ಪುತ್ತೂರಿನಲ್ಲಿ ಅಮುಲ್ ಐಸ್‌ಕ್ರೀಮ್ ಪಾರ್ಲರ್ ಶುಭಾರಂಭ

0

ರುಚಿಯ ಜತೆಗೆ ಆರೋಗ್ಯದ ಕಾಳಜಿ-ಅಮುಲ್ ಐಸ್‌ಕ್ರೀಮ್‌ನಲ್ಲಿ ವೈವಿಧ್ಯಮಯ ಆಯ್ಕೆ


ಪುತ್ತೂರು:ರುಚಿಯ ಜತೆಗೆ ಆರೋಗ್ಯದ ಕಾಳಜಿಯನ್ನು ಹೊಂದಿರುವ ವಿವಿಧ ಬಗೆಯ ರುಚಿಕರ ಅಮುಲ್ ಐಸ್‌ಕ್ರೀಮ್‌ಗಳನ್ನು ಒಂದೇ ಸೂರಿನಡಿ ಗ್ರಾಹಕರಿಗೆ ಒದಗಿಸುವ ನೂತನ ಅಮುಲ್ ಐಸ್‌ಕ್ರೀಮ್ ಪಾರ್ಲರ್ ಪುತ್ತೂರಿನ ಎಪಿಎಂಸಿ ರಸ್ತೆಯ ಗೋಶನ್ ಕಾಂಪ್ಲೆಕ್ಸ್‌ನಲ್ಲಿ ಸೆ.5ರಂದು ಶುಭಾರಂಭಗೊಂಡಿತು.


ಅನುದೀಪ್ ರೈ ಅವರ ಮಾಲಕತ್ವದ ಅಮುಲ್ ಐಸ್‌ಕ್ರೀಮ್ ಪಾರ್ಲರ್ ಅನ್ನು ಅವರ ತಂದೆ ದಾಮೋದರ್ ರೈ ಧಾರ್ಮಿಕ ಕಾರ್ಯಕ್ರಮದ ಮೂಲಕ ಉದ್ಘಾಟಿಸಿದರು.ಈ ಸಂದರ್ಭ ಸಂಸ್ಥೆಯ ಮಾಲಕ ಅನುದೀಪ್ ಮತ್ತು ಅವರ ಪತ್ನಿ ದೀಕ್ಷಾ ಬಿ ರೈ ಮತ್ತು ಕುಟುಂಬಸ್ಥರು ಹಾಗು ಹಿತೈಷಿಗಳು ಉಪಸ್ಥಿತರಿದ್ದರು.


ಅಮುಲ್ ಸಂಸ್ಥೆಯ ಗುಣಮಟ್ಟದ ಐಸ್‌ಕ್ರೀಮ್‌ಗಳ ವಿವಿಧ ಆಯ್ಕೆಗಳನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ಈ ಪಾರ್ಲರ್ ಆರಂಭಿಸಲಾಗುತ್ತಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲ ವಯೋಮಾನದವರಿಗೂ ಇಷ್ಟವಾಗುವಂತಹ ಹಲವು ಬಗೆಯ ಐಸ್‌ಕ್ರೀಮ್ ಹಾಗೂ ಡೆಸರ್ಟ್‌ಗಳ ರುಚಿಯನ್ನು ಇಲ್ಲಿ ಸವಿಯಬಹುದಾಗಿದೆ.ಅಮುಲ್ ಐಸ್‌ಕ್ರೀಮ್‌ಗಳು ಉತ್ತಮ ಗುಣಮಟ್ಟ, ವೈವಿಧ್ಯಮಯ ರುಚಿ ಹಾಗೂ ಕೈಗೆಟುಕುವ ದರದಿಂದಾಗಿ ಗ್ರಾಹಕರಲ್ಲಿ ಜನಪ್ರಿಯತೆ ಗಳಿಸಿವೆ.ಕುಟುಂಬ ಸಮೇತರಾಗಿ ಬಂದು ನೆಮ್ಮದಿಯಿಂದ ಐಸ್‌ಕ್ರೀಮ್ ಸವಿಯಲು ಅನುಕೂಲವಾಗುವ ರೀತಿಯಲ್ಲಿ ಪಾರ್ಲರ್ ಅನ್ನು ರೂಪಿಸಲಾಗಿದೆ.ಪುತ್ತೂರು ನಗರ ಹಾಗೂ ಸುತ್ತಮುತ್ತಲಿನ ಗ್ರಾಹಕರಿಗೆ ಅಮುಲ್‌ನ ವೈವಿಧ್ಯಮಯ ಉತ್ಪನ್ನಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಮೂಲಕ ಈ ಪಾರ್ಲರ್ ಗ್ರಾಹಕರ ಗಮನ ಸೆಳೆಯುವ ನಿರೀಕ್ಷೆಯಿದೆ.ಪಾರ್ಲರ್‌ಗೆ ಪುತ್ತೂರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಭೇಟಿ ನೀಡಿ ಅಮುಲ್ ಐಸ್‌ಕ್ರೀಮ್‌ನ ವೈವಿಧ್ಯಮಯ ರುಚಿಯನ್ನು ಸವಿಯುವಂತೆ ಸಂಸ್ಥೆಯ ಮಾಲಕ ಅನುದೀಪ್ ರೈ ವಿನಂತಿಸಿದ್ದಾರೆ.

