆ.6ರಂದು ಕಾವು ಸಮುದಾಯ ಭವನದಲ್ಲಿ ನಡೆಯಲಿದೆ. ಸೆ.1ರಂದು ಸಂಜೆ ಕಾವು ಹರೀಶ್ ಕುಂಜತ್ತಾಯರವರ ಮನೆಯಲ್ಲಿ ಪುತ್ತಿಲ ಪರಿವಾರ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲರವರು ಶಿಬಿರದ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.


ಶಿಬಿರವು ಸೆ.6ರಂದು ಬೆಳಿಗ್ಗೆ ಗಂಟೆ 9.30ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು, ಶಿಬಿರದಲ್ಲಿ ಹೊಸ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ, ಬಯೋಮೆಟ್ರಿಕ್ ಅಪ್‌ಡೇಟ್ ಸೇವೆಗಳು ಇರಲಿದೆ. ಬೆಳಿಗ್ಗೆ ನಡೆಯಲಿರುವ ಶಿಬಿರದ ಉದ್ಘಾಟನೆಯಲ್ಲಿ ಪುತ್ತಿಲ ಪರಿವಾರದ ಸಂಚಾಲಕ ಅರುಣ್ ಕುಮಾರ್ ಪುತ್ತಿಲರವರು ಸಭಾಧ್ಯಕ್ಷತೆ ವಹಿಸಲಿದ್ದಾರೆ.



ರೋಟರಿ ಕ್ಲಬ್ ಈಸ್ಟ್ ಅಧ್ಯಕ್ಷ ರೊ. ರವಿಕುಮಾರ್ ರೈ ಕೆದಂಬಾಡಿ ಮಠರವರು ಶಿಬಿರ ಉದ್ಘಾಟಿಸಲಿದ್ದಾರೆ. ಕಾವು ಅಂಚೆ ಕಛೇರಿಯ ಸೌಮ್ಯ ಬಿ, ಪುತ್ತಿಲ ಪರಿವಾರ ಕಾವು ಘಟಕದ ಅಧ್ಯಕ್ಷ ಹರೀಶ್ ಕುಂಜತ್ತಾಯ, ತಾಲೂಕು ಧ್ವನಿ ಮತ್ತು ಬೆಳಕು ಇದರ ಅಧ್ಯಕ್ಷ ಯೋಗೀಶ್ ಕಾವುರವರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ.










