ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿಗೆ ಪ್ರೊಫೆಸರ್ ಆಫ್ ಪ್ರಾಕ್ಟಿಸ್ ಗೌರವ

0

ಪುತ್ತೂರು: ಮಂಗಳೂರು ಹೈನುಗಾರಿಕೆ ಹಾಗೂ ಕೋಳಿ ಸಾಕಾಣಿಕೆ ಉದ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಮಹತ್ವದ ಸೇವೆ ಮತ್ತು ಕೊಡುಗೆಯನ್ನು ಪರಿಗಣಿಸಿ ಮಂಗಳೂರಿನ ಖ್ಯಾತ ಪಶು ವೈದ್ಯಕೀಯ ತಜ್ಞ ಡಾ. ಸುಶಾಂತ್ ರೈ ಬೆಳ್ಳಿಪಾಡಿ ಅವರಿಗೆ ಉತ್ತರ ಪ್ರದೇಶದ ಬರೇಲಿಯ ಇಝತ್ ನಗರದಲ್ಲಿರುವ ಪ್ರತಿಷ್ಠಿತ ಇಂಡಿಯನ್ ವೆಟರ್ನರಿ ರಿಸರ್ಚ್ ಇನ್‌ಸ್ಟಿಟ್ಯೂಟ್ ವತಿಯಿಂದ ಪ್ರೊಫೆಸರ್‌ಆಫ್ ಪ್ರಾಕ್ಟಿಸ್ ಸ್ಥಾನಮಾನ ನೀಡಿ ಗೌರವಿಸಲಾಗಿದೆ.


ಬರೇಲಿಯ ಐವಿಆರ್‌ಐ ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಗೌರವ ಪ್ರದಾನ ಮಾಡಲಾಯಿತು. ಐಸಿಎಆರ್‌ನ ಉಪ ಮಹಾನಿರ್ದೇಶಕ ಹಾಗೂ ಐವಿಆರ್‌ಐ ನಿರ್ದೇಶಕ ರಾಘವೇಂದ್ರ ಭಟ್, ಜಂಟಿ ನಿರ್ದೇಶಕ ಡಾ. ಮೆಂದಿರಟ್ಟ ಮತ್ತಿತರರು ಉಪಸ್ಥಿತರಿದ್ದರು.


ಮಂಗಳೂರಿನ ರೈಸನ್ಸ್ ನ್ಯೂಟ್ರಿಷನ್ಸ್ ಸಂಸ್ಥೆಯ ಆಡಳಿತ ಪಾಲುದಾರ ರಾಗಿರುವ ಡಾ. ಸುಶಾಂತ್ ರೈ ಅವರು ಹೈನುಗಾರಿಕೆ, ಕೋಳಿ ಸಾಕಾಣಿಕೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ತೂರು ಬೆಳ್ಳಿಪ್ಪಾಡಿ ಮೂಲದವರಾದ ಇವರು ವೆಟರ್ನರಿ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿದ್ದು ಕರ್ನಾಟಕ ವೆಟರ್ನರಿ ಅನಿಮಲ್ ಆಂಡ್ ಫಿಶರೀಸ್ ಸೈನ್ಸಸ್ ಯೂನಿವರ್ಸಿಟಿ ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಕರ್ನಾಟಕ ಪೌಲ್ಟ್ರಿ ಫಾರ್ಮರ್ಸ್ ಆ್ಯಂಡ್ ಬೀಡರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ.



LEAVE A REPLY

Please enter your comment!
Please enter your name here