






ರಾಮಕುಂಜ: ಶ್ರೀ ಮಹಾಗಣಪತಿ ಸೇವಾ ಸಮಿತಿ ಗಣೇಶನಗರ ಕೊಯಿಲ-ರಾಮಕುಂಜ ಇದರ ಆಶ್ರಯದಲ್ಲಿ 46ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.14 ಮತ್ತು 15ರಂದು ರಾಮಕುಂಜ ಗಣೇಶನಗರ ಶ್ರೀ ಮಹಾಗಣಪತಿ ಓಂ ಕ್ರೀಡಾಂಗಣದ ದಿ| ರ್ವಾರ ಸುಬ್ಬಣ್ಣ ಶೆಟ್ಟಿ ನಿರ್ಮಿತ ಶ್ರೀ ಮಹಾಗಣಪತಿ ಕಟ್ಟೆಯಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಅಶೋಕ್ ಕೊಯಿಲ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.


ಸೆ.14ರಂದು ಬೆಳಗ್ಗೆ 9 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ, ಉಷ:ಕಾಲ ಪೂಜೆ, 9.30ರಿಂದ ಶ್ರೀ ಮಹಾಗಣಪತಿ ಹೋಮ, 9.30ರಿಂದ ಶ್ರೀ ಶಾರದಾಂಬಾ ಭಜನಾ ಮಂಡಳಿ ಶಾರದಾನಗರ, ಶ್ರೀ ರಾಧಾಕೃಷ್ಣ ಮಹಿಳಾ ಭಜನಾ ಮಂಡಳಿ ಗೋಕುಲನಗರ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10ರಿಂದ ಮಕ್ಕಳಿಗೆ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.



ಧಾರ್ಮಿಕ ಸಭೆ
ಬೆಳಗ್ಗೆ 11ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಗ್ರಾಮ ವಿಕಾಸ ಮಂಗಳೂರು ವಿಭಾಗ ಸಂಯೋಜಕ್ ಜಿತೇಂದ್ರ ಪ್ರತಾಪನಗರ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಎಸ್ಆರ್ಕೆ ಲ್ಯಾರ್ಸ್ನ ಕೇಶವ ಅಮೈ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಮಾಜಿಕ ಕಾರ್ಯಕರ್ತ ಧರ್ಮಪಾಲ ರಾವ್ ಕಜೆ ಅವರಿಗೆ ಸನ್ಮಾನ ನಡೆಯಲಿದೆ. ಕೊಯಿಲ ಗ್ರಾ.ಪಂ.ಸAಜೀವಿನಿ ಒಕ್ಕೂಟದ ವಸಂತಿ ಕಲ್ಕಾಡಿ, ಸರೋಜಿನಿ ಏಣಿತ್ತಡ್ಕ, ರಾಮಕುಂಜ ಗ್ರಾ.ಪಂ. ಸಂಜೀವಿನಿ ಒಕ್ಕೂಟದ ಸುಶ್ಮಿತಾ ಕಲ್ಲೇರಿ, ಯಶೋದ ಶಾರದಾನಗರ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಅಪರಾಹ್ನ ಶ್ರೀ ದೇವರಿಗೆ ಮಹಾಪೂಜೆ, ಮಧ್ಯಾಹ್ನ ಪ್ರಸಾದ ಭೋಜನ ನಡೆಯಲಿದೆ. ಸಂಜೆ ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ, ರಾತ್ರಿ 7.30ರಿಂದ ತುಡರ್ ಕಲಾವಿದೆರ್ ಕಲ್ಲಡ್ಕ ಇವರಿಂದ ತುಳು ಪೌರಾಣಿಕ ನಾಟಕ ‘ಕಲೆಂಜಿಮಲೆ’ ಪ್ರದರ್ಶನಗೊಳ್ಳಲಿದೆ.
ಸೆ.15ರಂದು ಪೂರ್ವಾಹ್ನ 8ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಉಷ:ಕಾಲ ಪೂಜೆ, 9.30ರಿಂದ ಶ್ರೀ ಮಹಾಗಣಪತಿ ಹೋಮ, 10.30ರಿಂದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ, 11.30ರಿಂದ ಹಿಂದೂ ಬಾಂಧವರ ತಂಡಗಳ ಹಗ್ಗ ಜಗ್ಗಾಟ, ಅಪರಾಹ್ನ 12.30ರಿಂದ ಶ್ರೀ ಮಹಾಗಣಪತಿ ದೇವರಿಗೆ ಮಧ್ಯಾಹ್ನ ಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಸಂಜೆ 3.30ರಿಂದ ಕುಣಿತ ಭಜನೆ ನಡೆಯಲಿದೆ. ಅಪರಾಹ್ನ 4.30ರಿಂದ ಶ್ರೀ ಮಹಾಗಣಪತಿ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಶ್ರೀ ದೇವರ ಶೋಭಾಯಾತ್ರೆ ವಿಶೇಷ ಆಕರ್ಷಣೆಯೊಂದಿಗೆ ಗಣೇಶನಗರದಿಂದ ಶಾರದಾನಗರ, ಗೋಕುಲನಗರ ಮಾರ್ಗವಾಗಿ ಕೆಮ್ಮಾರಕ್ಕೆ ಸಾಗಲಿದೆ. ಕೆಮ್ಮಾರದಲ್ಲಿ ಕಟ್ಟೆಪೂಜೆ, ಪ್ರಸಾದ ವಿತರಣೆಯಾಗಿ ಶ್ರೀ ಮಹಾಗಣಪತಿ ದೇವರ ಜಲಸ್ಥಂಭನ ಆಗಲಿದೆ ಎಂದು ಅವರು ತಿಳಿಸಿದ್ದಾರೆ.