ಆರೋಗ್ಯದಾಯಕ ಐಸ್ ಕ್ರೀಮ್
ತಂಪಿನ ಸವಿಯ ಜತೆಗೆ ವಿಭಿನ್ನ ಆಯ್ಕೆಗಳನ್ನು ಬಯಸುವ ಗ್ರಾಹಕರಿಗಾಗಿ ಅಮುಲ್ ಐಸ್‌ಕ್ರೀಮ್‌ನಲ್ಲಿ ವೈವಿಧ್ಯಮಯ ಉತ್ಪನ್ನಗಳು ಲಭ್ಯವಿದೆ.ಸ್ಕೂಪಿಂಗ್ ಐಸ್‌ಕ್ರೀಮ್‌ನಿಂದ ಹಿಡಿದು ಪ್ರೊಟೀನ್ ಐಸ್‌ಕ್ರೀಮ್ ಹಾಗೂ ಶುಗರ್ ಫ್ರೀ ಆಯ್ಕೆಗಳವರೆಗೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಲವು ಬಗೆಗಳು ಲಭ್ಯವಾಗುತ್ತಿವೆ.ಪ್ರೊಟೀನ್ ಐಸ್‌ಕ್ರೀಮ್ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಹಾಗೂ ತಮ್ಮ ಆಹಾರದಲ್ಲಿ ಪ್ರೊಟೀನ್‌ಗೆ ಆದ್ಯತೆ ನೀಡುವ ಗ್ರಾಹಕರ ಗಮನ ಸೆಳೆಯುತ್ತಿದೆ. ಅದೇ ರೀತಿ ಶುಗರ್ ಫ್ರೀ ಐಸ್‌ಕ್ರೀಮ್ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಲು ಬಯಸುವವರಿಗೆ ಪರ್ಯಾಯ ಆಯ್ಕೆಯಾಗಿ ಲಭ್ಯವಿದೆ.


ಹಾಲು ಉತ್ಪನ್ನಗಳ ಕ್ಷೇತ್ರದಲ್ಲಿ ದೇಶದ ಪ್ರಮುಖ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಅಮುಲ್‌ನ ಐಸ್‌ಕ್ರೀಮ್‌ಗಳು ಗುಣಮಟ್ಟ ಮತ್ತು ರುಚಿಗೆ ಆದ್ಯತೆ ನೀಡುವ ಮೂಲಕ ಜನಪ್ರಿಯತೆ ಪಡೆದಿದೆ.ವಿಶೇಷ ಸಂದರ್ಭಗಳು, ಕುಟುಂಬದ ಸಂಭ್ರಮಗಳು ಹಾಗೂ ಸ್ನೇಹಿತರೊಂದಿಗೆ ಕೂಡಿ ತಂಪಿನ ಕ್ಷಣಗಳನ್ನು ಆನಂದಿಸಲು ಅಮುಲ್ ಐಸ್‌ಕ್ರೀಮ್ ಉತ್ತಮ ಆಯ್ಕೆಯಾಗಿದೆ. ಜೊತೆಗೆ ಶುಭಸಮಾರಂಭಗಳಿಗೂ ಸಂಸ್ಥೆಯಿಂದ ಐಸ್‌ಕ್ರೀಮ್ ಒದಗಿಸಲಾಗುವುದು
ಅನುದೀಪ್ ರೈ

LEAVE A REPLY

Please enter your comment!
Please enter your name here