ಸವಣೂರು : 44ನೇ ವರ್ಷದ ಶ್ರೀ ಗಣೇಶೋತ್ಸವ- ಧಾರ್ಮಿಕ ಸಭೆ- ಶೋಭಾಯಾತ್ರೆ

0

  • ಸವಣೂರಿನ ಗಣೇಶೋತ್ಸವ ಊರಿಗೆ ಸಂಭ್ರಮದ ಹಬ್ಬ- ಸವಣೂರು ಸೀತಾರಾಮ ರೈ
  • ನೆಮ್ಮದಿಯ ಬದುಕು- ಪ್ರಕಾಶ್ ಮೂಡಿತ್ತಾಯ
  • ಸಂತೋಷ ತಂದಿದೆ- ರಾಜ್ ದೀಪಕ್ ಜೈನ್

ಪುತ್ತೂರು: ಸವಣೂರಿನ ಗಣೇಶೋತ್ಸವ ಊರಿಗೆ ಸಂಭ್ರಮದ ಹಬ್ಬವಾಗಿದೆ ಎಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿರುವ `ಸಹಕಾರರತ್ನ’ ಸವಣೂರು ಕೆ.ಸೀತಾರಾಮ ರೈ ಹೇಳಿದರು.


ಅವರು ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ ಸೆ.16ರಂದು ಜರಗಿದ ಧಾರ್ಮಿಕ ಸಭಾ ಕಾರ್‍ಯಕ್ರಮದಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರ ಧುರೀಣರಾಗಿದ್ದ ದಿ.ಕೆ.ಎಸ್.ಎನ್. ನಿಡ್ವಣ್ಣಾಯ ಕುಮಾರಮಂಗಲ ಮತ್ತು ಚಂದ್ರಹಾಸ್ ರೈ ಕೊೖಲ ಅವರು ಸವಣೂರಿನಲ್ಲಿ 44 ವರ್ಷಗಳ ಹಿಂದೆ ಗಣೇಶೋತ್ಸವವನ್ನು ಆರಂಭ ಮಾಡಿದವರು. ತದ ನಂತರ ಎಲ್ಲರ ಸಹಕಾರ, ಪ್ರೋತ್ಸಾಹದಿಂದ ಗಣೇಶೋತ್ಸವ ನಡೆದು ಬಂದಿದೆ. ಕಳೆದ ಎರಡು ವರ್ಷಗಳಿಂದ ಪ್ರಭಾಕರ್ ಶೆಟ್ಟಿ ನಡುಬೈಲು ಅವರು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿದ್ದಾರೆ ಇವರ ನಾಯಕತ್ವದಲ್ಲಿ ಉತ್ತಮ ರೀತಿಯಲ್ಲಿ ಕಾರ್‍ಯಕ್ರಮ ನಡೆಯುತ್ತಿದೆ. ಇದು ತುಂಬಾ ಸಂತೋಷದ ವಿಷಯವಾಗಿದೆ. ಸವಣೂರಿನಲ್ಲಿ ಸುಸಜ್ಜಿತವಾಗಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ವಿನಾಯಕ ಸಭಾಭವನವನ್ನು ನಿರ್ಮಿಸಿದ್ದೇವೆ. ಸಾರ್ವಜನಿಕರು ಯಾವುದೇ ಸಮಾರಂಭವನ್ನು ನಡೆಸಲು ಈ ಸಭಾಭವನವನ್ನು ಬಳಕೆ ಮಾಡಬಹುದು ಎಂದು ಹೇಳಿದರು.


ನೆಮ್ಮದಿಯ ಬದುಕು- ಪ್ರಕಾಶ್ ಮೂಡಿತ್ತಾಯ
ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿನ ಉಪಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ಅವರು ಮಾತನಾಡಿ ನಾವು ಪ್ರತಿ ದಿನ ಭಜನೆ ಮಾಡುವ ಪದ್ದತಿಯನ್ನು ಬೆಳೆಸಬೇಕು, ಭಜನೆಯಿಂದ ನಮಗೆ ನೆಮ್ಮದಿಯ ಬದುಕು ಪ್ರಾಪ್ತವಾಗುತ್ತದೆ. ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯಿಂದ ಸಮಾಜದಲ್ಲಿ ಸರ್ವರಿಗೂ ನೆಮ್ಮದಿಯ ಬದುಕು ಪ್ರಾಪ್ತವಾಗುತ್ತದೆ ಎಂದರು.


