ಆದರ್ಶ ವಿವಿದೋದ್ದೇಶ ಸಹಕಾರ ಸಂಘದ ಸವಣೂರಿನ ಸ್ವಂತ ನಿವೇಶನದಲ್ಲಿ ಧಾರ್ಮಿಕ ಪೂಜಾ ಕಾರ್‍ಯದೊಂದಿಗೆ ನೂತನ ಕಟ್ಟಡ ಉದ್ಘಾಟನೆ

0

6 ಕೋಟಿ ರೂ. ವೆಚ್ಚದ ಸುಸಜ್ಜಿತವಾದ ಕಟ್ಟಡ ನಿರ್ಮಾಣ- ಸೀತಾರಾಮ ರೈ

ಪುತ್ತೂರು: ಆದರ್ಶ ವಿವಿದೋದ್ದೇಶ ಸಹಕಾರ ಸಂಘದ ಸವಣೂರಿನ ಸ್ಬಂತ ನಿವೇಶನದಲ್ಲಿ ಧಾರ್ಮಿಕ ಪೂಜಾ ವಿಧಾನ ಕಾರ್ಯಗಳೊಂದಿಗೆ ನೂತನ ಕಟ್ಟಡ ಸೆ. 4 ರಂದು ಶುಭಾರಂಭಗೊಂಡಿತು. ಆದರ್ಶ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಹಕಾರರತ್ನ ಸವಣೂರು ಕೆ. ಸೀತಾರಾಮ ರೈ ಅವರು ಕಾರ್‍ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು, ಬಳಿಕ ಮಾತನಾಡಿದ ಅವರು ತಂತ್ರಿಯವರಾದ ವಿಜಯಕುಮಾರ್ ಪದ್ಮುಂಜ ಇವರ ನೇತೃತ್ವದಲ್ಲಿ ಪುರೋಹಿತರಾದ ಶಿವಕುಮಾರ್ ಭಟ್ ಎಡಮಂಗಲ ಇವರ ಪೌರೋಹಿತ್ವದಲ್ಲಿ ಧಾರ್ಮಿಕ ಪೂಜಾ ಕಾರ್‍ಯಗಳೊಂದಿಗೆ ಕಟ್ಟಡದ ಉದ್ಘಾಟನೆಯನ್ನು ನೇರವೇರಿಸಿದ್ದೇವೆ, ಕಟ್ಟಡದ ಪೂರ್ಣ ಕಾಮಗಾರಿ ತಿಂಗಳ ಒಳಗೆ ಮುಗಿಯಲಿದ್ದು, ಮತ್ತೇ ಅಧಿಕೃತ ಉದ್ಘಾಟನೆಯನ್ನು ಮಾಡಲಾಗುತ್ತದೆ ಎಂದು ಹೇಳಿದ ಸೀತಾರಾಮ ರೈ ಅವರು ಸವಣೂರಿನಲ್ಲಿ ಸುಮಾರು ಒಂದು ಎಕ್ರೆ ವಿಸ್ತೀರ್ಣದಲ್ಲಿ ಸುಸಜ್ಜಿತವಾಗಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ.

