







ಪುತ್ತೂರು:ಮಹಿಳೆಯೋರ್ವರ ವಿಚಾರದಲ್ಲಿ ಮಾತಿಗಿಳಿದು ಮೊಬೈಲ್ ಅಂಗಡಿ ಮಾಲಕ ಮತ್ತು ರಿಕ್ಷಾ ಚಾಲಕನ ನಡುವೆ ಬಸ್ ನಿಲ್ದಾಣದ ಬಳಿ ಹೊಡೆದಾಟ ನಡೆದು ಇಬ್ಬರೂ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆ ಸೆ.10ರಂದು ಸಂಜೆ ನಡೆದ ಬಗ್ಗೆ ವರದಿಯಾಗಿದೆ.


ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಭರತ್ ಎಂಬವರ ಮೊಬೈಲ್ ಅಂಗಡಿ ಬಳಿ ಪರಸ್ಪರ ಆರೋಪ ಪ್ರತ್ಯಾರೋಪ ನಡೆದು ಹಲ್ಲೆ ನಡೆದಿದೆ.ಘಟನೆಯಿಂದ ಭರತ್ ಮತ್ತು ಆಟೋ ರಿಕ್ಷಾ ಚಾಲಕ ರಾಜೇಶ್ ಪೆರಿಗೇರಿ ಅವರು ಗಾಯಗೊಂಡಿದ್ದು,ಇಬ್ಬರೂ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಘಟನೆ ಕುರಿತು ಇಬ್ಬರೂ ಪೊಲೀಸರಿಗೆ ದೂರು ನೀಡಿದ್ದಾರೆ.













