ಆನಡ್ಕದಲ್ಲಿ ಹೊಲಿಗೆ ತರಬೇತಿ ಉದ್ಘಾಟನೆ

0

ಪುತ್ತೂರು: ತಾಲೂಕಿನ ಕೆಮ್ಮಿಂಜೆ ವಲಯದ ಶಾಂತಿಗೋಡು ಕಾರ್ಯಕ್ಷೇತ್ರದ ಆನಡ್ಕದಲ್ಲಿ ಹೊಲಿಗೆ ತರಬೇತಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ವಕೀಲ ಶಾಮ್ ಭಟ್ ಕಾರ್ಯಕ್ರಮ ಉದ್ಘಾಟಿಸಿ, ಮಹಿಳೆಯರು ಸ್ವಉದ್ಯೋಗಿಗಳಾಗಿ ಸ್ವಾವಲಂಬಿ ಜೀವನ ನಡೆಸಬೇಕು. ಆರ್ಥಿಕವಾಗಿ ಸ್ವಾವಲಂಬಿಗಳಾದರೆ ಕುಟುಂಬದಲ್ಲಿ ಯಶಸ್ಸು ಕಾಣಬಹುದು ಎಂದು ಶುಭ ಹಾರೈಸಿದರು. ಕೃಷಿ ಮೇಲ್ವಿಚಾರಕ ಹರೀಶ್ ಮಾತನಾಡಿ, ಜ್ಞಾನವಿಕಾಸ ಕಾರ್ಯಕ್ರಮದ ಉದ್ದೇಶ, ಮಾತೃಶ್ರೀ ಅಮ್ಮನವರ ಆಶಯ ಮತ್ತು ಮಹಿಳೆಯರಲ್ಲಿ ಆದ ಬದಲಾವಣೆ ಬಗ್ಗೆ ತಿಳಿಸಿದರು.

ಆನಡ್ಕ ಶಾಲೆಯ ಮುಖ್ಯಗುರು ಹರಿಣಾಕ್ಷಿ ಮಾತನಾಡಿ, ಮಹಿಳೆಯರಿಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡರೆ ಯಶಸ್ಸು ಸಾಧ್ಯ. ಮೂರು ತಿಂಗಳ ಟೈಲರಿಂಗ್ ತರಬೇತಿಯನ್ನು ಉತ್ತಮವಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಕೆಮ್ಮಿಂಜೆ ವಲಯಾಧ್ಯಕ್ಷ ಅಶೋಕ್ ಕುಮಾರ್, ಭಜನಾ ಪರಿಷತ್ ಕೋಶಾಧಿಕಾರಿ ಸುಧಾಕರ್ ಕುಲಾಲ್, ಕೆಮ್ಮಿಂಜೆ ವಲಯಾಧ್ಯಕ್ಷ ಸುಂದರ ಬಲ್ಯಾಯ, ತರಬೇತಿ ಶಿಕ್ಷಕಿ ವಸಂತಿ, ಸದಸ್ಯರು ಉಪಸ್ಥಿತರಿದ್ದರು.

ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ನಿರೂಪಿಸಿದರು. ಸೇವಾ ಪ್ರತಿನಿಧಿ ಮೋಕ್ಷಿತ ಸ್ವಾಗತಿಸಿದರು, ವಲಯ ಮೇಲ್ವಿಚಾರಕ ಗಿರೀಶ್ ವಂದಿಸಿದರು.

LEAVE A REPLY

Please enter your comment!
Please enter your name here