ನೆಲಮಹಡಿಯಲ್ಲಿ ಆದರ್ಶ ವಿವಿದೊದ್ದೇಶ ಸಹಕಾರ ಸಂಘದ ಸವಣೂರು ಶಾಖಾ ಕಚೇರಿ ಮತ್ತು ಸುಸಜ್ಜಿತವಾದ ಸಸ್ಯಹಾರಿ ಹೋಟೆಲ್ ಇರುತ್ತದೆ, ಪ್ರಥಮ ಮಹಡಿಯಲ್ಲಿ 8 ಅಂಗಡಿ ಕೋಣೆಗಳು ಇದ್ದು, ಇದರಲ್ಲಿ ವೈದ್ಯರು, ಇಂಜಿನಿಯರ್‌ಗಳ ಕಚೇರಿಗೆ ಯೋಗ್ಯವಾದ ಜಾಗ ಸಹಿತ ವಾಣಿಜ್ಯ ವ್ಯವಹಾರಗಳನ್ನು ನಡೆಸುವವರಿಗೆ ಅವಕಾಶ ಇದೆ. ಎರಡನೇಯ ಮಹಡಿಯಲ್ಲಿ ಆದರ್ಶ ವಿವಿದೋದ್ದೇಶ ಸಹಕಾರ ಸಂಘದ ಕೇಂದ್ರ ಕಚೇರಿ ಇರಲಿದೆ. ಮೂರನೇ ಮಹಡಿಯಲ್ಲಿ 750 ರಿಂದ 850 ಮಂದಿ ಭಾಗವಹಿಸುವ ಸುಂದರವಾದ ಹಾಲ್ ಇರಲಿದೆ, ಇದರಲ್ಲಿ ಮದುವೆ ಸಹಿತ ಯಾವುದೇ ಸಮಾರಂಭವನ್ನು ನಡೆಸಲು ಸೂಕ್ತವಾದ ಸ್ಥಳಾವಕಾಶ ಇದೆ ಎಂದು ಹೇಳಿದ ಅವರು ಜೊತೆಗೆ ನೂರಕ್ಕೂ ಹೆಚ್ಚು ವಾಹನಗಳು ನಿಲುಗಡೆಯಾಗುವ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದ ಸೀತಾರಾಮ ರೈ ಅವರು 25 ವರ್ಷಗಳ ಹಿಂದೆ ನಾನು ಆದರ್ಶ ವಿವಿದೋಧೇಶ ಸಹಕಾರ ಸಂಘವನ್ನು ಪ್ರಾರಂಭ ಮಾಡುವಾಗ ಸಂಸ್ಥೆಯ ಮಹಾಪ್ರಬಂಧಕರಾಗಿದ್ದವರು ನಡುಬೈಲು ಸುಂದರ ಶೆಟ್ಟಿ ಅವರು, ಜೊತೆಗೆ ನನ್ನ ಸಹೋದರ ಚೊಕ್ಕಡಿ ಬಾಲಕೃಷ್ಣ ರೈ ಹಾಗೂ ಸವಣೂರು ಸುಂದರ ರೈ ಅವರ ಸಹಕಾರದಿಂದ ಸಂಸ್ಥೆ ಆರಂಭವಾಯಿತು, ಇದೀಗ ಸಂಸ್ಥೆಯು 25 ನೇ ವರ್ಷದ ಬೆಳ್ಳಿ ಹಬ್ಬ ಸಂಭ್ರಮವನ್ನು ಕಂಡಿದೆ.

ಇದರ ನೆನಪಲ್ಲಿ ಸಂಘಕ್ಕೆ ಸವಣೂರಿನಲ್ಲಿ ಒಂದು ಎಕ್ರೆ ವಿಸ್ತೀರ್ಣದಲ್ಲಿ ಸುಂದರವಾದ ಕಟ್ಟಡವನ್ನು ನಿರ್ಮಿಸಲಾಗಿದೆ. ಇದು ಸವಣೂರಿಗೆ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ಪ್ರಥಮ ಬೋರ್ಡ್ ಮೀಟಿಂಗ್ ಮತ್ತು ಸಿಬ್ಬಂಧಿಗಳ ಸಭೆ ಸವಣೂರು ಸೀತಾರಾಮ ರೈ ಅಧ್ಯಕ್ಷತೆಯಲ್ಲಿ ಆದರ್ಶ ವಿವಿದೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿ ಮತ್ತು ಸಂಸ್ಥೆಯ ಎಲ್ಲಾ ಸಿಬ್ಬಂಧಿಗಳ ಪ್ರಥಮ ಸಭೆಯನ್ನು ಸೆ. 4 ರಂದು ಬೆಳಿಗ್ಗೆ ನಡೆಸಲಾಯಿತು.

