






ಪುತ್ತೂರು: ಮೊಟ್ಟೆತ್ತಡ್ಕ ಶ್ರೀ ಚಾಮುಂಡೇಶ್ವರಿ ಯುವ ಬಳಗ ಇದರ ಆಶ್ರಯದಲ್ಲಿ ಮೊಟ್ಟೆತ್ತಡ್ಕ ಮಿಶನ್ ಮೂಲೆ ಶ್ರೀ ರಕ್ತೇಶ್ವರಿ-ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಎರಡನೇ ವರ್ಷದ ಶ್ರೀ ಕೃಷ್ಣಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ಸೆ.6 ರಂದು ನಡೆಯಿತು.



ಬೆಳಿಗ್ಗೆ ಮೊಟ್ಟೆತ್ತಡ್ಕದ ಅಗ್ನಿಶಾಮಕ ಠಾಣಾ ಬಳಿಯಿಂದ ಆರಂಭಗೊಂಡ ಪುಟಾಣಿ ಕೃಷ್ಣ-ರಾಧೆಯರ ಮೆರವಣಿಗೆಯು ದೇವಸ್ಥಾನದ ವಠಾರದ ಬಳಿ ಬಂದು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟನೆಗೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಪುಟಾಣಿಗಳಿಗೆ, ಮಹಿಳೆಯರಿಗೆ, ಪುರುಷರಿಗೆ, ಹಿರಿಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ಬೆಳಿಗ್ಗೆಯಿಂದ ಸಂಜೆವರೆಗೆ ಜರಗಿದವು.



ಶ್ರೀ ರಕ್ತೇಶ್ವರಿ-ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ರೈ ಮಿಶನ್ ಮೂಲೆ, ಸತೀಶ್ ರೈ ಮಿಶನ್ ಮೂಲೆ, ಅಧ್ಯಕ್ಷ ರಾಮ ಶೆಟ್ಟಿ ಹಾಗೂ ಪದಾಧಿಕಾರಿಗಳು, ಶ್ರೀ ಚಾಮುಂಡೇಶ್ವರಿ ಯುವ ಬಳಗ ಅಧ್ಯಕ್ಷ ದಿನೇಶ್ ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










