






ಪ್ರತಿ ಖರೀದಿಗೂ ಬೆಲೆಬಾಳುವ ಉಡುಗೊರೆ
ಸೆ.16ರ ವರೆಗೆ ಮುಂದುವರೆಯಲಿದೆ ಕೊಡುಗೆಗಳು



ಸಂಸ್ಥೆಯ ಸೇವಾ ಮನೋಭಾವ ಶ್ಲಾಘನೀಯವಾಗಿದ್ದು, ಇತರರಿಗೆ ಮಾದರಿಯಾಗಿದೆ: ಅವಿನಾಶ್ ಕೊಡಂಕೇರಿ




ಪುತ್ತೂರು: ಸಂಸ್ಥೆ ಬೆಳೆದಂತೆ ಸಾಮಾಜಿಕ ಜವಾಬ್ದಾರಿಯೂ ನಮ್ಮ ಮೇಲೆ ಬಹಳಷ್ಟಿದೆ. ಸದೃಡ ಸಮಾಜ ವ್ಯವಹಾರ ವೃದ್ಧಿಗೆ ರಹದಾರಿಯಾಗಿದೆ. ದೇಶದ ಭವಿಷ್ಯ ನಿಂತಿರುವುದು ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ. ಕಲಿತ ಮಕ್ಕಳು ಮುಂದೆ ದೇಶದ ಭವಿಷ್ಯವಾಗಲಿದ್ದಾರೆ. ಆಧ್ಯತೆಯ ಮೇಲೆ ಅವರು ಈ ಭಾಗದ ವಿದ್ಯಾರ್ಥಿಗಳ ಬೆಳವಣಿಗೆಗಾಗಿ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳನ್ನು ಸದೃಢರನ್ನಾಗಿಸಲು, ಮೂಲಭೂತ ಸೌಕರ್ಯಕ್ಕಾಗಿ ಸಿಎಸ್ ಆರ್ ಅನುದಾನವನ್ನು ಶಾಲೆಗೆ ಒದಗಿಸುತ್ತಿದೆ. ಸಂಸ್ಥೆಯ ಸೇವಾ ಮನೋಭಾವ ಶ್ಲಾಘನೀಯವಾಗಿದ್ದು, ಇತರರಿಗೆ ಮಾದರಿಯಾಗಿದೆ ಎಂದು ಸರಸ್ವತಿ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಅವಿನಾಶ್ ಕೊಡಂಕೇರಿರವರು ಹೇಳಿದರು.

ಕೆ.ಎಸ್.ಆರ್.ಟಿ.ಸಿ ವಾಣಿಜ್ಯ ಸಂಕೀರ್ಣದಲ್ಲಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ನ 8ನೇ ವರ್ಷದ ಸಂಭ್ರಮ ಹಾಗೂ ಸಿ.ಎಸ್.ಆರ್. ನಿಧಿಯಿಂದ ಸರಕಾರಿ ಶಾಲೆಗಳಿಗೆ ಅಗತ್ಯ ಸಾಮಾಗ್ರಿ ಖರೀದಿಗಾಗಿ ನೀಡಲಾಗುವ ಚೆಕ್ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಂಟ್ರ ಶಾಲಾ ಮುಖ್ಯಶಿಕ್ಷಕಿ ಪ್ರೇಮಾ ಕೆ., ಕುದ್ಮಾರ್ ಶಾಲಾ ಮುಖ್ಯಶಿಕ್ಷಕಿ ಮಿನಿ ವರ್ಗೀಸ್, ಮಂಕುಡೆ ಶಾಲಾ ಮುಖ್ಯಶಿಕ್ಷಕ ತಿಮ್ಮಪ್ಪ ನಾಯ್ಕ, ಕುಂಜೂರುಪಂಜ ಶಾಲೆಯ ಮುಖ್ಯಶಿಕ್ಷಕ ಮಹಮ್ಮದ್ ಅಶ್ರಫ್, ಉಪ್ಪಿನಂಗಡಿ ಶಾಲೆಯ ಸಹಶಿಕ್ಷಕ ಸಂತೋಷ್, ಶಾಂತಿನಗರ ಶಾಲಾ ಮುಖ್ಯಶಿಕ್ಷಕ ಜಯಪ್ರಕಾಶ್ ರವರನ್ನು ಗೌರವಿಸಲಾಯಿತು.
ಶಾಂತಿನಗರ ಶಾಲೆಯ ಜಯಪ್ರಕಾಶ್, ಕುದ್ಮಾರು ಶಾಲೆಯ ವೀಣಾ ಕೆ., ಕುಂಜೂರುಪಂಜ ಶಾಲೆಯ ಶಶಿಕಲಾ ಮೋಹನ್, ಮಂಕುಡೆ ಶಾಲೆಯ ತಿಮ್ಮಪ್ಪ ನಾಯ್ಕ, ಬಂಟ್ರ ಶಾಲೆಯ ಪ್ರೇಮಾ ಅಭಿಪ್ರಾಯ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ವಾರ್ಷಿಕೋತ್ಸವದ ವಿಶೇಷ ಕೊಡುಗೆಗಳ ಅನಾವರಣ ಮಾಡಲಾಯಿತು.

