ಸೆ. 14 ರಿಂದ 16 : ಸವಣೂರು ವಿನಾಯಕ ಸಭಾಭವನದಲ್ಲಿ 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸವಣೂರು ಇವರ ಆಶ್ರಯದಲ್ಲಿ ಸೆ.14 ರಿಂದ 16 ರತನಕ 3 ದಿನ 44 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿವಿಧ ಕಾರ್‍ಯಕ್ರಮಗಳೊಂದಿಗೆ ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ ಜರಗಲಿದೆ.


ಸೆ. 14 ರಂದು ಬೆಳಿಗ್ಗೆ ಧ್ವಜಾರೋಹಣ ನಡೆಯಲಿದ್ದು, ಬಳಿಕ ಪುರೋಹಿತರಾದ ಶಿವಕುಮಾರ್ ಭಟ್ ಎಡಮಂಗಲ ನೇತೃತ್ವದಲ್ಲಿ ಗಣೇಶ ಬಿಂಬ ಪ್ರತಿಷ್ಠಾಪನೆ, ಗಣಪತಿಹೋಮ, ಭಜನೆ, ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆ ನಡೆಯಲಿದೆ.


ಮಧ್ಯಾಹ್ನ ಮಹಾಪೂಜೆಯ ಬಳಿಕ, ಸಾರ್ವಜನಿಕ ಅನ್ನಸಂತರ್ಪಣೆ, ಬಳಿಕ ಭಕ್ತಿ ರಸಮಂಜರಿ, ಮಧ್ಯಾಹ್ನ ಗಾನ ವೈಭವ, ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭರತನಾಟ್ಯ ಕಾರ್‍ಯಕ್ರಮ ಜರಗಲಿದೆ. ಸೆ. 15 ರಂದು ಬೆಳಿಗ್ಗೆ ಭಜನೆ, ಮಧ್ಯಾಹ್ನ ಸಪ್ತಸ್ವರ ಭಜನಾಮೃತ, ಬಳಿಕ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಭಜನೆ, ಕುಣಿತ ಭಜನೆ, ಸಂಜೆ ಭರತನಾಟ್ಯ, ರಾತ್ರಿ ‘ತರಣಿ ಸೇನ ಕಾಳಗ’ ಯಕ್ಷಗಾನ ಬಯಲಾಟ ನಡೆಯಲಿದೆ.

ಸೆ. 16 ರಂದು ಬೆಳಿಗ್ಗೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ ಸಭಾ ಕಾರ್‍ಯಕ್ರಮ, ಬಳಿಕ ಮಹಾಪೂಜೆ-ಸಾರ್ವಜನಿಕ ಅನ್ನಸಂತರ್ಪಣೆ, ಮಧ್ಯಾಹ್ನ ಹಗ್ಗಜಗ್ಗಾಟ, ಸಂಜೆ ಶೊಭಾಯಾತ್ರೆಯು ಸವಣೂರಿನಿಂದ ಸರ್ವೆ ಗೌರಿಹೊಳೆಯ ತನಕ ನಡೆಯಲಿದೆ ಎಂದು ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಕೆ. ಸೀತಾರಾಮ ರೈ ಸವಣೂರು, ಅಧ್ಯಕ್ಷ ಪ್ರಭಾಕರ ಶೆಟ್ಟಿ ನಡುಬೈಲು ಹಾಗೂ ಕಾರ್ಯದರ್ಶಿಸತೀಶ್ ಬಲ್ಯಾಯ ಕನ್ನಡಕುಮೇರು ಮತ್ತು ಪದಾಧಿಕಾರಿಗಳು ಹಾಗೂ ಸಮಿತಿಯ ಸರ್ವಸದಸ್ಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here