ಉಪ್ಪಿನಂಗಡಿ ಅಪಘಾತ ವಲಯ ಹಳೆಗೇಟಿನಲ್ಲಿ ಬ್ಯಾರಿಕೇಡ್ ಉದ್ಘಾಟನೆ

0

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಹಳೇಗೇಟು ಎಂಬಲ್ಲಿ ಅಪಘಾತ ವಲಯ ಎಂದು ಗುರುತಿಸಲ್ಪಟ್ಟಿದ್ದ ಜಾಗದಲ್ಲಿ ಅಳವಡಿಸಲಾದ ಬ್ಯಾರಿಕೇಡ್‌ಗಳನ್ನು ಉಪ್ಪಿನಂಗಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುತೇಶ್ ಉದ್ಘಾಟಿಸಿದರು.

ಹಳೇಗೇಟು ಎಂಬಲ್ಲಿ ಹಲವು ಅಪಘಾತಗಳು ಸಂಭವಿಸಿ, ಸಾವು-ನೋವುಗಳಿಗೆ ಕಾರಣವಾಗಿದ್ದು, ಅಪಘಾತ ನಿಯಂತ್ರಿಸುವ ಸಲುವಾಗಿ ಬ್ಯಾರಿಕೇಡ್ ಅಳವಡಿಸುವಂತೆ ಸ್ಥಳೀಯರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದರು. ಪೊಲೀಸ್ ಇಲಾಖೆಯ ಅನುಮತಿಯೊಂದಿಗೆ ಸ್ಥಳೀಯ ಉದ್ಯಮಿಗಳಾದ ಸಮೀರ್ ಮತ್ತು ಮಿಶ್ಬಾಹ್ ಎಂಬವರ ಪ್ರಯೋಜಕತ್ವದಲ್ಲಿ ಬ್ಯಾರಿಕೇಡ್ ಅಳವಡಿಸಲಾಯಿತು.
ಈ ಸಂದರ್ಭ ಹಳೇಗೇಟು ಮಸೀದಿ ಅಧ್ಯಕ್ಷ ಉಮರಬ್ಬ, ಕಾರ್ಯದರ್ಶಿ ಇಸಾಕ್, ಮದ್ರಸದ ಶಿಕ್ಷಕರಾದ ಅನೀಶ್ ಕೌಸರಿ, ಇಬ್ರಾಹೀಂ ಮದನಿ, ಸ್ಥಳೀಯ ಪ್ರಮುಖರಾದ ಝಕರಿಯಾ, ಆಶಿಕ್ ಯು.ಕೆ. ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here