ಶಾಖಾ ವ್ಯವಸ್ಥಾಪಕ ಹರಿ ಮಾರಾರ್, ಸಹಾಯಕ ವ್ಯವಸ್ಥಾಪಕ ಪ್ರಜೀಶ್ ಪ್ರಕಾಶ್, ಅಕೌಂಟೆಂಟ್ ಇನೋಶ್ ಸನ್ನಿ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಸಿಂಚನ, ಮೋಕ್ಷಿಕಾ, ಚೈತ್ರ ಪ್ರಾರ್ಥಿಸಿದರು. ಸಿಬ್ಬಂದಿ ಉದಯ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಸಿಬ್ಬಂದಿ ಗೌತಮಿ ವಂದಿಸಿದರು.
ಆರು ಸರಕಾರಿ ಶಾಲೆಗಳಿಗೆ 5.08ಲಕ್ಷದ ಚೆಕ್ ಹಸ್ತಾಂತರ
ಜೋಸ್ ಆಲುಕ್ಕಾಸ್ ಸಂಸ್ಥೆಯ ಸಿಎಸ್ ಆರ್ ಮೊತ್ತದಲ್ಲಿ ಕುದ್ಮಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1,00880ರೂ., ಬಂಟ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 95108ರೂ., ಕುಂಜೂರುಪಂಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 82800ರೂ., ಶಾಂತಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 79880ರೂ., ಮಂಕುಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 79800ರೂ., ಉಪ್ಪಿನಂಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 69860ರೂ. ಮೊತ್ತದ ಚೆಕ್ ಅನ್ನು ಹಸ್ತಾಂತರ ಮಾಡಲಾಯಿತು.

*ವಾರ್ಷಿಕೋತ್ಸವದ ವಿಶೇಷ ಆಫರ್…
*ಪ್ರತಿ ಖರೀದಿಗೂ ಬೆಲೆಬಾಳುವ ಉಡುಗೊರೆ
*ಚಿನ್ನದ ಆಭರಣಗಳು ಮೇಕಿಂಗ್ ಚಾರ್ಜಸ್ ಮೇಲೆ 30% ವರೆಗೆ ರಿಯಾಯಿತಿ
*ಪ್ಲಾಟಿನಂ ಆಭರಣಗಳ ಮೇಕಿಂಗ್ ಚಾರ್ಜಸ್ ಮೇಲೆ 30% ರಿಯಾಯಿತಿ
*ವಜ್ರಗಳ ಮೇಲೆ 30% ರಿಯಾಯಿತಿ
*ಹಳೇ ಚಿನ್ನಾಭರಣ ಎಕ್ಸ್‌ಚೇಂಜ್ ಮೇಲೆ 0% ನಷ್ಟ










