






ರೂ.268 ಕೋಟಿ ವ್ಯವಹಾರ | ರೂ.1.20 ಕೋಟಿ ಲಾಭ | ಶೇ.11 ಡಿವಿಡೆಂಡ್


ಪುತ್ತೂರು: ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ರೂ.268 ಕೋಟಿ ವ್ಯವಹಾರ ಮಾಡಿ ರೂ.1 ಕೋಟಿ 20 ಲಕ್ಷ ನಿವ್ವಳ ಲಾಭ ಗಳಿಸಿದೆ. ಶೇ.98.41 ಸಾಲ ಮರು ಪಾವತಿಯಾಗಿ ಅಡಿಟ್ ವರ್ಗೀಕರಣದಲ್ಲಿ `ಎ’ ತರಗತಿಯನ್ನು ಪಡೆದಿರುವ ನಮ್ಮ ಸಹಕಾರ ಸಂಘದ ಸಾಧನೆಗಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ವತಿಯಿಂದ ಸತತವಾಗಿ 8ನೇ ಬಾರಿಗೆ ಪ್ರಶಸ್ತಿ ಲಭಿಸಿರುತ್ತದೆ ಎಂದು ಸಹಕಾರಿ ಸಂಘದ ಅಧ್ಯಕ್ಷರಾದ ಹೆಚ್.ಮಹಮ್ಮದ್ ಆಲಿಯವರು ಹೇಳಿದರು.




ಸೆ.6 ರಂದು ಅವರು ಆರ್ಯಾಪು ಗ್ರಾಮದ ಸಂಪ್ಯದಲ್ಲಿರುವ ಸಹಕಾರಿ ಸಂಘದ ಕೇಂದ್ರ ಕಚೇರಿಯ ಸಭಾಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಸಹಕಾರಿ ಸಂಘದ ವರದಿ ವರ್ಷಾಂತ್ಯಕ್ಕೆ ರೂ.3 ಕೋಟಿ 53 ಲಕ್ಷ ಸದಸ್ಯರ ಪಾಲು ಬಂಡವಾಳ ಹೊಂದಿದ್ದು ರೂ.26 ಕೋಟಿ 61 ಲಕ್ಷ ಸದಸ್ಯರ ಠೇವಣಿ ಸಂಗ್ರಹವಿರುತ್ತದೆ. ಸದಸ್ಯರ ಹೊರ ಬಾಕಿ ಸಾಲ ರೂ.34 ಕೋಟಿ 60 ಲಕ್ಷ ಇರುತ್ತದೆ. ದ.ಕ.ಜಿಲ್ಲಾ ಬ್ಯಾಂಕಿನ ಸಾಲ ರೂ.20 ಕೋಟಿ 35 ಲಕ್ಷ ಹಾಗೂ ದ.ಕ.ಜಿಲ್ಲಾ ಬ್ಯಾಂಕಿನಲ್ಲಿ ಪಾಲು ಬಂಡವಾಳ ರೂ.1 ಕೋಟಿ ಮತ್ತು ವಿವಿಧ ಠೇವಣಿ ರೂ.22 ಕೋಟಿ 90 ಲಕ್ಷ ಇರುತ್ತದೆ. ನಮ್ಮ ಸಹಕಾರ ಸಂಘದ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡಿರುವ ಸಹಕಾರ ಸಂಘದ ಸದಸ್ಯರಿಗೆ ಅಧ್ಯಕ್ಷ ಎಚ್.ಮಹಮದ್ ಆಲಿರವರು ಅಭಿನಂದನೆಯನ್ನು ಸಲ್ಲಿಸಿದರು.
