






6.55 ಲಕ್ಷ ರೂ.ನಿವ್ವಳ ಲಾಭ | ಶೇ.25 ಡಿವಿಡೆಂಡ್, ಲೀಟರ್ ಹಾಲಿಗೆ 1.06 ರೂ.ಬೋನಸ್ ಘೋಷಣೆ


ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಏಣಿತ್ತಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಆ.29ರಂದು ಬೆಳಗ್ಗೆ ಸಂಘದ ಆವರಣದಲ್ಲಿ ನಡೆಯಿತು.



ಅಧ್ಯಕ್ಷತೆ ವಹಿಸಿದ್ದ ಸಂಘದ ಆಡಳಿತಾಧಿಕಾರಿಯೂ ಆಗಿರುವ ದ.ಕ.ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಪಿ.ಅವರು ಮಾತನಾಡಿ, 2025-26ನೇ ಸಾಲಿನಲ್ಲಿ ಸಂಘಕ್ಕೆ 6,55,445.92 ರೂ.ಲಾಭ ಬಂದಿದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.25 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 1.06 ರೂ.ಬೋನಸ್ ನೀಡಲಾಗುವುದು ಎಂದರು.
ಸಂಘದಲ್ಲಿ 194 ಮಂದಿ ಸದಸ್ಯರಿದ್ದು 33,650 ರೂ.ಪಾಲು ಬಂಡವಾಳವಿದೆ. 79 ಸದಸ್ಯರಿಂದ ದಿನವಹಿ 800 ಲೀ.ಹಾಲು ಖರೀದಿಯಾಗುತ್ತಿದೆ. ವರದಿ ವರ್ಷದಲ್ಲಿ ಸಂಘ ಉತ್ತಮ ಲಾಭಗಳಿಸಿದೆ ಎಂದ ಅವರು, ಹಾಲಿನ ಗುಣಮಟ್ಟ, ನಂದಿನಿ ಪಶು ಆಹಾರ ಬಳಕೆ, ಒಕ್ಕೂಟದಿಂದ ನೀಡುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಪುಷ್ಪಾ ವರದಿ ವಾಚಿಸಿದರು. ಹಾಲು ಪರೀಕ್ಷಕಿ ಹರಿಣಾಕ್ಷಿ ಸ್ವಾಗತಿಸಿದರು. ವೇದಾವತಿ ಪಿ.ಯಸ್.ವಂದಿಸಿದರು. ಜಯಂತಿ ಪ್ರಾರ್ಥಿಸಿದರು.