ಸಂತೋಷ ತಂದಿದೆ- ರಾಜ್ ದೀಪಕ್ ಜೈನ್
ಸಾಮಾಜಿಕ ಮುಂದಾಳು ರಾಜ್‌ದೀಪಕ್ ಜೈನ್ ಕುದ್ಮಾರುಗುತ್ತು ಅವರು ಮಾತನಾಡಿ ದೇವರ ಮೇಲಿನ ಭಕ್ತಿ, ಶ್ರದ್ಧೆಯಿಂದ ಮಾನವ ಕುಲಕ್ಕೆ ನೆಮ್ಮದಿಯ ಬದುಕು ಪ್ರಾಪ್ತವಾಗುತ್ತದೆ. ಗಣೇಶೋತ್ಸವ ಆಚರಣೆಯು ಸವಣೂರಿನಲ್ಲಿ ಅತ್ಯಂತ ಸಡಗರದಿಂದ ನಡೆಯುತ್ತಿರುವುದು ಸಂತೋಷ ತಂದಿದೆ ಎಂದರು.


ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ನಡುಬೈಲು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಉದ್ಯಮಿ ಎನ್.ಸುಂದರ ರೈ ಸವಣೂರು ಉಪಸ್ಥಿತರಿದ್ದರು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್‍ಯನಿರ್ವಹಣಾಽಕಾರಿ ಚಂದ್ರಶೇಖರ್ ಪಿ ಕಾರ್‍ಯಕ್ರಮ ನಿರೂಪಿಸಿ, ಸವಣೂರು ಗಣೇಶೋತ್ಸವ ಸಮಿತಿಯ ಕಾರ್‍ಯದರ್ಶಿ ಸತೀಶ್ ಬಲ್ಯಾಯ ಕನ್ನಡಕುಮೇರು ವಂದಿಸಿದರು. ಸಮಿತಿಯ ಉಪಾಧ್ಯಕ್ಷರುಗಳಾದ ರಾಘವ ಗೌಡ ಸವಣೂರು, ಬಾಲಚಂದ್ರ ರೈ ಕೆರೆಕ್ಕೋಡಿ, ಜೊತೆಕಾರ್ಯದರ್ಶಿ ಚೇತನ್ ಕುಮಾರ್ ಕೊಡಿಬೈಲು,ಕೋಶಾಽಕಾರಿ ರಾಮಕೃಷ್ಣ ಪ್ರಭು ಸವಣೂರು, ಮಾಜಿ ಅಧ್ಯಕ್ಷ ಶಿವರಾಮ ಗೌಡ ಮೆದು, ಸದಸ್ಯರುಗಳಾದ ಸುಧಾಕರ ರೈ ದೇವಸ್ಯ, ರಾಜಾರಾಮ ಪ್ರಭು, ಅಶ್ವಿನಿ -ರ್ಮ್ಸ್, ಸವಣೂರು, ಮೋಹನ ರೈ ಕೆರೆಕ್ಕೋಡಿ, ಗಂಗಾಧರ ಪೆರಿಯಡ್ಕ, ಕುಂಞ ಆರೇಲ್ತಡಿ, ಸುರೇಶ್ ಎಸ್, ಸರ್ವೆ, ವೆಂಕಪ್ಪ ಅಡೀಲು, ಕುಸುಮ ಶೆಟ್ಟಿ, ಕೆರೆಕ್ಕೋಡಿ, ಜಯ ಬೇರಿಕೆ, ಶಾರದ ಮಾಲೆತ್ತಾರು, ಗಂಗಾಧರ ಸುಣ್ಣಾಜೆ, ದಿವಾಕರ ಬಸ್ತಿ, ಅನಿತಾ ಲಕ್ಷಣ ಗೌಡ ಕೆಡೆಂಜಿ, ಅಧ್ಯಕ್ಷರು ಮತ್ತು ಪದಾಽಕಾರಿಗಳು ಶಾರದಾಂಭ ಸೇವಾ ಸಂಘ, ಅಯ್ಯಪ್ಪ ಭಜನಾ ಮಂಡಳಿ ಸವಣೂರುರವರುಗಳು ಸಹಕರಿಸಿದರು.