ಮಹಾಸಭೆಯ ಕಲಾಪದಲ್ಲಿ ಸದಸ್ಯರಾದ ಯನ್.ಗೋಪಾಲ ಭಟ್‌ರವರು ಚರ್ಚೆ ಮಾಡಿ ಹಲವು ವಿಚಾರಗಳ ಬಗ್ಗೆ ಸಲಹೆ ನೀಡಿದರು. ಸದಸ್ಯರಾದ ರಮೇಶ್ ರೈ ಡಿಂಬ್ರಿ ಕುರಿಯ ಶಾಖೆಯಲ್ಲಿ ಅಗತ್ಯ ಮೂಲ ಸೌರ‍್ಯಗಳನ್ನು ಒದಗಿಸಿಕೊಡಲು ಸಭೆಯಲ್ಲಿ ವಿನಂತಿ ಮಾಡಿದರು. ಸದಸ್ಯರಿಗೆ ಹೆಚ್ಚಿನ ಡಿವಿಡೆಂಡು ನೀಡಲು ಸದಸ್ಯರಾದ ಶಿವರಾಮ ಆಳ್ವ, ಜಯಪ್ರಕಾಶ್ ರೈ ಒತ್ತಾಯಿಸಿದಾಗ ಶೇ.1ರಷ್ಟು ಹೆಚ್ಚಳ ಮಾಡಿ ಶೇ.11 ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದ ಅಧ್ಯಕ್ಷರು ಹೆಚ್.ಮಹಮ್ಮದ್ ಆಲಿಯವರು ಮುಂದಿನ ವರ್ಷದಲ್ಲಿ ಠೇವಣಿಗಳ ಗುರಿ, ಸಾಲ ನೀಡುವ ಗುರಿಯನ್ನು ಹೆಚ್ಚಳ ಮಾಡಿ ವ್ಯವಹಾರವನ್ನು ವೃದ್ದಿಪಡಿಸಿ ಹೆಚ್ಚು ಲಾಭ ಗಳಿಸಿದಲ್ಲಿ ಹೆಚ್ಚು ಡಿವಿಡೆಂಡು ಕೊಡುವರೇ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರಸಕ್ತ ಸಾಲಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ 743 ಸದಸ್ಯರನ್ನು ನೊಂದಾಯಿಸಿ 46 ಲಕ್ಷ ಪ್ರಿಮಿಯಂ ಅನ್ನು ಪಾವತಿಸಲಾಗಿದೆ. ಯಶಸ್ವಿನಿ ಯೋಜನೆಯಲ್ಲಿ 540 ಕುಟುಂಬಗಳನ್ನು ನೊಂದಾಯಿಸಿ ಒಟ್ಟು ರೂ.1 ಲಕ್ಷ 72 ಸಾವಿರ ಪ್ರಿಮಿಯಂಗಳನ್ನು ಪಾವತಿ ಮಾಡಲಾಗಿದೆ. ವರದಿ ಸಾಲಿನಲ್ಲಿ ಒಟ್ಟು 24 ಮೃತಪಟ್ಟ ಸದಸ್ಯರಿಗೆ ರೂ.5000/-ರಂತೆ ಸಹಾಯಧನ ಪಾವತಿಸಲಾಗಿದೆ ಎಂದು ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು.

