ಆರ್ಲಪದವು: ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪಾಣಾಜೆ : ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆರ್ಲಪದವು ಇದರ ವತಿಯಿಂದ ಅ.21 ರಂದು ನಡೆಯಲಿರುವ 37 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಸೆ.12  ಶ್ರಾವಣ ಶನಿವಾರದಂದು ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.

   ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀಕೃಷ್ಣ ಬೊಳ್ಳಿಲಾಯ ಕಡಮಾಜೆ ಇವರು ದೇವರ ಮುಂದೆ ಪ್ರಾರ್ಥನೆ ಮಾಡಿ ಆಮಂತ್ರಣ ಬಿಡುಗಡೆ ಗೊಳಿಸಿದರು.

    ಕೃಪಾ ಶಂಕರ್ ಅರ್ಧಮೂಲೆ, ಜಾಣು ನಾಯ್ಕ ಭರಣ್ಯ , ಜಯರಾಮ ರೈ ಚಂಬರ ಕಟ್ಟ , ರಘುನಾಥ ಪಾಟಾಳಿ ಆಪಿನಿಮೂಲೆ, ಸದಾಶಿವ ರೈ ಸೂರಂಬೈಲ್,  ಪುಷ್ಪರಾಜ್ ರೈ ಕೋಟೆ, ರವಿಶಂಕರ್ ಶರ್ಮ ಬೊಳ್ಳುಕಲ್ಲು ,  ಉಮೇಶ್ ಬಲ್ಯಾಯ ಕೊಂದಲಡ್ಕ , ಲಕ್ಷ್ಮೀ ನಾರಾಯಣ ರೈ ಕೆದಂಬಾಡಿ ,ಸಂತೋಷ್ ರೈ ಕೋಟೆ ,ತಮ್ಮಣ್ಣ ನಾಯ್ಕ ಸುಡುಕುಳಿ, ಜಯಶ್ರೀ ದೇವಸ್ಯ,ಬಾಬು ರೈ ಕೋಟೆ,ಸೀತಾರಾಮ ರೈ , ಶಿವರಾಮ ಮಣಿಯಾಣಿ,ನಾರಾಯಣ ಮಣಿಯಾಣಿ ಹಾಗೂ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here