






ಪುತ್ತೂರು: ಮುಂಬೈಯ ಐಟಿಸಿ ಗ್ರ್ಯಾಂಡ್ ಸೆಂಟ್ರಲ್‌ನಲ್ಲಿ ನಡೆದ ಇಂಡಿಯಾ ರಿಯಲ್ ಎಸ್ಟೇಟ್ ಲೀಡರ್‌ಶಿಪ್ ಕಾನ್‌ಕ್ಲೇವ್ & ಎಕ್ಸಲೆನ್ಸ್ ಅವರ್ಡ್ಸ್ 2026 ರಲ್ಲಿ ಬ್ಯಾರೀಸ್ ಗ್ರೂಪ್‌ನ ಸ್ಥಾಪಕ ಮತ್ತು ಸಿಎಂಡಿ ಸೈಯದ್ ಮೊಹಮದ್ ಬ್ಯಾರಿ ಅವರಿಗೆ ರಿಯಲ್ ಎಸ್ಟೇಟ್ ವಿಭಾಗದಲ್ಲಿ ಪ್ರತಿಷ್ಠಿತ ‘ಹುರುನ್ ಇಂಡಸ್ಟ್ರಿ ಅಚೀವ್‌ಮೆಂಟ್ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗಿದೆ.


ಅವರ ಪರವಾಗಿ ಬ್ಯಾರೀಸ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಅವರ ಪುತ್ರ ಮಝರ್ ಬ್ಯಾರಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.ರಿಯಲ್ ಎಸ್ಟೇಟ್ ವಲಯಕ್ಕೆ ಸೈಯದ್ ಬ್ಯಾರಿ ಅವರು ನೀಡಿರುವ ಕೊಡುಗೆ, ನಾಯಕತ್ವ ಹಾಗೂ ನಾವೀನ್ಯತೆ, ಸುಸ್ಥಿರತೆ ಮತ್ತು ಜವಾಬ್ದಾರಿಯುತ ರಿಯಲ್ ಎಸ್ಟೇಟ್ ಅಭಿವೃದ್ಧಿಯ ಮೇಲಿನ ಅವರ ಬದ್ಧತೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.



ಭಾರತೀಯ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಶ್ರೇಷ್ಠತೆ ಮತ್ತು ನಾಯಕತ್ವವನ್ನು ಗುರುತಿಸುವ ಹುರುನ್ ಇಂಡಿಯಾ ಮತ್ತು ಗ್ರೋಹೆ ಸಂಸ್ಥೆಯ ದಶಕದ ಸಂಭ್ರಮದ ಭಾಗವಾಗಿ ಈ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉದ್ಯಮದ ಪ್ರಮುಖ ಗಣ್ಯರು ಭಾಗವಹಿಸಿದ್ದರು. ಸುಸ್ಥಿರ ಅಭಿವೃದ್ಧಿ ಮತ್ತು ದೀರ್ಘಕಾಲೀನ ಮೌಲ್ಯ ಸೃಷ್ಟಿಯತ್ತ ಗಮನಹರಿಸಿರುವ ಸೈಯದ್ ಬ್ಯಾರಿ ಅವರು, ಜವಾಬ್ದಾರಿಯುತ ರಿಯಲ್ ಎಸ್ಟೇಟ್ ಅಭಿವೃದ್ಧಿ ವಿಧಾನಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಸಾಧನೆಯು ಬ್ಯಾರೀಸ್ ಗ್ರೂಪ್‌ಗೆ ಒಂದು ಮೈಲಿಗಲ್ಲಾಗಿದ್ದು, ದೃಷ್ಟಿಕೋನ, ಮೌಲ್ಯಗಳು, ನಾವೀನ್ಯತೆ ಮತ್ತು ಸೇವೆಯನ್ನು ಕೇಂದ್ರೀಕರಿಸಿದ ಸೈಯದ್ ಬ್ಯಾರಿ ಅವರ ನಾಯಕತ್ವದ ಪ್ರಯಾಣಕ್ಕೆ ಸಂದ ಗೌರವವಾಗಿದೆ.