8ನೇ ಬಾರಿ ಸತತ ಪ್ರಶಸ್ತಿ:
ಬಳಿಕ ಮಾತನಾಡಿದ ಅಧ್ಯಕ್ಷ ಎಚ್.ಆಲಿರವರು ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ಜನರ ಆಶೀರ್ವಾದ ಇರುತ್ತದೆ ಹಾಗೂ ದೇವರ ಸಹಾಯ ಇರುತ್ತದೆ .ನಮ್ಮ ಸಹಕಾರಿ ಸಂಘದ ಸರ್ವ ಸದಸ್ಯರ ಸಹಕಾರ ಬೆಂಬಲದೊಂದಿಗೆ ಸಹಕಾರಿ ಸಂಘವನ್ನು ಅಭಿವೃದ್ಧಿಪಡಿಸಿ ವಿಶೇಷ ಸಾಧನೆಗೈದು ಅತ್ಯುತ್ತಮ ಕಾರ್ಯ ನಿರ್ವಹಣೆಗಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿAದ 8ನೇ ಬಾರಿ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತೇವೆ. ಆಡಳಿತ ಮಂಡಳಿ ನಿರ್ದೇಶಕರ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿಗಳ ಸಂಪೂರ್ಣ ಸಹಕಾರದಿಂದ ಕೋಟ್ಯಾಂತರ ರೂಪಾಯಿ ಲಾಭ ಗಳಿಸುವ ಹಂತಕ್ಕೆ ನಮ್ಮ ಸಹಕಾರಿ ಸಂಘ ಬೆಳೆದು ನಿಂತಿದೆ. ಇದೆಲ್ಲಾ ಸದಸ್ಯರ ಬೆಂಬಲ ಮತ್ತು ಆರ್ಶೀವಾದದಿಂದ ಆಗಿರುತ್ತದೆ. ಸಹಕಾರಿ ಕ್ಷೇತ್ರವು ರಾಜಕೀಯ ರಹಿತವಾಗಿದ್ದು ಸಹಕಾರಿ ಸಂಘದ ಹಕ್ಕನ್ನು ಕಸಿದುಕೊಳ್ಳುವ ಹಾಗೂ ಸಹಕಾರಿ ಸಂಘಗಳ ಸ್ವಾಯತ್ತತೆಗೆ ತೊಂದರೆಯಾಗುವ ರೀತಿಯಲ್ಲಿ ಸರಕಾರಗಳು ಹಲವಾರು ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟ ಸಂದರ್ಭದಲ್ಲಿ ಸಹಕಾರಿ ಸಂಘದ ಹಿತವನ್ನು ಕಾಪಾಡಲು ಕಾನೂನಿನ ಹೋರಾಟವನ್ನು ಮಾಡಿ ಭಾಗಶಃ ಯಶಸನ್ನು ಗಳಿಸಿರುತ್ತೇವೆ ಎಂದರು.
ವಿದ್ಯಾರ್ಥಿಗಳಿಗೆ ಅಭಿನಂದನೆ:
ಮಹಾಸಭೆಯ ಕಲಾಪದ ಬಳಿಕ ಎಸ್.ಎಸ್.ಎಲ್.ಸಿ. ಪಿಯುಸಿ, ಡಿಗ್ರಿ, ವೃತ್ತಿಪರ ಕೋರ್ಸುಗಳಲ್ಲಿ ಡಿಸ್ಟಿಂಕ್ಷನ್ ಪಡೆದಿರುವ ಸಹಕಾರಿ ಸಂಘದ ಸದಸ್ಯರ ಒಟ್ಟು 53 ಮಕ್ಕಳಿಗೆ ಅಭಿನಂದಿಸುವ ಸನ್ಮಾನಿಸುವ ಕಾರ್ಯಕ್ರಮ ನಡೆಸಲಾಯಿತು. ಸಾತ್ವಿ ರೈ ಬಿ, ಭವಿಷ್ಯ ಎ, ತನುಶ್ರೀ ಕೆ, ಮೊಹಮದ್ ಅಜ್ಮಾನ್, ಮೋನಿಶಾ, ಮರಿಯಮ್ ಮಶ್ವಾ, ಲಾಸ್ಯ ಸಂತೋಷ್, ನಿಕ್ಷೇಪ ಆರ್.ರೈ, ಅಭಿಜ್ಞಾ, ಅಭಿಲಾಶ್, ರಕ್ಷಾ ಎಂ, ಬಿಂದುಶ್ರೀ ಜಿ.ಎಸ್, ನಿಧಿ ಟಿ, ಚಿರಾಂತ್ ಎನ್.ಶೆಟ್ಟಿ, ರಿಶಿತ್ ಶೆಟ್ಟಿ, ರಕ್ಷಾ ಎಂ.ಎಸ್, ಅಥಿನ್ ಎಸ್.ಪ್ರಭು, ತುಷಾರ್ ಡಿ.ಕೊಲ್ಯ, ಸ್ತುಥಿ ಎಸ್.ಯು, ವಂಶಿ ಕೆ.ಎನ್(ಎಸೆಸ್ಸೆಲ್ಸಿ), ಆಯಿರಾ ಖನ್ನಮ್, ಚಿನ್ಮಯಿ ಯು.ಎಸ್, ಮೇಘಶ್ರೀ, ಅವಿಶ್ಮಾ ಆಳ್ವ, ಮೇಘಶ್ರೀ, ಪ್ರಾಪ್ತಿ ಟಿ.ಶೆಟ್ಟಿ, ಹಿತಾ ಶೆಟ್ಟಿ, ಖತೀಜತುಲ್ ಹಿಬಾ, ಸಹ್ಹಮ್ ಹಸನ್, ಸೌಬನ್ ಹುಸೈನ್, ಹಸ್ತಾ, ಆಕಾಶ್‌ರಾಜ್, ಫಾತಿಮ ಶಾಝ, ಆಯಿಶತ್ ಮಶಿಯ, ವಂಶಿ ಪಿ.ವಿ, ಶಲ್ಮಾಲಿ ಆರ್.ಎಸ್, ಮೇಧ ಭಟ್, ದೀಪಿಕಾ ಎಂ, ಕೆ.ಶ್ರಾವ್ಯ(ಪಿಯುಸಿ), ಪೂಜಿತಾ ಬಿ.ಯು, ಅನುಶ್ರೀ ಜಿ.ಪ್ರಭು, ಹರ್ಷಿತಾ ಎಚ್.ಆರ್, ಆಯಿಶತ್ ತಶ್ರೀಫಾ, ಆಯಿಶತ್ ತೌಶಿಭಾ, ನಿಯಾಜುನ್ನಿಸಾ, ಶಿವಾನಿ, ಅನನ್ಯ, ರಕ್ಷಿತ್ ಜಿ, ವಿಖ್ಯಾತ್ ಎನ್.ಸುವರ್ಣ, ವಿನಿಶಾ ಡಿ’ಸೋಜ, ಎನ್.ಅಬ್ದುಲ್ ಶಫೀಕ್, ಫಾತಿಮತ್ ಸಪಾ(ಪದವಿ), ದಿಶಾನ್ ಎಂ(ಕ್ರೀಡೆ)ರವರುಗಳನ್ನು ಅಭಿನಂದಿಸಲಾಯಿತು. ಅಭಿನಂದಿತ ವಿದ್ಯಾಥಿಗಳಿಗೆ ರೂ.5000/-ರಂತೆ ಪ್ರೊತ್ಸಾಹ ಧನದೊಂದಿಗೆ ಸನ್ಮಾನ ಪತ್ರ ವಿತರಿಸಲಾಯಿತು.

ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಜಯಂತಿ ಭಾಸ್ಕರ್‌ರವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ಕುಮಾರ್ ರೈ ಎನ್.ಎಸ್‌ರವರು ಸಂಘದ ಮಹಾಸಭೆಯ ಆಮಂತ್ರಣ ಪತ್ರ ಮತ್ತು ಹಿಂದಿನ ಸಾಲಿನ ವಾರ್ಷಿಕ ಮಹಾಸಭೆಯ ನಡವಳಿ, 2025-26ನೇ ಸಾಲಿನ ವಾರ್ಷಿಕ ವರದಿ, ಆಯವ್ಯಯ ಪಟ್ಟಿ, ಅಂದಾಜು ಬಜೆಟ್ ಮೊದಾಲಾದವುಗಳನ್ನು ಮಂಡಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸುರೇಂದ್ರ ರೈ ಬಳ್ಳಮಜಲು, ನಿರ್ದೇಶಕರಾದ ಸತೀಶ್ ನಾೖಕ್ ಪರ್ಲಡ್ಕ, ಸದಾನಂದ ಶೆಟ್ಟಿ ಕೂರೇಲು, ಗಣೇಶ್ ರೈ ಬಳ್ಳಮಜಲು, ಗಣೇಶ್ ರೈ ತೊಟ್ಲಮೂಲೆ, ಶೀನಪ್ಪ ಮರಿಕೆ, ಇಸ್ಮಾಯಿಲ್ ಮಲಾರು, ತಿಮ್ಮಪ್ಪ ಜಂಗಮುಗೇರು, ಸಂಶುದ್ದೀನ್ ನೀರ್ಕಜೆ, ರಂಜಿತ್ ಬಂಗೇರ ಸಂಪ್ಯ ಉಪಸ್ಥಿತರಿದ್ದರು. ಕು|ವಿಂಧ್ಯಾ ರೈ ಪ್ರಾರ್ಥಿಸಿದರು. ನಿರ್ದೇಶಕಿ ಶ್ರೀಮತಿ ಚಂದ್ರಕಲಾ ಓಟೆತ್ತಿಮಾರು ಸ್ವಾಗತಿಸಿ, ನಿರ್ದೇಶಕಿ ಶ್ರೀಮತಿ ತೆರೇಜಾ ಎಂ.ಸಿಕ್ವೇರಾ ವಂದಿಸಿದರು. ಸಂಘದ ಸಿಬ್ಬಂದಿ ಉಮೇಶ್ ಯಸ್.ಕೆ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ವಿನಯ್‌ಕುಮಾರ್ ರೈ, ಶ್ರೀಮತಿ ಪ್ರಶಾಂತಿ, ಅರ್ಜುನ್ ಭಾಸ್ಕರ್, ನವೋದಯ ಸ್ವ ಸಹಾಯ ಸಂಘದ ಪ್ರೇರಕಿ ಶ್ರೀಮತಿ ಮೋಹಿನಿ, ಅರುಣಾ ಕುಮಾರಿ ಹಾಗೂ ಪಿಗ್ಮಿ ಸಂಗ್ರಾಹಕ ವಸಂತ ಗೌಡ, ಪ್ರಮೋದ್, ನವಾಜ್ ಸಭಾ ಕಲಾಪಕ್ಕೆ ಸಹಕರಿಸಿದರು.
ಸಂಘದ ಇತಿಹಾಸದಲ್ಲೇ ರಿಸ್ಕ್ ತೆಗೆದುಕೊಂಡು ವಿಮಾ ಯೋಜನೆ ಜಾರಿ..
ಪ್ರಾಮಾಣಿಕವಾಗಿ ಸೇವೆಯನ್ನು ಮಾಡಿದವರಿಗೆ ಗೌರವಿಸುವುದು ನಾಗರಿಕ ಸಮಾಜದ ಕರ್ತವ್ಯ. ಅದಕ್ಕಾಗಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿರುವ ಬಿಎಲ್‌ಒ ಹಾಗೂ ಸೂಪರ್‌ವೈಸರ್‌ಗಳನ್ನು ಮತ್ತು ವರ್ಗಾವಣೆಗೊಂಡಿರುವ ಆರ್ಯಾಪು ಗ್ರಾಮ ಪಂಚಾಯತ್‌ನ ಪಿ.ಡಿ.ಒ.ರವರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ನಗದು ಬಹುಮಾನದ ಉಡುಗೊರೆಯನ್ನು ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಸಹಕಾರಿ ಸಂಘದ ಇತಿಹಾಸದಲ್ಲೇ ರಿಸ್ಕ್ ತೆಗೆದುಕೊಂಡು ಸ್ವಂತ ನೆಲೆಯಲ್ಲಿ ವಿಮಾ ಯೋಜನೆ ಜಾರಿ ಗೊಳಿಸಿರುವ ಹೆಗ್ಗಳಿಕೆ ನಮ್ಮದಾಗಿದೆ. ಈ ಯೋಜನೆಯಿಂದ ಇಂದು 12 ಜನರಿಗೆ ವಿಮಾ ಪರಿಹಾರ ಧನ ಸಹಾಯ ನೀಡಿರುತ್ತೇವೆ.