ಸಹಕಾರರತ್ನ ಸೀತಾರಾಮ ರೈ ಅವರಿಂದ ಸಮಾಜ ಬೆಳಗಿದೆ:
ಪದ್ಮುಂಜ ವಿಜಯಕುಮಾರ್ ಭಟ್ ಅವರು ಮಾತನಾಡಿ ಸವಣೂರು ಸೀತಾರಾಮ ರೈ ದಾಂಪತ್ಯ ಜೀವನದ 50 ವರ್ಷಗಳನ್ನು ಪೂರೈಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಅನುಭವವನ್ನು ಪಡೆದುಕೊಂಡು ಬಂದಿರುವ ಸವಣೂರು ಸೀತಾರಾಮ ರೈ ಅವರು ಆದರ್ಶ ವಿವಿದೋದ್ದೇಶ ಸಹಕಾರ ಸಂಘವನ್ನು ಸ್ಥಾಪಿಸಿ, 25 ವರ್ಷಗಳನ್ನು ಪೂರೈಸಿರುವುದು ತುಂಬಾ ಸಂತಸದ ವಿಚಾರವಾಗಿದ್ದು, ಸಹಕಾರ ಸಂಸ್ಥೆಯ ಸ್ಥಾಪನೆಯಿಂದ ನೂರಾರು ಮಂದಿಗೆ ಉದ್ಯೋಗ ದೊರೆತಿದೆ, ಸಹಕಾರ ಮನೋಭಾವದಿಂದಿಗೆ ಸಾಮಾಜಿಕ, ಧಾರ್ಮಿಕ ಚಿಂತನೆಯ ವ್ಯಕ್ತಿತ್ವದ ಸೀತಾರಾಮ ರೈ ಅವರಿಂದ ಸಮಾಜ ಬೆಳಗಿದೆ ಎಂದು ಆರ್ಶೀವಚನವನ್ನು ನೀಡಿದರು.

ಧಾರ್ಮಿಕ ಕಾರ್‍ಯಕ್ರಮಗಳು
ನೂತನ ಕಟ್ಟಡದಲ್ಲಿ ಧಾರ್ಮಿಕ ಕಾರ್‍ಯಕ್ರಮಗಳು ತಂತ್ರಿ ವಿಜಯಕುಮಾರ್ ಭಟ್ ಪದ್ಮುಂಜರವರ ನೇತ್ರತ್ವದಲ್ಲಿ ಸೆ. 3 ರಂದು ಸಂಜೆ5.30ಕ್ಕೆ ಆರಂಭಗೊಂಡಿತು. ಧಾರ್ಮಿಕ ಕಾರ್‍ಯಕ್ರಮದಲ್ಲಿ ಆಚಾರ್ಯವರಣ, ಪಂಚಗವ್ಯ ಪುಣ್ಯಾಹ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತುಹವನ, ಸುದರ್ಶನ ಹವನ, ವಾಸ್ತು ಪೂಜೆ, ವಾಸ್ತಬಲಿ ನಡೆಯಿತು. ಸೆ. 4 ರಂದು ಪ್ರಾತ:ಕಾಲ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಪಂಚಗವ್ಯ, ಪುಣ್ಯಾಹ, 12 ತೆಂಗಿನ ಕಾಯಿ ಮಹಾಗಣಪತಿ ಹವನ ನಡೆಯಿತು.



