







ಸವಣೂರು : ಶ್ರೀ ರಾಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ರಿ ಸವಣೂರು ಪಂಚಾಯತ್ ಇದರ ನೂತನ ಅಧ್ಯಕ್ಷರಾಗಿ ಪ್ರೇಮಾ ಭಾಸ್ಕರ್ ಆರೇಲ್ತಡಿ, ಉಪಾಧ್ಯಕ್ಷರಾಗಿ ಚೇತನಾ ಶಿವಾನಂದ ಉಪ್ಪಳಿಗೆ, ಪ್ರಧಾನ ಕಾರ್ಯದರ್ಶಿಯಾಗಿ ಪುಷ್ಪಾವತಿ ಪುರುಷೋತ್ತಮ ಪಾಲ್ತಾಡಿ, ಜೊತೆ ಕಾರ್ಯದರ್ಶಿಯಾಗಿ ನಿವೇದಿತಾ ಕೇಕುಡೆ,ಕೋಶಾಧಿಕಾರಿಯಾಗಿ ಜಯಶ್ರೀ ವಿಜಯ ಕುಚ್ಚೆಜಾಲು ಹಾಗೂ ಪದಾಧಿಕಾರಿಗಳಾಗಿ ಶ್ವೇತಾ ಶ್ರೇಯಾಂಸ ಇಂದ್ರ , ಜ್ಯೋತಿ ಬಾಲಕೃಷ್ಣ ಬೇರಿಕೆ,ಶೋಭಾವತಿ ವಸಂತ ಪೆರಿಯಡ್ಕ,ಸೀತಮ್ಮ ಬಾಲಕೃಷ್ಣ ಕುದ್ಮನಮಜಲು,ಸ್ಮಿತಾ ಬೊಳ್ಳಾಜೆ, ಮೀನಾಕ್ಷಿ ರಾಮಕೃಷ್ಣ ಅಂಜಯ,ವಿದ್ಯಾಲತಾ ಈಶ್ವರ ಬಂಬಿಲ, ಕವಿತಾ ಸುಂದರ ಚೆನ್ನಾವರ , ಡೀಕಮ್ಮ ತಾರಾನಾಥ ಬಂಬಿಲ,ಜಸ್ಮಿಚೇತನ್ ಪಲ್ಲತ್ತಡ್ಕ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ಈ ಸಂದರ್ಭದಲ್ಲಿ ರಾಮ ಸಂಜೀವಿನಿ* ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ವಿಜಯ ಈಶ್ವರ ಗೌಡ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.













