ಶರವೂರು ದೇವಸ್ಥಾನದಲ್ಲಿ ತಾಳಮದ್ದಳೆ 38ನೇ ಸೇವೆ

0

ಆಲಂಕಾರು: ಶ್ರೀ ಕ್ಷೇತ್ರ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ನಡೆಯುತ್ತಿರುವ ಯಕ್ಷಗಾನ ತಾಳಮದ್ದಳೆಯ 38ನೇ ಸೇವೆಯಾಗಿ ‘ಶಲ್ಯ ಸಾರಥ್ಯ- ಶಲ್ಯ ನಿರ್ಗಮನ’ ಯಕ್ಷಗಾನ ತಾಳಮದ್ದಳೆ ಸೆ.12ರಂದು ಸಂಜೆ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಹಿಮ್ಮೇಳದಲ್ಲಿ ಗೋಪಾಲ ಭಟ್ ನೈಮಿಷ, ಡಿ.ಕೆ.ಆಚಾರ್ಯ ಹಳೆನೇರೆಂಕಿ, ಚಂದ್ರ ದೇವಾಡಿಗ ನಗ್ರಿ, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ದಿವಾಕರ ಆಚಾರ್ಯ ಹಳೆನೇರೆಂಕಿ (ಕೌರವ), ರಾಮ್ ಪ್ರಕಾಶ್ ಕೊಡಂಗೆ (ಕರ್ಣ 1), ಗುರುಪ್ರಸಾದ್ ಆಲಂಕಾರು (ಶಲ್ಯ), ರಾಘವೇಂದ್ರ ಭಟ್ ತೋಟಂತಿಲ (ಕರ್ಣ 2), ನಾರಾಯಣ ಭಟ್ ಆಲಂಕಾರು (ಸರ್ಪಾಸ್ತ್ರ) ಸಹಕರಿಸಿದರು. ಸೇವಾರ್ಥಿಗಳಾದ ಆಲಂಕಾರು ಕೊರಂಬಾಡಿ ನಿವಾಸಿ ರಕ್ಷಿತ್ ರಾಜ್ ಹಾಗೂ ಮನೆಯವರು ಉಪಸ್ಥಿತರಿದ್ದರು. ದುರ್ಗಾಂಬ ಕಲಾ ಸಂಗಮದ ಸದಸ್ಯರಾದ ಗುರುಪ್ರಸಾದ್ ಆಲಂಕಾರು ಸ್ವಾಗತಿಸಿ ವಂದಿಸಿದರು. ಭಕ್ತಾದಿಗಳು, ಕಲಾಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here