ಆದರ್ಶ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಹಕಾರರತ್ನ ಸವಣೂರು ಸೀತಾರಾಮ ರೈ ಸ್ವಾಗತಿಸಿದರು, ಸೀತಾರಾಮ ರೈ ಅವರ ಪತ್ನಿ ಕಸ್ತೂರಿಕಲಾ ಎಸ್ ರೈ ಸವಣೂರು, ಸಂಘದ ಉಪಾಧ್ಯಕ್ಷ ಎನ್ .ಸುಂದರ ರೈ ಸವಣೂರು, ನಿರ್ದೇಶಕರುಗಳಾದ ಮಹಾಬಲ ರೈ ಬೊಳಂತೂರು, ಅಶ್ವಿನ್ ಎಲ್ ಶೆಟ್ಟಿ ಸವಣೂರು, ಎಸ್.ಎಂ.ಬಾಪು ಸಾಹೇಬ್ ಸುಳ್ಯ, ರವೀಂದ್ರನಾಥ ಶೆಟ್ಟಿ ಕೇನ್ಯ, ಎನ್ ರಾಮಯ್ಯ ರೈ ಕೆದಂಬಾಡಿ, ಚಿಕ್ಕಪ್ಪ ನಾಕ್ ಅರಿಯಡ್ಕ, ಸೀತಾರಾಮ ಶೆಟ್ಟಿ ಮಂಗಳೂರು, ವಿ.ವಿ.ನಾರಾಯಣ ಭಟ್ ನರಿಮೊಗರು, ಜೈರಾಜ್ ಭಂಡಾರಿ ನೊಣಾಲು, ಮಹಾದೇವ ಎಂ, ಮಂಗಳೂರು, ಪೂರ್ಣಮಾ ಎಸ್ ಆಳ್ವ ಮಂಗಳೂರು, ಯಮುನಾ ಎಸ್ ರೈ ಗುತ್ತುಪಾಲ್, ರಶ್ಮಿ ಆಶ್ವಿನ್ ಶೆಟ್ಟಿ ಸವಣೂರು, ಪುತ್ತೂರಿನ ಹಿರಿಯ ಉದ್ಯಮಿ ಮಾಸ್ಟರ್ ಫ್ಲಾನರಿಯ ಮಾಲಕ ಎಸ್.ಕೆ. ಆನಂದ್, ಎಸ್‌ಸಿಡಿಸಿಸಿ ಬ್ಯಾಂಕ್ ನಿವೃತ್ತ ಅಧಿಕಾರಿ ವಿಶ್ವನಾಥ್ ನಾಯರ್, ರಬ್ಬರ್ ಮಂಡಳಿಯ ನಿವೃತ್ತ ಉಪಾಯುಕ್ತ ಬಾಲಕೃಷ್ಣ, ಉದ್ಯಮಿ ಸುಜಿತ್ ಕುಮಾರ್ ಶೆಟ್ಟಿ ನಡುಬೈಲು, ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದುರವರು ಉಪಸ್ಥಿತರಿದ್ದರು. ಸಂಘದ ಮಹಾಪ್ರಬಂಧಕ ವಸಂತ ಜಾಲಾಡಿ, ಸಹಾಯಕ ಮಹಾಪ್ರಬಂಧಕ ಸುನಾದ್‌ರಾಜ್ ಶೆಟ್ಟಿ ಮತ್ತು ಸಂಘದ ವಿವಿಧ ಶಾಖಾ ಮೇನೇಜರ್ ಮತ್ತು ಸಿಬ್ಬಂಧಿಗಳು ಸಹಕರಿಸಿದರು. ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಏರ್ಪಡಿಸಲಾಗಿತ್ತು.

ಸಹಕಾರರತ್ನ ಸವಣೂರು ಸೀತಾರಾಮ ರೈ
ಅಧ್ಯಕ್ಷರು- ಆದರ್ಶ ವಿವಿಧೋದ್ದೇಶ ಸಹಕಾರ ಸಂಘ

ಸವಣೂರಿನ ಸಮಗ್ರ ಅಭಿವೃದ್ಧಿಗೆ ಪೂರಕ
ಸವಣೂರು ಸಮಗ್ರ ಅಭಿವೃದ್ಧಿಯಾಗ ಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು, ಸವಣೂರಿಗೆ ಹತ್ತು ಹಲವು ಯೋಜನೆಗಳನ್ನು ತಂದು ಸಾಕಾರಗೊಳಿಸಲಾಗಿದೆ. ಸವಣೂರಿನಲ್ಲಿ ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಕಾಂಪ್ಲೆಕ್ಸ್, ಪೆಟ್ರೋಲ್ ಪಂಪ್ ಸಹಿತ ವಿವಿಧ ರೀತಿಯ ಸೇವೆಗಳನ್ನು ಪ್ರಾರಂಭ ಮಾಡಿದ್ದೇನೆ. ಇದೀಗ ಸವಣೂರಿನಲ್ಲಿ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿ, ಇಂದು ಪೂಜಾ ಕಾರ್‍ಯದೊಂದಗೆ ಉದ್ಘಾಟನೆ ಮಾಡಿದ್ದೇವೆ. ಇದೆಲ್ಲವು ಸವಣೂರಿನ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ.

LEAVE A REPLY

Please enter your comment!
Please enter your name here