ಆಲಂಕಾರು ದುರ್ಗಾಂಬಾ ವಿದ್ಯಾವರ್ಧಕ ಸಂಘದಲ್ಲಿ 25ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

0

ದ.ಕ ಜಿಲ್ಲೆಯಲ್ಲಿ ಶಾಂತಿ ನೆಮ್ಮದಿ ಸ್ಥಿರಸ್ಥಾಯಿಯಾಗಲಿ – ಎಡಿಷನಲ್ ಎಸ್ಪಿ ಅನಿಲ್ ಕುಮಾರ್ ಎಸ್ ಭೂಮರೆಡ್ಡಿ


ಆಲಂಕಾರು: ಆಲಂಕಾರು ಶ್ರೀ ದುರ್ಗಾಂಬಾ ಪದವಿಪೂರ್ವ ವಿದ್ಯಾಲಯದಲ್ಲಿ ೨೫ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.14 ಮತ್ತು 15 ರಂದು ನಡೆಯಿತು. ಸೆ.14 ರಂದು ಬೆಳಗ್ಗೆ ಗಂಟೆ 8 ರಿಂದ ಶ್ರೀ ಗಣೇಶ ಪ್ರತಿಷ್ಠೆ ನಂತರ ಶ್ರೀ ಹರಿ ಭಜನಾ ಮಂಡಳಿ ಗಾಣಂತಿ,ಶ್ರೀ ಪಾಂಡುರಂಗ ಭಜನಾ ಮಂಡಳಿ ಮನವಳಿಕೆ,ಶ್ರೀ ಆದಿಶಕ್ತಿ ಭಜನಾ ಮಂಡಳಿ ಶ್ರೀ ಕ್ಷೇತ್ರ ಶರವೂರು ಇವರಿಂದ ಭಜನೆ ನಡೆದು, ಗಣಹೋಮ ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ನಂತರ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಹಳೆನೇರೆಂಕಿ, ಶ್ರೀ ಮಹಾಮಾಯ ಭಜನಾ ಮಂಡಳಿ ಗಡಿಯಾರ್ನಡ್ಕ ರವರಿಂದ ಭಜನೆ ನಡೆದು ,ವಿದ್ಯಾರ್ಥಿಗಳಿಂದ ಮತ್ತು ಸಾರ್ವಜನಿಕರಿಂದ ಭಕ್ತಿಗಾನ, ಶ್ರೀ ದುರ್ಗಾಂಬಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ,ವಿದುಷಿ ಶ್ರೀಮತಿ ಪ್ರಮೀಳಾ ಲೋಕೇಶ್‌ರವರ ಶಿಷ್ಯರಿಂದ ಭರತನಾಟ್ಯ ನಡೆದು ಸಭಾಕಾರ್ಯಕ್ರಮ ನಡೆಯಿತು. ನಂತರ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ಸೆ.15ರಂದು 8:೦೦ರಿಂದ ಶ್ರೀ ಗಣಪತಿ ಹೋಮ ನಂತರ ಮಾತೃಶೀ ಭಜನಾ ಮಂಡಳಿ ಕೊಂಡಾಡಿಕೊಪ್ಪ, ಶ್ರೀ ದುರ್ಗಾಂಬಾ ಪದವಿಪೂರ್ವ ಕಾಲೇಜು ಆಲಂಕಾರಿನ ವಿದ್ಯಾರ್ಥಿಗಳಿಂದ ,ಶ್ರೀ ಶಾರದಾಂಬಾ ಭಜನಾ ಮಂಡಳಿ ಕುಂತೂರು,ಶ್ರೀ ಶಾರದಾ ಮಹಿಳಾ ಭಜನಾ ಮಂಡಳಿ ಕುಂತೂರು ರವರಿಂದ ಭಜನೆ ನಡೆದು ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ.ಮಧ್ಯಾಹ್ನ ನಂತರ ಶ್ರೀ ದುರ್ಗಾಂಬಾ ಕಲಾ ಸಂಗಮ ಶ್ರೀ ಕ್ಷೇತ್ರ ಶರವೂರು ಆಲಂಕಾರು ಇವರಿಂದ ‘ಸುದರ್ಶನ ಗರ್ವಭಂಗ’ ಯಕ್ಷಗಾನ ತಾಳಮದ್ದಳೆ ನಡೆಯಿತು.ಸಂಜೆ ಮಹಾಪೂಜೆ ಸಂಜೆ ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆ ಆಲಂಕಾರಿನಿಂದ ಕುಂತೂರುವರೆಗೆ ನಡೆಯಿತು. ಶ್ರೀ ಶಾರದಾ ಮಹಿಳಾ ಭಜನಾ ಮಂಡಳಿ ಕುಂತೂರು,ಶ್ರೀ ದುರ್ಗಾಶಕ್ತಿ ಮಕ್ಕಳ ಕುಣಿತ ಭಜನಾ ಮಂಡಳಿ ಆಲಂಕಾರು, ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಮಕ್ಕಳ ಭಜನೆಯೊಂದಿಗೆ ಮೆರವಣಿಗೆ ನಡೆದು ಕುಂತೂರಿನಲ್ಲಿ ಶ್ರೀ ಗಣೇಶ ವಿಗ್ರಹದ ಜಲಸ್ತಂಭನ ನಡೆಯಿತು.


