ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಗಣೇಶ ಚತುರ್ಥಿ ಅಂಗವಾಗಿ  ಶಾಂತಿ ಸಭೆ 

0

ಬೆಳ್ಳಾರೆ : ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಯಿತು.ಪೊಲೀಸ್‌ ಠಾಣಾ ಎಸ್.ಐ.ಈರಯ್ಯ ದೂಂತೂರು ರವರು ಸ್ವಾಗತಿಸಿ, ಹಬ್ಬ ಆಚರಿಸುವ ಬಗ್ಗೆ ಸರಕಾರದ ನಿರ್ದೇಶನಗಳನ್ನು ಪಾಲಿಸಿಕೊಂಡು ಹಬ್ಬಗಳನ್ನು ಆಚರಿಸುವಂತೆ ಮಾಹಿತಿ ನೀಡಿದರು.ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಬಳಸದಂತೆ ಮತ್ತು ಡಿ.ಜೆ.ಗಳನ್ನು ಬಳಸದಂತೆ ಸೂಚಿಸಿದರು.ಗಣೇಶ ಪ್ರತಿಷ್ಟೆ ಮಾಡುವ ಜಾಗ ವಿವಾದ ರಹಿತ ಜಾಗವಾಗಿರಬೇಕು.ಜಾಗದ ಪರ್ಮಿಷನ್ ಮುಖ್ಯವಾದುದು.ಯಾವುದೇ ಸಣ್ಣ ಪುಟ್ಟ ಸಮಸ್ಯೆಗಳಿದ್ದರೂ ಪೊಲೀಸರ ಗಮನಕ್ಕೆ ತರಬೇಕು.ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸುವಂತೆ ಎಸೈ ಈರಯ್ಯ ದುಂತೂರು ಹೇಳಿದರು.

ಸಭೆಯಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here