






ಕೆಯ್ಯೂರು: ಅಭಿನವ ಕೇಸರಿ ಮಾಡಾವು ಇದರ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಅಂಗವಾಗಿ ವಿವಿಧ ಕ್ರೀಡಾಕೂಟ ಮಾಡಾವು ಕಟ್ಟೆಯ ಅಯ್ಯಪ್ಪ ಭಜನಾ ಮಂದಿರದ ಬಳಿ ಸೆ13 ರಂದು ನಡೆಯಲಿದೆ.


ಬೆಳಿಗ್ಗೆ 8.30ರಿಂದ ಕ್ರೀಡಾಕೂಟ ಆರಂಭವಾಗಲಿದ್ದು ಬೆಳಿಗ್ಗೆ 9ಗಂಟೆಗೆ ಸಭಾ ಕಾರ‍್ಯಕ್ರಮ ನಡೆಯಲಿದೆ ಜ್ಯೋತಿ ಚಿಕಿತ್ಸಾಲಯ ಡಾ| ರಾಮಚಂದ್ರ ಭಟ್ ದೀಪ ಪ್ರಜ್ವಲಿಸಿ ಉದ್ಘಾಟಿಸುವರು.



ಅತಿಥಿಗಳಾಗಿ ಅಯ್ಯಪ್ಪ ಭಜನಾ ಮಂದಿರ ಮಾಡಾವು ಅಧ್ಯಕ್ಷ ರವೀಂದ್ರ ರೈ ನೆಲ್ಯಾಜೆ,, ಶ್ರೀ ಕ್ಷೇತ್ರ ಕೆಯ್ಯೂರು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು, ನಿವೃತ್ತ ಕಾರ‍್ಯದರ್ಶಿ ಹಾಲು ಉತ್ಪಾದಕರ ಸಂಘ ಕೆಯ್ಯೂರು ಚಂದ್ರಹಾಸ ರೈ ಬೊಳಿಕಲ ಮಠ, ಪಿಂಚಣಿ ಮತ್ತು ಸಣ್ಣ ಉಳಿತಾಯ ಇಲಾಖೆ ಮಂಗಳೂರು ಸಹಾಯಕ ನಿರ್ದೇಶಕ ಪ್ರಸನ್ನ ಎಂ.ಪಿ, ಅಧ್ಯಕ್ಷರು ಅಯ್ಯಪ್ಪ ಭಕ್ತವೃಂದ ಮಾಡಾವು ಸುಬ್ರಾಯ ಗೌಡ ಮಾಡಾವು, ದ. ಕ. ಜಿ. ಪಂ. ಕಿರಿಯ ಪ್ರಾ. ಶಾಲೆ ಮಾಲೆತ್ತೋಡಿ ಮುಖ್ಯಗುರು ತಿಮ್ಮಪ್ಪ ಕೊಡ್ಲಾಡಿ, ಶ್ರೀ ಹೊಸಮ್ಮ ದೈವಸ್ಥಾನ ನಿತ್ಯಕರ್ಮಿ ಮೋನಪ್ಪ ಪೂಜಾರಿ, ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಪಾಲ್ತಾಡಿ ಅಧ್ಯಕ್ಷ ವೆಂಕಟರಮಣ ಗೌಡ, ಶ್ರೀ ಕೊರಗಜ್ಜ ದೈವಸ್ಥಾನ ಅಸಂತ್ತಡ್ಕ ನಿತ್ಯಕರ್ಮಿ ಗಿರೀಶ್, ಶ್ರೀ. ಧ. ಗ್ರಾ. ಯೋ.ಕಾರ‍್ಯಕ್ಷೇತ್ರ ದೇರ‍್ಲ , ಲತಾ ಕೈತಡ್ಕ, ಉಪಸಿತರಿರುವರು.
ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೈ ಬೊಳಿಕಲ ಶೇಡಿ , ಮುಖ್ಯ ಅತಿಥಿಗಳಾಗಿ ಹಿಂದೂ ಮುಖಂಡ ಪುತ್ತೂರು ಅರುಣ್ ಕುಮಾರ್ ಪುತ್ತಿಲ, ನಿವೃತ್ತ ಸೇನಾಧಿಕಾರಿ ರಮೇಶ್ ರೈ ಬೋಳೋಡಿ, ವಿಜಯ ಸಾಮ್ರಾಟ್ ಪುತ್ತೂರು ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ,, ಮಾತೃಶ್ರೀ ಅರ್ಥ್ ಮೂವರ‍್ಸ್ ಮೋಹನ್ ದಾಸ್ ರೈ ಕುಂಬ್ರ, ದ. ಕ ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಪ್ರಸನ್ನಕುಮಾರ್ ಮರ‍್ತ, ಪುತ್ತೂರು ವಕೀಲರು ಕೃಷ್ಣಪ್ರಸಾದ್ ರೈ ಕಣಿಯಾರು, ಇಂಡಿಯನ್ ರೈಲ್ವೆ ಮಂಗಳೂರು ಅಶ್ವತ್ ಕೆ ಎಸ್, ಉಪಸ್ಥಿತರಿರುವರು.
ಅಭಿನವ ಯಕ್ಷಕಲಾ ಕೇಂದ್ರ ಮಾಡಾವು ಇದರ ವಿದ್ಯಾರ್ಥಿಗಳಿಂದ, ಯಕ್ಷಗಾನ ಗುರು ಶ್ರೀ ವಾಸುದೇವ ರೈ ಬೆಳ್ಳಾರೆ ಇವರ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ಚಂದ್ರಹಾಸ ಸಂಜೆ ಆರರಿಂದ ಏಳು ಮೂವತ್ತರ ತನಕ, ರಾತ್ರಿ 9:30 ರಿಂದ 10:30ರ ತನಕ ಭಾರ್ಗವ ವಿಜಯ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಆರು ವರ್ಷದ ಒಳಗಿನ ಮಕ್ಕಳಿಗೆ ಮುದ್ದುಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ.
ಕ್ರೀಡಾಕೂಟ ಪಂದ್ಯಾಟಗಳು ಕೆಯ್ಯೂರು, ಪಾಲ್ತಾಡಿ, ಕೆದಂಬಾಡಿ, ಕೊಳ್ತಿಗೆ, ಮತ್ತು ಅರಿಯಡ್ಕ ಗ್ರಾಮಸ್ಥರಿಗೆ ಸೀಮಿತವಾಗಿದ್ದು,ಪುರುಷರ ವಿಭಾಗದಲ್ಲಿ ಮಡಕೆ ಒಡೆಯುವುದು,ಜಾರುಕಾಂಬ ನಡಿಗೆ,ಕಬಡ್ಡಿ ,ವಾಲಿಬಾಲ್, ಹಗ್ಗಜಗ್ಗಾಟ ,ಮಹಿಳೆಯರ ವಿಭಾಗದಲ್ಲಿ ಮಡಕೆ ಒಡೆಯುವುದು, ಭಕ್ತಿ ಗೀತೆ , ಹಗ್ಗ ಜಗ್ಗಾಟ,ಜಾರುಕಂಬ ನಡಿಗೆ, ಹಾಗೂ ಮಕ್ಕಳ ವಿಭಾಗದಲ್ಲಿ ಭಕ್ತಿ ಗೀತೆ,ಸಂಗೀತ ಕುರ್ಚಿ, ಚಿತ್ರಕಲೆ ಪೆನ್ಸಿಲ್ ಸ್ಕೆಚ್ ನಡೆಯಲಿದೆ. ಎಲ್ಲರಿಗೂ ಭಾಗವಹಿಸಲು ಅವಕಾಶವಿದೆ ಎಂದು ಅಭಿನವ ಕೇಸರಿ ಮಾಡಾವು ಅಧ್ಯಕ್ಷ ದೀಕ್ಷಿತ್ ಅಮೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