ಧಾರ್ಮಿಕ ಸಭಾಕಾರ್ಯಕ್ರಮ:
ಧಾರ್ಮಿಕ ಸಭೆ ಸೆ. 14 ರಂದು ದುರ್ಗಾಂಬಾ ಆಟದ ಮೈದಾನದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಽಕಾರಿ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ ಯವರು ಮಾತನಾಡಿ ಆಲಂಕಾರು ಶ್ರೀ ದುರ್ಗಾಂಬಾ ವಿದ್ಯಾಸಂಸ್ಥೆ ಗ್ರಾಮೀಣ ಭಾಗದಲ್ಲಿ ಒಳ್ಳೆಯ ಶಿಕ್ಷಣ ನೀಡಿ ಮಕ್ಕಳನ್ನು ದೇಶದ ಸತ್ಪ್ರಜೆಗಳನ್ನಾಗಿ ಮಾಡುವುದು ತುಂಬಾ ಶ್ಲಾಘನೀಯ ಕೆಲಸ ಎಂದರು. ಮಕ್ಕಳಿಗೆ ವಿದ್ಯಾರ್ಜನೆಗೆ ಗಣಪತಿಯ ಆಶೀರ್ವಾದ ಅಗತ್ಯ ಸರಕಾರಿ ಮತ್ತು ಸರಕಾರೇತರ ಕಾರ್ಯಕ್ರಮಗಳಲ್ಲಿಯೂ ಮೊದಲು ಗಣೇಶನ ಸ್ತುತಿಯನ್ನು ಮಾಡುತ್ತಾರೆ. ನಮ್ಮ ದೇಶದ ಸಾಂಸ್ಕೃತಿಕ ಭವ್ಯ ಪರಂಪರೆಯನ್ನು ಕಲಿತು ಪ್ರದರ್ಶನ ಮಾಡಲು ಗಣೇಶೋತ್ಸವ ಒಂದು ವೇದಿಕೆಯಾಗಿದೆ ಎಂದ ಅವರು, ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಒತ್ತು ನೀಡಬೇಕು ಈ ನಿಟ್ಟಿನಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ ಅವಶ್ಯಕ.ಮಕ್ಕಳನ್ನೆ ಈ ದೇಶದ ಆಸ್ತಿಯನ್ನಾಗಿ ಮಾಡಬೇಕು ಅದಕ್ಕೋಸ್ಕರ ಮಕ್ಕಳಿಗೆ, ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು ಅವರು ನಮ್ಮ ದೇಶದ ಭವ್ಯ ಪರಂಪರೆಯನ್ನು ಮುಂದುವರಿಸುವ ದಿಕ್ಸೂಚಿಯಾಗಬೇಕು,ದಕ್ಷಿಣ ಕನ್ನಡ ಜಿಲ್ಲೆ ಶಾಂತಿ ನೆಮ್ಮದಿಯಿಂದ ಸ್ಥಿರಸ್ಥಾಯಿಯಾಗಿರಲೆಂದು ಹಾರೈಸಿದರು.


ಶ್ರೀ ದುರ್ಗಾಂಬಾ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ನಾರಾಯಣ ಭಟ್.ಟಿ ಯವರು ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ ನಾವು ಬದುಕುವುದರೊಂದಿಗೆ ಇತರರನ್ನು ಬದುಕಿಸುವುದೇ ನಮ್ಮ ಗುರಿಯಾಗಬೇಕು .ನಾವು ಮಕ್ಕಳಿಗೆ ಪ್ರೀತಿ, ವಾತ್ಸಲ್ಯ, ಮಮತೆ,ಸಮಯವನ್ನು ನೀಡಿ ಪ್ರೀತಿ ಮಮತೆಯಿಂದ ಬೆಳೆಸಿ ಸಮಾಜಮುಖಿಯನ್ನಾಗಿ ಮಾಡಬೇಕು ಮಕ್ಕಳು ಸರಿಯಾದರೆ ಜಗತ್ತು ಸರಿಯಾದಂತೆ ಎಂದು ತಿಳಿಸಿ, ನಾವು ಹಣದ ದಾಸರಾಗದೇ ಗುಣದ ದಾಸರಾಗಬೇಕೆಂದರು.


ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಅಜಿತ್ ಪಾಲೇರಿ,ಸುರುಳಿ ಬಾಲಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಕೃಷ್ಣಕುಮಾರ್ ಅತ್ರಿಜಾಲು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಆಲಂಕಾರು ದುರ್ಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ರವರು ಮಾತನಾಡಿ ನಾವು 25 ವರ್ಷದ ಹಿಂದೆ ಆಲಂಕಾರು ಶ್ರೀ ದುರ್ಗಾಂಬಾ ವಿದ್ಯಾಸಂಸ್ಥೆಯಲ್ಲಿ ರಾಜಕೀಯ ರಹಿತವಾಗಿ ಎಲ್ಲರನ್ನು ಒಟ್ಟು ಸೇರಿಸಬೇಕೆನ್ನುವ ದೃಷ್ಟಿಯಿಂದ, ಸಂಸ್ಥೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸತ್ಪ್ರಜೆಯನ್ನಾಗಿ ಮಾಡಬೇಕೆನ್ನುವ ಉದ್ದೇಶದಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿಜ್ರಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ತಾಲೂಕು ಮಟ್ಟದ ಕಬಡಿ ಪಂದ್ಯಾಟದಲ್ಲಿ ಶ್ರೀ ದುರ್ಗಾಂಬಾ ವಿದ್ಯಾಸಂಸ್ಥೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದು ಅವರನ್ನು ಸಭೆಯಲ್ಲಿ ಗೌರವಿಸಲಾಯಿತು.
ವೇದಿಕೆಯಲ್ಲಿ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ| ಹೇಮಂತ್ ರೈ ಮನವಳಿಕೆ,ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮುತ್ತಪ್ಪ ಪೂಜಾರಿ ನೈಯ್ಯಲ್ಗ,ಇಂದುಶೇಖರ ಶೆಟ್ಟಿ, ರಾಮರಾಜ್ ನಗ್ರಿ,ವಿಜಯಕುಮಾರ್ ರೈ ಮನವಳಿಕೆ, ದಯಾನಂದ ಗೌಡ ಆಲಡ್ಕ,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ರೀನಾಥ್ ಕೇವಳ,ಕಾಲೇಜಿನ ಪ್ರಾಂಶುಪಾಲರಾದ ರೂಪಾ ಜೆ.ರೈ, ಮುಖ್ಯಗುರು ನವೀನ್ ರೈ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯಕುಮಾರ್ ಎಣ್ಣೆತ್ತೋಡಿ ಉಪಸ್ಥಿತರಿದ್ದರು. ಕಾಲೇಜಿನ ಆಡಳಿತಾಧಿಕಾರಿ ಶ್ರೀಪತಿ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಆಡಳಿತ ಮಂಡಳಿಯ ಕಾರ್ಯದರ್ಶಿ ಈಶ್ವರ ಗೌಡ ಪಜಡ್ಕ ವಂದಿಸಿದರು.ಶಿಕ್ಷಕ ಜನಾದನ್ ರವರು ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿನಿಯರಾದ ಪಲ್ಲವಿ,ಸಾಕ್ಷಿ,ಯಶಸ್ವಿನಿ,ಪ್ರೀತಾ ಪ್ರಾರ್ಥಿಸಿದರು.ವಿದ್ಯಾಸಂಸ್ಥೆಯ ಬೋಧಕ,ಬೋಧಕೇತರ ವರ್ಗದವರು ಸಹಕರಿಸಿದರು.
ಶ್ರೀ ಮಹಾಗಣಪತಿ ದೇವರ ಪೂಜಾ ವಿಧಿ ವಿಧಾನವನ್ನು ಅನಂತರಾಮ ಭಟ್ ತೋಟಂತಿಲ ಮತ್ತು ತಂಡದವರು ಪೂಜಾ ವಿಧಿವಿಧಾನ ನೇರವೆರೆಸಿದರು.ಕಾರ್ಯಕ್ರಮದಲ್ಲಿ ಊರ ಪರವೂರ ವಿಧ್ಯಾಭಿಮಾನಿಗಳು,ಮಕ್ಕಳ ಪೋಷಕರು ಊರವರು ಸಹಕರಿಸಿದರು.

LEAVE A REPLY

Please enter your comment!
Please enter your name here