-ಎಚ್.ಮಹಮ್ಮದ್ ಆಲಿ, ಅಧ್ಯಕ್ಷರು, ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘ
ಸನ್ಮಾನ..
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿರುವ ಸಹಕಾರಿ ಸಂಘದ ವ್ಯಾಪ್ತಿಯ ಬಿಎಲ್‌ಒಗಳಾದ ಭವ್ಯ, ಪ್ರಮೀಳ, ಜಯಲತಾ, ಚಂದ್ರಾವತಿ, ಶೋಭಾ, ಕೃಷ್ಣಪ್ಪ, ಸುಮಾವತಿ(ಕೆಮ್ಮಿಂಜೆ ಗ್ರಾಮ), ಸಾವಿತ್ರಿ, ಬಿ.ನಳಿನಿ, ಕುಸುಮಾವತಿ, ಶ್ಯಾಮಲ ಪಿ, ವೇದಾವತಿ ಎಂ, ಉಮೇಶ ನಾಯ್ಕ, ನವೀನ ಕುಮಾರ್ ಎಂ(ಆರ್ಯಾಪು ಗ್ರಾಮ), ವಿನೋದ, ಶೋಭಾ, ಕಮಲ(ಕುರಿಯ ಗ್ರಾಮ)ದ 17 ಬಿಎಲ್‌ಒಗಳನ್ನು ಸನ್ಮಾನಿಸಿ ನಗದು ಉಡುಗೊರೆಯನ್ನು ನೀಡಲಾಯಿತು. ಎಸ್‌ಐಆರ್‌ನ ಸೂಪರ್‌ವೈಸರ್‌ಗಳಾದ ಆರ್ಯಾಪು ಗ್ರಾಮದ ಆಡಳಿತ ಅಧಿಕಾರಿ ಶ್ರೀಮತಿ ಅಶ್ವಿನಿ, ಕೆಮ್ಮಿಂಜೆ ಗ್ರಾಮದ ಆಡಳಿತ ಅಧಿಕಾರಿ ಸರೋಜರವರನ್ನು, ಆರ್ಯಾಪು ಗ್ರಾಮ ಪಂಚಾಯತ್‌ನ ಅಭಿವೃದ್ದಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ನಾಗೇಶ್ ಕೆ.ರವರನ್ನು ಸನ್ಮಾನಿಸಲಾಯಿತು.

ಸಂಜೀವಿನಿ ವಿಮಾ ಯೋಜನೆ..
ಸಂಘದ ಸದಸ್ಯರ ಆರೋಗ್ಯದ ಹಿತದೃಷ್ಟಿಯಿಂದ ಸಹಕಾರಿ ಸಂಘದ ಸ್ವಂತ ನೆಲೆಯಲ್ಲಿ ನೂತನ ಯೋಜನೆಯಾದ ಸಹಕಾರಿ ಸಂಘದ ಸಂಜೀವಿನಿ ವಿಮಾ ಯೋಜನೆಯಲ್ಲಿ ಮೃತಪಟ್ಟ ಈರ್ವರು ಸದಸ್ಯರಿಗೆ ತಲಾ ರೂ.1 ಲಕ್ಷ ಪರಿಹಾರ ಮೊತ್ತ ಹಾಗೂ 10 ಮಂದಿ ಸಂಘದ ಸದಸ್ಯರಿಗೆ ವಿವಿಧ ವೈದ್ಯಕೀಯ ಶಸ್ತ್ರಚಿಕಿತ್ಸಾ ವೆಚ್ಚಕ್ಕಾಗಿ ಒಟ್ಟು ರೂ.4,40,000/- ಪರಿಹಾರ ಮೊತ್ತವನ್ನು ಸಂಘದ ಮಹಾಸಭೆಯಲ್ಲಿ ವಿತರಿಸಲಾಯಿತು.










