ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಸಂಭ್ರಮದ ಶಿಕ್ಷಕರ ದಿನಾಚರಣೆ

0

ಪುತ್ತೂರು: ಒಬ್ಬ ಉತ್ತಮ ಶಿಕ್ಷಕ ತರಗತಿಯನ್ನು ಮಾತ್ರವಲ್ಲ, ಇಡೀ ಪೀಳಿಗೆಯ ಭವಿಷ್ಯವನ್ನು ಬದಲಿಸುತ್ತಾನೆ. ಜ್ಞಾನವೆಂಬ ಬೆಳಕನ್ನು ಹಚ್ಚಿ ಅಜ್ಞಾನದ ಕತ್ತಲೆಯನ್ನು ದೂರ ಮಾಡಿ, ವಿದ್ಯಾರ್ಥಿಗಳ ಕನಸುಗಳಿಗೆ ದಿಕ್ಕು ತೋರುವವರು ಶಿಕ್ಷಕರು. ಅಂತಹ ಜ್ಞಾನದಾತರು, ಮಾರ್ಗದರ್ಶಕರು ಹಾಗೂ ಭವಿಷ್ಯದ ಶಿಲ್ಪಿಗಳಿಗೆ ಗೌರವ ಸಲ್ಲಿಸುವ ಸಾರ್ಥಕ ದಿನವೇ ಶಿಕ್ಷಕರ ದಿನಾಚರಣೆ.ಈ ಹಿನ್ನೆಲೆಯಲ್ಲಿ ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್ ಶಿಕ್ಷಣ ಸಂಸ್ಥೆಯಲ್ಲಿ ಸೆ.05ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿ ತಮ್ಮ ಶಿಕ್ಷಕರಿಗೆ ವಿಶೇಷ ಗೌರವ ಸಲ್ಲಿಸಿ ದಿನವನ್ನು ಸ್ಮರಣೀಯವಾಗಿಸಿದರು.

ಕಾರ್ಯಕ್ರಮ ದೀಪ ಬೆಳಗಿಸುವ ಮೂಲಕ ಉದ್ಘಾಟನೆಗೊಂಡಿತು. ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ವಿಶೇಷವಾಗಿ ಆರತಿ ಬೆಳಗಿ ಗೌರವ ಹಾಗೂ ಕೃತಜ್ಞತೆ ಅರ್ಪಿಸಿದರು. ಬಳಿಕ ವಿದ್ಯಾರ್ಥಿಗಳು Cake Cutting ಕಾರ್ಯಕ್ರಮ ಆಯೋಜಿಸಿದ್ದು, ನಂತರ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯ ಮಹತ್ವ ಹಾಗೂ ತಮ್ಮ ಜೀವನದಲ್ಲಿ ಶಿಕ್ಷಕರ ಪಾತ್ರದ ಕುರಿತು ಭಾಷಣ ಮಾಡಿದರು.

ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಪಿ.ವಿ. ಮಾತನಾಡಿ, ಶಿಕ್ಷಕರೆಂದರೆ ಕೇವಲ ತರಗತಿಯ ನಾಲ್ಕು ಗೋಡೆಗಳೊಳಗೆ ಪಾಠ ಬೋಧಿಸುವವರಷ್ಟೇ ಅಲ್ಲ, ಜೀವನದ ಪ್ರತಿಯೊಂದು ಹಂತದಲ್ಲೂ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಸಹಾಯ, ಮಾರ್ಗದರ್ಶನ ಮತ್ತು ಸೂಕ್ತ ಸಲಹೆ ನೀಡುವ ಪ್ರತಿಯೊಬ್ಬರೂ ಒಂದರ್ಥದಲ್ಲಿ ನಮ್ಮ ಶಿಕ್ಷಕರೇ ಆಗುತ್ತಾರೆ. ಜೀವನದ ವಿವಿಧ ಹಂತಗಳಲ್ಲಿ ದಾರಿ ತೋರಿಸುವ ಪ್ರತಿಯೊಬ್ಬರಿಂದಲೂ ನಾವು ಏನನ್ನಾದರೂ ಕಲಿಯುತ್ತೇವೆ, ಅದು ಜ್ಞಾನ ಹಂಚಿ ಬದುಕಿಗೆ ದಿಕ್ಕು ತೋರಿಸುವ ಮಹತ್ತರ ಜವಾಬ್ದಾರಿ ಎಂದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ವಿವಿಧ ಮನರಂಜನಾ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿದ್ದರು. ಶಿಕ್ಷಕರು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಕಾರ್ಯಕ್ರಮವನ್ನು ಫಾತಿಮತ್ ಫಿಝಾ ನಿರೂಪಿಸಿದರು. ಕೃತಿ ಮತ್ತು ತ್ರಿಶಾ ಸ್ವಾಗತಿಸಿದರು, ಫಾತಿಮತ್ ರುಬೀನಾ ವಂದಿಸಿದರು.

LEAVE A REPLY

Please enter your comment!
Please enter your name here