






ಬಜತ್ತೂರು: ಶೌರ್ಯ ವಿಪತ್ತು ನಿರ್ವಹಣಾ ತಂಡ, ಉಪ್ಪಿನಂಗಡಿ–ಬಜತ್ತೂರು ಘಟಕದ ವತಿಯಿಂದ ಮಣ್ಣಿಮೇರು ನಿವಾಸಿ ಜಾನಕಿ ಎಂಬ ಒಂಟಿ ತಾಯಿಗಾಗಿ ನಿರ್ಮಿಸಲಾದ ನೂತನ ಮನೆಯನ್ನು ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು.


ಮುಖ್ಯ ಅತಿಥಿಗಳಾಗಿ ವೀರಕಟ್ಟೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿಯ ನಾರಾಯಣ ಪೂಜಾರಿ, ತುಳುನಾಡ ತುಡರ್ ಆರೋಗ್ಯ ಸೇವಾ ಟ್ರಸ್ಟ್ ಕೋಶಾಧಿಕಾರಿ ಸುಮನ್ ನೀರೆಕಟ್ಟೆ, ಬಜತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಪಂರ್ದಾಜೆ, ಕಾಂಚನ ಒಕ್ಕೂಟದ ಅಧ್ಯಕ್ಷ ದಿನೇಶ್ ಮೇಲೂರು ಹಾಗೂ ಮಾಜಿ ಗ್ರಾ.ಪಂ. ಸದಸ್ಯೆ ಚಂಪಕ್ಕ ಉಪಸ್ಥಿತರಿದ್ದರು.



ಶುಭನುಡಿಗಳ ಮೂಲಕ ಸೇವೆಗೆ ಮೆಚ್ಚುಗೆ
ಕಾರ್ಯಕ್ರಮದ ಉದ್ಘಾಟಕ ವಿವೇಕ್ ವಿನ್ಸೆಂಟ್ ಪಾಯ್ಸ್ ಅವರು ಮಾತನಾಡಿ, ನೂತನ ಮನೆಯಲ್ಲಿ ಭಜನಾ ಕಾರ್ಯಕ್ರಮ ನಡೆಸಿ ಬಳಿಕ ಮನೆಯನ್ನು ಹಸ್ತಾಂತರಿಸಿರುವುದು ಅತ್ಯಂತ ಸಂತೋಷ ತಂದಿದೆ ಎಂದರು. ಶೌರ್ಯ ತಂಡವು ಮಾಡುತ್ತಿರುವ ಸೇವಾ ಕಾರ್ಯಗಳು ಜಿಲ್ಲೆಗೆ ಮಾದರಿಯಾಗಿವೆ ಎಂದು ಶ್ಲಾಘಿಸಿ, ತಂಡವು ಇನ್ನಷ್ಟು ಉತ್ತಮ ಸೇವೆ ಸಲ್ಲಿಸಿ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪುತ್ತೂರು ಇದರ ಯೋಜನಾಧಿಕಾರಿ ಶಶಿಧರ್ ಎಂ,ವಳಾಲು ಕರ್ನಾಟಕ ಪಬ್ಲಿಕ್ ಸ್ಕೂಲ್ ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಗೌಡ ಶುಭಹಾರೈಸಿದರು.
ಜಾನಕಿ ಅವರಿಗೆ ವಿಶೇಷ ಸಹಕಾರ
ಈ ಸಂದರ್ಭ ಅವರು ಜಾನಕಿ ಅವರ ನೂತನ ಮನೆಗೆ ಮಂಜುನಾಥ ದೇವರ ಭಾವಚಿತ್ರ, ಸ್ಟ್ಯಾಂಡ್ ಹಾಗೂ ದೀಪವನ್ನು ನೀಡಿ, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಸೇವಾ ಸದಸ್ಯರಿಗೆ ಗೌರವ
ಮನೆ ನಿರ್ಮಾಣ ಕಾರ್ಯದಲ್ಲಿ ಶ್ರಮಿಸಿದ ಶೌರ್ಯ ತಂಡದ ಸದಸ್ಯರಾದ ಮಮತಾ ಆಲಾಜೆ, ಮನೋಜ್ ಮಣಿಕ್ಕಳ, ಸುಜಾತಾ ರೆಂಜಾಳ, ಬೇಬಿ ಬಾರಿಕೆ, ಗೋಪಾಲ ಬಾರಿಕೆ, ಸದಾನಂದ ಶಿಬಾರ್ಲ, ಸುರೇಶ್ ಶಿಬಾರ್ಲ, ಹರೀಶ್ ಓರಂಬೋಡಿ, ರವಿ ಓರಂಬೋಡಿ, ಭವ್ಯ ಪಂಜಳ, ವಾಸುದೇವ್ ರೆಂಜಾಳ, ರಾಜೇಶ್ ಪೇಜಕ್ಕಳ ಹಾಗೂ ಇಂದಿರಾ ಪೊರುಳಿ ಅವರನ್ನು ನೆನಪಿನ ಕಾಣಿಕೆ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಗ್ರಾಮಸ್ಥರಾದ ಹರೀಶ್ ಪೆಲತ್ರೋಡಿ, ಸತೀಶ್ ರೆಂಜಾಳ ಅವರಿಗೆ ಗೌರವ ಸಲ್ಲಿಸಲಾಯಿತು.










