






ಉಪ್ಪಿನಂಗಡಿ: ಹಿರಿಯ ಸಾಮಾಜಿಕ ಮುಂದಾಳು ರಾಮಚಂದ್ರ ಮಣಿಯಾಣಿಯವರ ತಾಯಿ, ಉಪ್ಪಿನಂಗಡಿ ನಿವಾಸಿ ಯಮುನಾ ಬಿ. (90) ಅಲ್ಪಕಾಲದ ಅಸೌಖ್ಯದಿಂದ ಸೆ.12ರಂದು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಅಪಾರ ದೈವಭಕ್ತೆಯಾಗಿದ್ದ ಇವರು, ದೇವಾಲಯಗಳ ಅಭಿವೃದ್ಧಿ ಕಾರ್ಯಗಳಿಗೆ ಕೊಡುಗೈದಾನಿಯಾಗಿದ್ದರು. ಮೃತರು ಪುತ್ರರಾದ ರಾಮಚಂದ್ರ ಮಣಿಯಾಣಿ, ಮುಂಬೈಯ ಉದ್ಯಮಿ ಲಕ್ಷ್ಮಣ ಮಣಿಯಾಣಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರವು ಸೆ.14ರಂದು ಪುಣಚದ ಬಳಂತಿಮೊಗರು ತರವಾಡು ಮನೆಯಲ್ಲಿ ನಡೆಯಿತು.













