







ನೆಲ್ಯಾಡಿ: ವಿಶ್ವವಿದ್ಯಾಲಯ ಕಾಲೇಜು ನೆಲ್ಯಾಡಿಯ ಶಿಕ್ಷಕ-ರಕ್ಷಕ ಸಂಘದ 2026-27ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ನೇಮಕ ಸೆ.16ರಂದು ನಡೆಯಿತು.



ಕಾಲೇಜು ಸಂಯೋಜಕ ಡಾ. ಸುರೇಶ್ ಅಧ್ಯಕ್ಷತೆ ವಹಿಸಿ ಶಿಕ್ಷಕ-ರಕ್ಷಕ ಸಂಘದ ಮಹತ್ವ ಮತ್ತು ಕಾಲೇಜಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಖಜಾಂಚಿ ವೆರೋನಿಕಾ ಪ್ರಭಾ ವಿ.ಪಿ. 2025-26ರ ಲೆಕ್ಕಪತ್ರ ಮಂಡಿಸಿದರು, ಸಭೆ ಅನುಮೋದಿಸಿತು.



ನೂತನ ಪದಾಧಿಕಾರಿಗಳು:
- ಕಾರ್ಯಾಧ್ಯಕ್ಷರು: ಉಮ್ಮರ್ ಬೈಲಂಗಡಿ (ಮರು ಆಯ್ಕೆ)
- ಉಪಾಧ್ಯಕ್ಷರು: ಅಶ್ವಿತಾ ರೈ
- ಸಹ ಕಾರ್ಯದರ್ಶಿ: ಕೇಶವತಿ
- ಸದಸ್ಯರು: ಧನಂಜಯ್, ಮೋಹಿನಿ, ಯಶೋಧಾ
ನೂತನ ಪದಾಧಿಕಾರಿಗಳಿಗೆ ಹೂ ನೀಡಿ ಸ್ವಾಗತಿಸಲಾಯಿತು. ಪೂರ್ವ ಸಹ ಕಾರ್ಯದರ್ಶಿ ಸೇಸಮ್ಮ, ಸದಸ್ಯರಾದ ಲಿಂಗಪ್ಪ, ಉಮ್ಮರ್ ಮುಸ್ಲಿಯಾರ್, ಪಾರ್ವತಿ ನಿರ್ಗಮಿಸಿದರು. ಆಯ್ಕೆ ಅವಿರೋಧವಾಗಿ ನಡೆಯಿತು. ನೂತನ ಕಾರ್ಯಾಧ್ಯಕ್ಷ ಉಮ್ಮರ್ ಬೈಲಂಗಡಿ ಮಾತನಾಡಿ ವಿಶ್ವವಿದ್ಯಾಲಯ ಕಾಲೇಜು ನೆಲ್ಯಾಡಿ ಉಳಿಯಬೇಕಾದ ಅಗತ್ಯತೆ ಬಗ್ಗೆ ಪ್ರಸ್ತಾಪಿಸಿದರು. ಡಾ. ಸೀತಾರಾಮ ಪಿ. ಪ್ರಾಸ್ತಾವಿಕ ನುಡಿ ಹಾಗೂ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು, ಪ್ರಜ್ಞಾ ವಂದಿಸಿದರು, ಉಪನ್ಯಾಸಕಿ ಶ್ರುತಿ ನಿರೂಪಿಸಿದರು. ಬೋಧಕ-ಬೋಧಕೇತರ ಸಿಬ್ಬಂದಿ, ಪೋಷಕರು ಉಪಸ್ಥಿತರಿದ್ದರು.










