







ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯವ್ಯಾಪ್ತಿಯ ದೋಳ್ಪಾಡಿ ಗ್ರಾಮವನ್ನು ಕಸ್ತೂರಿ ರಂಗನ್ ವರದಿಯಲ್ಲಿ ಸೇರಿಸಿರುವುದನ್ನು ವಿರೋಧ ವ್ಯಕ್ತಪಡಿಸಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರ ಉಪಸ್ಥಿತಿಯಲ್ಲಿ, ಸಂಘದ ಅಧ್ಯಕ್ಷ ಗಣೇಶ್ ಉದನಡ್ಕರವರು ಕಡಬ ತಹಸೀಲ್ದಾರ್ ಗಣೇಶ್ ಸವಣೂರ ಅವರ ಮೂಲಕ ಸರಕಾರಕ್ಕೆ ಸೆ.16ರಂದು ಮನವಿ ಸಲ್ಲಿಸಲಾಯಿತು.


ಸಂಘದ ಕಾರ್ಯವ್ಯಾಪ್ತಿಯ ದೋಳ್ಪಾಡಿ ಗ್ರಾಮವನ್ನು ಕಸ್ತೂರಿ ರಂಗನ್ ವರದಿಯಲ್ಲಿ ಸೇರಿಸಿರುವುದನ್ನು ವಿರೋಧ ವ್ಯಕ್ತಪಡಿಸಿ ಸರಕಾರಕ್ಕೆ ಮನವಿ ಸಲ್ಲಿಸಲು ಸಂಘದ ಮಹಾಸಭೆಯಲ್ಲಿ ನಿರ್ಣಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಮನವಿ ಸಲ್ಲಿಸಲಾಯಿತು.



ಈ ಸಂದರ್ಭದಲ್ಲಿ ಕಡಬ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ನವೀನ್ ಭಂಡಾರಿ, ಸಂಘದ ನಿರ್ದೇಶಕರಾದ ಸುಂದರ ದೇವಸ್ಯ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ ಗೌಡ ಉಪಸ್ಥಿತರಿದ್ದರು.










