ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ 108 ತೆಂಗಿನಕಾಯಿ ಗಣಹೋಮ

0

ಆಲಂಕಾರು: ಸೀಮಾ ದೇವಸ್ಥಾನ‌ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಸೆ.14 ರಂದು 108 ತೆಂಗಿನಕಾಯಿ ಗಣಹೋಮ‌ ನಡೆಯಿತು.

ದೇವಸ್ಥಾನದ ಪ್ರದಾನ ಆರ್ಚಕ ಹರಿಪ್ರಸಾದ ಉಪಾದ್ಯಯ ಮತ್ತು ರಾಘವೇಂದ್ರ ಪ್ರಸಾದ್ ಭಟ್ ತೋಟಂತಿಲರವರು ಪೂಜಾ ವಿಧಿ ವಿಧಾನ ನೇರವೆರಿಸಿದರು.


ಭಕ್ತಾದಿಗಳು ಗಣಹೋಮ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆಯಲ್ಲಿ‌ ಪಾಲ್ಗೊಂಡರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ನಗ್ರಿ ಸೇರಿದಂತೆ ಎಲ್ಲಾ ಸಮಿತಿಗಳ ಅಧ್ಯಕ್ಷರು,ಪದಾಧಿಕಾರಿಗಳು, ಸದಸ್ಯರು ಊರ ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here