ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆ

0

ಪುತ್ತೂರು: ಉಪನಿರ್ದೇಶಕರ ಕಾರ್ಯಾಲಯ  ಶಾಲಾ ಶಿಕ್ಷಣ  ಮತ್ತು  ಸಾಕ್ಷರತಾ ಇಲಾಖೆ  ದಕ್ಷಿಣ ಕನ್ನಡ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ,  ಮಂಗಳೂರು ಉತ್ತರ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಇದರ ಸಂಯುಕ್ತ ಆಶ್ರಯದಲ್ಲಿ  ಹಾಗೂ ದಕ್ಷಿಣ ಕನ್ನಡ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್,  ಐ. ಕೆ. ಎಂ. ಎ ಮಂಗಳೂರು ಇವರ ಸಹಯೋಗದೊಂದಿಗೆ  14 ಮತ್ತು 17 ರ  ವಯೋಮಾನದ ಬಾಲಕ ಬಾಲಕಿಯರ ಜಿಲ್ಲಾ  ಮಟ್ಟದ ಬಾಕ್ಸಿಂಗ್ ಆಯ್ಕೆ ಟ್ರಯಲ್ಸ್ ಸೆ.15ರಂದು ನಡೆಯಿತು.

14ರ ವಯೋಮಾನದ ಬಾಲಕರ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಹಿತ್. ಸಿ ಅಲರ್ (ಚಂದ್ರಹಾಸ ಅಲರ್ ಮತ್ತು ಯಾಮಿನಿ ದಂಪತಿಗಳ ಪುತ್ರ)ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಈಪಂದ್ಯಕೂಟವು  ನವೆಂಬರ್ 3 4 ಮತ್ತು 5 ರಂದು ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ

LEAVE A REPLY

Please enter your comment!
Please enter your name here