







ನೆಲ್ಯಾಡಿ: ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ದಡ್ಡಲಪಳಿಕೆ ಸಮೀಪ ರಸ್ತೆ ಬದಿ ಹೋಟೆಲ್ ತ್ಯಾಜ್ಯ ಎಸೆದಿರುವುದನ್ನು ಕೌಕ್ರಾಡಿ ಗ್ರಾ.ಪಂ.ಅಧಿಕಾರಿಗಳು ಪತ್ತೆ ಹಚ್ಚಿ ಹೋಟೆಲ್ ಮಾಲಕರಿಗೆ ದಂಡ ವಿಧಿಸಿರುವ ಘಟನೆ ಸೆ.8ರಂದು ನಡೆದಿದೆ.


ಕೊಕ್ಕಡ ಜಂಕ್ಷನ್‌ನಲ್ಲಿರುವ ಹೋಟೆಲ್‌ವೊಂದರ ತ್ಯಾಜ್ಯವನ್ನು ರಸ್ತೆ ಬದಿ ಎಸೆದಿರುವುದು ಕೌಕ್ರಾಡಿ ಗ್ರಾ.ಪಂ. ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಕಾರ್ಯದರ್ಶಿ ದೇವಿಕಾ ಅವರು, ಹೋಟೆಲ್ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿ ಅವರಿಂದಲೇ ತ್ಯಾಜ್ಯ ತೆರವುಗೊಳಿಸಿದ್ದಾರೆ. ಅಲ್ಲದೇ ಹೋಟೆಲ್ ಮಾಲಕರಿಗೆ 2 ಸಾವಿರ ರೂ.ದಂಡ ವಿಧಿಸಿ ವಸೂಲಿ ಮಾಡಿ, ಇನ್ನು ಮುಂದೆ ರಸ್ತೆ ಬದಿ ತ್ಯಾಜ್ಯ ಎಸೆಯದಂತೆ ಎಚ್ಚರಿಕೆ ನೀಡಿದ್ದಾರೆ.













