







- ಮಸಾಲೆಯಿಂದ ಮಾರ್ಕೆಟ್ವರೆಗೆ ; ಎಸ್.ಜಿ ಪ್ಯೂರ್ ಮಸಾಲೆ ಮಾತ್ರವಲ್ಲ, ಈಗ ಸೂಪರ್ ಮಾರ್ಕೆಟ್ ಕೂಡ
ಯಾವುದೇ ಅಡುಗೆಗೆ ರುಚಿ ನೀಡುವುದು ಅದಕ್ಕೆ ಸೇರಿಸುವ ಮಸಾಲೆ. ಮಸಾಲಾ ಪೌಡರ್ ಎಂದ ತಕ್ಷಣ ನೆನಪಾಗುವುದು ಎಸ್.ಜಿ ಪ್ಯೂರ್ ಪ್ರೊಡಕ್ಟ್ಸ್. ಕಳೆದ ಹಲವಾರು ವರ್ಷಗಳಿಂದ ಪುತ್ತೂರು ಸಹಿತ ಕರಾವಳಿ ಹಾಗೂ ರಾಜ್ಯಾದ್ಯಂತ ತಮ್ಮ ಶುಚಿ-ರುಚಿಯಾದ ಮಸಾಲೆಗಳ ಮೂಲಕ ಚಿರಪರಿಚಿತರಾಗಿರುವಎಸ್.ಜಿ ಪ್ಯೂರ್’ ಸಂಸ್ಥೆ ಇದೀಗ ಮತ್ತೊಂದು ಕೊಡುಗೆ ನೀಡಲು ಸಿದ್ಧವಾಗಿದೆ.


‘ಎಸ್.ಜಿ ಪ್ಯೂರ್’ ಸಂಸ್ಥೆ ವತಿಯಿಂದ ‘ಎಸ್.ಜಿ ಪ್ಯೂರ್’ ಸೂಪರ್ ಮಾರ್ಕೆಟ್ ಸೆ.13ರಂದು ಪುತ್ತೂರು ಬೈಪಾಸ್ ರಸ್ತೆಯ ಪ್ರಾರ್ಥನಾ ಗಾರ್ಡನ್ ಹೋಟೆಲ್ ಬಳಿ ಶುಭಾರಂಭಗೊಳ್ಳಲಿದೆ.



ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿಗಳಾದ ಕುಂಟಾರು ರವೀಶ ತಂತ್ರಿ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಹಿರಿಯ ವಕೀಲ, ಅಡ್ವೋಕೇಟ್ ಮಹೇಶ್ ಕಜೆ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಉದ್ಯಮಿಗಳಾದ ಸಹಜ್ ರೈ ಬಳಜ್ಜ, ಉಜ್ವಲ್ ಪ್ರಭು UR ಪ್ರಾಪರ್ಟಿಸ್, ಸಿಝ್ಲರ್ ಮಾಲಕರಾದ ಪ್ರಸನ್ನ ಕುಮಾರ್ ಶೆಟ್ಟಿ, ದರ್ಬೆ ಏಷ್ಯಾನ್ ವುಡ್ ನ ಕೆಎಂ ಇಸ್ಮಾಯಿಲ್, ತುಳಸಿ ಕ್ಯಾಟರರ್ಸ್ ನ ಹರೀಶ್ ಭಟ್, ಎಸ್.ಕೆ.ಪಿ.ಎ ಜಿಲ್ಲಾಧ್ಯಕ್ಷ ನವೀನ್ ಪಂಜಳ, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ, ಗಾನಸರಸ್ವತಿ ಸಂಗೀತ ಕಲಾ ಶಾಲೆಯ ವಿದುಷಿ ವೀಣಾ ರಾಘವೇಂದ್ರ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಆಡಳಿತ ಪಾಲುದಾರರಾದ ಶ್ರವಣ್ ಕುಮಾರ್, ಗಿರಿಧರ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೂಪರ್ ಮಾರ್ಕೆಟ್ ನಲ್ಲಿ ಏನೇನಿದೆ…!!
‘ಸೂಪರ್ ಮಾರ್ಕೆಟ್’ ಹೆಸರೇ ಹೇಳುವ ಹಾಗೇ ಸೂಪರ್ ಆಗಿರೋ ಐಟಂ ಗಳೇ ಸಿಗುತ್ತೆ. ತಾಜಾ ತರಕಾರಿಗಳು, ಹಣ್ಣು-ಹಂಪಲು, ವಿವಿಧ ಬಗೆಯ ಐಸ್ ಕ್ರೀಮ್, ಮನೆಗೆ ಬೇಕಾದ ದಿನಸಿ ಸಾಮಾಗ್ರಿಗಳು, ದೈನಂದಿನ ಅಗತ್ಯ ವಸ್ತುಗಳು, ಪೂಜಾ ಸಾಮಾಗ್ರಿ, ಗಿಫ್ಟ್ ಐಟಂ ಸ್, ಹೋಮ್ ಮೇಡ್ ಐಟಂ ಸ್, ನ್ಯಾಚುರಲ್ ಕೊಕೊನಟ್ ಆಯಿಲ್ (ಶುದ್ಧ ತೆಂಗಿನೆಣ್ಣೆ) ಮತ್ತು ಜಿಂಜೆಲಿ ಆಯಿಲ್ ( ಶುದ್ಧ ಎಳ್ಳೆಣ್ಣೆ) ಹೀಗೆ ಹತ್ತು ಹಲವಾರು ಬಗೆಯ ದಿನ ಬಳಕೆ ವಸ್ತುಗಳು ಎಲ್ಲವೂ ಒಂದೇ ಸೂರಿನಡಿ ಲಭ್ಯವಾಗಲಿದೆ ಜೊತೆಗೆ ಎಸ್.ಜಿ ಪ್ಯೂರ್ ಅವರ ಮಸಾಲಾ ಪ್ರೊಡಕ್ಟ್ಸ್ ಕೂಡ ಲಭ್ಯವಾಗಲಿದೆ.
ಸ್ಮಾರ್ಟ್ ಶಾಪಿಂಗ್ & ಭರ್ಜರಿ ಉಳಿತಾಯ :
ಇಂದಿನ ದುಬಾರಿ ದುನಿಯಾದಲ್ಲಿ ಗಳಿಸಿದ ಹಣವನ್ನು ಉಳಿಸುವುದು ಒಂದು ದೊಡ್ಡ ಸವಾಲು. ಸೂಪರ್ ಮಾರ್ಕೆಟ್ ಬಂದ ತಕ್ಷಣ ಹಣವೆಲ್ಲ ಖಾಲಿಯಾಗಬಹುದು ಎಂಬ ಯೋಚನೆ ನಿಮಗೆ ಇದ್ದರೆ ಅದನ್ನು ಇಂದೇ ಮರೆತು ಬಿಡಿ. ಎಸ್.ಜಿ ಸೂಪರ್ ಮಾರ್ಕೆಟ್ ನಲ್ಲಿ ಸ್ಮಾರ್ಟ್ ಶಾಪಿಂಗ್ ಮಾಡುವ ಜೊತೆಗೆ ಭರ್ಜರಿ ಉಳಿತಾಯವನ್ನು ಮಾಡಬಹುದು. ಗ್ರಾಹಕರಿಗಾಗಿ ಇಲ್ಲಿ ಪ್ರತಿ ವಾರ ಭರ್ಜರಿ ಆಫರ್ ಗಳನ್ನೂ ಕೂಡ ಪ್ರಸ್ತುತಪಡಿಸಲಾಗುತ್ತದೆ. ಭರ್ಜರಿ ಆಫರ್ ನಲ್ಲಿ ಹಲವಾರು ಡಿಸ್ಕೌಂಟ್ಸ್ ಕೂಡ ಲಭ್ಯವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ 8722903722 ಸಂಪರ್ಕಿಸಬಹುದಾಗಿದೆ.










