ವಾಣಿಜ್ಯೋತ್ಸವದಲ್ಲಿ ರಾಮಕೃಷ್ಣ ಶಾಲಾ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ

0

ಪುತ್ತೂರು : ಸೆ.10 ರಂದು ಶ್ರೀರಾಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ VISTAARA Commerce Fest ಕಾರ್ಯಕ್ರಮದಲ್ಲಿ ನಡೆಸಿದ BRAIN BATTLE (Quiz) ಸ್ಪರ್ಧೆಯಲ್ಲಿ 10ನೇ ತರಗತಿಯ ಕೆ. ಆದಿತ್ಯ ಭಂಡಾರ್ಕರ್, ನೆಲ್ಲಿಕಟ್ಟೆ ಕೆ. ಅವಿನಾಶ್ ಭಂಡಾರ್ಕರ್ ಮತ್ತು ಅಕ್ಷತಾ ಭಂಡಾರ್ಕರ್ ಅವರ ಪುತ್ರ ಮತ್ತು ಕೆ. ಪ್ರಥಮ್ ಭಕ್ತ, ಚಿಕ್ಕಮುಡ್ನೂರು ಕೆ. ಪ್ರಕಾಶ್ ಭಕ್ತ ಮತ್ತು ಪಲ್ಲವಿ ಪಿ ಭಕ್ತ ಅವರ ಪುತ್ರ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಪಡೆದಿದ್ದಾರೆ.

ಹಾಗೂ VICHARA (Powerpoint Presentation) ಸ್ಪರ್ಧೆಯಲ್ಲಿ 10ನೇ ತರಗತಿಯ ಲಾವಣ್ಯ ಕೆ. ನಾಯಕ್, ಮುಂಡೂರು ಲವಕುಮಾರ್ ಮತ್ತು ನಳಿನಾಕ್ಷಿ ನಾಯಕ್ ಅವರ ಪುತ್ರಿ ದ್ವಿತೀಯ ಸ್ಥಾನ ಪಡೆದು ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಪಡೆದಿದ್ದಾರೆ.

ಈ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಹಾಗೂ ಪ್ರಭಾರ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here