






ಪುತ್ತೂರು : ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ 5 ನೇ ಶಾಖೆಯು ಸೆ.13 ರಂದು ಬೆಳಿಗ್ಗೆ 10 ಗಂಟೆಗೆ ಬೆಟ್ಟಂಪಾಡಿ- ರೆಂಜ ಕೃತಿಕಾ ಸಂಕೀರ್ಣದಲ್ಲಿ ಉದ್ಘಾಟನೆಗೊಳ್ಳಲಿದೆ.ಶಾಸಕ ಅಶೋಕ್ ಕುಮಾರ್ ರೈ ಅವರು ಸಂಸ್ಥೆಯ ನೂತನ ಶಾಖೆಯನ್ನು ಉದ್ಘಾಟನೆಗೈದು, ದೀಪ ಪ್ರಜ್ವಲ್ವನೆ ಮಾಡಲಿದ್ದಾರೆ.
ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎನ್.ಜಗನ್ನಾಥ ರೈ ನುಳಿಯಾಲು ಅಧ್ಯಕ್ಷತೆ ವಹಿಸಲಿದ್ದಾರೆ.ಭದ್ರತಾ ಖಜಾನೆ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಇದರ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ನೇರವೇರಿಸಲಿದ್ದಾರೆ.ಪುತ್ತೂರು ತಾಲ್ಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಗಣಕ ಯಂತ್ರ ಉದ್ಘಾಟನೆಗೈಯಲಿದ್ದಾರೆ.
ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ ಅವರು ಪ್ರಥಮ ಠೇವಣಿ ಪತ್ರ ಬಿಡುಗಡೆಯನ್ನು ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್. ಎಮ್ . ರಘು, ಬೆಟ್ಟಂಪಾಡಿ ಗ್ರಾ.ಪಂ, ಮಾಜಿ ಸದಸ್ಯ ಮೊದು ಕುಂಞಿ ಹಾಗೂ ಬೆಟ್ಟಂಪಾಡಿ ರೆಂಜ ಕೃತಿಕಾ ಸಂಕೀರ್ಣದ ಮಾಲಕ ದಿವಾಕರ್ ರೈ ಭಾಗವಹಿಸಲಿದ್ದಾರೆ ಎಂದು ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎನ್. ಜಗನ್ನಾಥ ರೈ ನುಳಿಯಾಲು, ಉಪಾಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಮುಖ್ಯಕಾರ್ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲು ಹಾಗೂ ಶಾಖಾ ಮೇನೇಜರ್ ಬ್ರಿಜೇಶ್ ಶೆಟ್ಟಿ ತಿಳಿಸಿದ್ದಾರೆ.


ಪುತ್ತೂರಿನ ದರ್ಭೆ ಶ್ರೀರಾಮ ಸೌಧದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘ ಅಲಂಕಾರು, ಈಶ್ವರಮಂಗಲ, ನಿಂತಿಕಲ್ಲಿನಲ್ಲಿ ಶಾಖೆಗಳನ್ನು ಹೊಂದಿದ್ದು, ಸಹಕಾರ ಕ್ಷೇತ್ರದಲ್ಲಿ ಬಂಟಸಿರಿ ಸಹಕಾರ ಸಂಸ್ಥೆಯು ಅತೀ ವೇಗದಲ್ಲಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ.













