






ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ, ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸೆ.5 ಹಾಗೂ 12 ರಂದು ಸೋಣ ಶನಿವಾರ ಆಚರಣೆ ನಡೆಯಲಿರುವುದು.
ಶ್ರೀ ಕ್ಷೇತ್ರದಲ್ಲಿ ಬಲಿವಾಡು ಸೇವೆ(ರೂ.100), ಹಾಲು ಪಾಯಸ ದೇವರಿಗೆ(ರೂ.100), ವಿಶೇಷ ಸತ್ಯನಾರಾಯಣ ಪೂಜೆ(ರೂ.150) ಹಾಗೂ
ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಜರಗಲಿರುವುದು.
ಪ್ರತಿನಿತ್ಯ ನಾಗಬನದಲ್ಲಿ ಬೆಳಿಗ್ಗೆ 9.30 ಗಂಟೆಗೆ ನಾಗತಂಬಿಲ ಸೇವೆ ನಡೆಯಲಿದೆ. ಭಕ್ತರು ಈ ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ 9980223709 |7795711499 ನಂಬರಿಗೆ ಸಂಪರ್ಕಿಸಬೇಕಾಗಿ ವಿನಂತಿ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