ಸಮಾರಂಭದಲ್ಲಿ ಸವಣೂರು ಬಸದಿಯ ಅರ್ಚಕ ಶ್ರೇಯಾಂಸ ಕುಮಾರ್ ಇಂದ್ರ, ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಶ್ರವಣರಂಗ ಪ್ರತಿಷ್ಠಾನದ ಸಂಚಾಲಕ ತಾರಾನಾಥ ಸವಣೂರು, ಸವಣೂರು ಗ್ರಾ.ಪಂ, ಮಾಜಿ ಅಧ್ಯಕ್ಷರಾದ ಇಂದಿರಾ ಬಿ.ಕೆ, ರಾಜೀವಿ ವಿ.ಶೆಟ್ಟಿ, ಪಿಡಿಓ ಗುರುವ, ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆ, ರಶ್ಮಿ ಅಶ್ವಿನ್ ಶೆಟ್ಟಿ, ಮಮತಾ ಪ್ರಭಾಕರ್ ಶೆಟ್ಟಿ, ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಕೀ ರೈ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಆಳ್ವ ಸಹಿತ ಸಾವಿರಾರು ಮಂದಿ ಉಪಸ್ಥಿತರಿದ್ದರು. ಸೆ.15ರಂದು ಪೂರ್ವಾಹ್ನ ಉಷೆ ಪೂಜೆ, ಗಣಪತಿ ಹೋಮ, ಭಜನಾ ಕಾರ್ಯಕ್ರಮ, ಸಪ್ತಸ್ವರ ಭಜನಾಮೃತ, ಅಪರಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ. ಸಾಂಸ್ಕೃತಿಕ ಕಾರ್ಯಕ್ರಮ,ಸಂಜೆ ಭಜನಾ ಕಾರ್ಯಕ್ರಮ, ಕುಣಿತ ಭಜನೆ, ಸಾಂಸ್ಕೃತಿಕ ಸಂಭ್ರಮ, ಭರತನಾಟ್ಯ, ರಾತ್ರಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ತರಣಿಸೇನ ಕಾಳಗ ಯಕ್ಷಗಾನ ಬಯಲಾಟ ನಡೆಯಿತು. ಸೆ.16ರಂದು ಪೂರ್ವಾಹ್ನ ಗಣಪತಿ ಹೋಮ, ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್‍ಯಕ್ರಮ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಹಗ್ಗ ಜಗ್ಗಾಟ (ಪುರುಷರಿಗೆ ಹಾಗೂ ಮಹಿಳೆಯರಿಗೆ) ನಡೆಯಿತು. ಸಂಜೆ ಸವಣೂರಿನಿಂದ ಸರ್ವೆ ತನಕ ಶ್ರೀ ವಿಶ್ವೇಶ್ವರನ ಶೋಭಾಯಾತ್ರೆ ನಡೆದು, ಸರ್ವೆ ಗೌರಿ ಹೊಳೆಯಲ್ಲಿ ಜಲಸ್ತಂಭನ ಕಾರ್‍ಯಕ್ರಮ ನಡೆಯಿತು. ಅರ್ಚಕ ಶಿವಕುಮಾರ್ ಭಟ್ ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.

ಸವಣೂರು ಗಣೇಶೋತ್ಸವ ಬಹಳ ಅಚ್ಚುಕಟ್ಟಾಗಿ ನಡೆದಿದೆ. ಅಧ್ಯಕ್ಷ ಪ್ರಭಾಕರ್ ಶೆಟ್ಟಿ ನಡುಬೈಲು ಮತ್ತು ಪದಾಽಕಾರಿಗಳು, ಸಮಿತಿಯವರು ಉತ್ತಮ ಕೆಲಸವನ್ನು ಮಾಡಿದ್ದಾರೆ. ಊರ-ಪರವೂರ ಸಾವಿರಾರು ಮಂದಿ ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಸವಣೂರು ಸೀತಾರಾಮ ರೈ ಗೌರವಾಧ್ಯಕ್ಷರು ಶ್ರೀ ಗಣೇಶೋತ್ಸವ ಸಮಿತಿ ಸವಣೂರು

ಮೂರು ದಿನಗಳ ಕಾಲ ನಡೆದ ಗಣೇಶೋತ್ಸವದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ. ಸವಣೂರಿನ ಗಣೇಶೋತ್ಸವ ಮಾದರಿ ಗಣೇಶೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರಭಾಕರ್ ಶೆಟ್ಟಿ ನಡುಬೈಲು, ಅಧ್ಯಕ್ಷರು ಶ್ರೀ ಗಣೇಶೋತ್ಸವ ಸಮಿತಿ ಸವಣೂರು

ಎಲ್ಲರ ಪೂರ್ಣ ಸಹಕಾರ ಮತ್ತು ಪ್ರೋತ್ಸಾಹದಿಂದ ಕಾರ್‍ಯಕ್ರಮ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. ಒಟ್ಟಿನಲ್ಲಿ ಎಲ್ಲರ ಸಹಕಾರಕ್ಕೆ ಕೃತಜ್ಞತೆಗಳು
ಸತೀಶ್ ಬಲ್ಯಾಯ ಕನ್ನಡಕುಮೇರು, ಕಾರ್‍ಯದರ್ಶಿ ಶ್ರೀ ಗಣೇಶೋತ್ಸವ ಸಮಿತಿ ಸವಣೂರು

LEAVE A REPLY

Please enter your comment!
Please enter your name here