







ಬಡಗನ್ನೂರು: ಮಹಾರಾಷ್ಟ್ರದ ನಾಸಿಕ್ ನಲ್ಲಿ ಸೆ.6 ರಿಂದ 10ರ ವರೆಗೆ ನಡೆದ ರಾಷ್ಟ್ರಮಟ್ಟದ 3A ವಾಲಿಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಜೂನಿಯರ್ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.


ಕರ್ನಾಟಕ ತಂಡದ ನಾಯಕತ್ವವನ್ನು ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಯ 9ನೇ ತರಗತಿಯ ಕ್ರೀಡಾಪಟು ಪ್ರತ್ವಿಶ್ ಕನ್ನಾಯ ವಹಿಸಿದ್ದರು. ತಂಡದಲ್ಲಿ ಅದೇ ಸಂಸ್ಥೆಯ 9ನೇ ತರಗತಿಯ ಮತ್ತೋರ್ವ ಆಟಗಾರ ನಿಶ್ಮಿತ್ ಕೂಡ ಭಾಗವಹಿಸಿದ್ದರು.



ತಂಡದ ಆಟಗಾರರಿಗೆ ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅವರ ಮಾರ್ಗದರ್ಶನದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಯ ಕ್ರೀಡಾಂಗಣದಲ್ಲಿ ಒಂದು ವಾರಗಳ ಕಾಲ ತರಬೇತಿ ನೀಡಲಾಗಿತ್ತು.
ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ದೈಹಿಕ ಶಿಕ್ಷಣ ಶಿಕ್ಷಕರಾದ ಮೋನಪ್ಪ ಪಟ್ಟೆ, ಗೋಪಿನಾಥ್ ಹಾಗೂ ಆಮಮ್ಸ್ ಮೂಡಡ್ಕದ ದೈಹಿಕ ಶಿಕ್ಷಣ ಶಿಕ್ಷಕ ರಫೀಕ್ ಆತೂರು ತರಬೇತಿ ನೀಡಿದ್ದರು.










