







- ಬಿಜೆಪಿ ಕಚೇರಿಯಲ್ಲಿ ದೀಪೋತ್ಸವ – ಮೋದಿ ಚಾ ವಿತರಣೆ
- ದೇಶ ಮೊದಲು ಎಂಬ ಸಂದೇಶ ಜನರಿಗೆ ತಲುಪಲಿ: ಸಂಜೀವ ಮಠಂದೂರು
ಪುತ್ತೂರು: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆಯನ್ನು ಪುತ್ತೂರು ಬಿಜೆಪಿಯಿಂದ ಸೇವಾ ಸಂಕಲ್ಪ ಅಭಿಯಾನದ ಮೂಲಕ ಆಚರಿಸಲಾಯಿತು. ಬಿಜೆಪಿ ಕಚೇರಿಯಲ್ಲಿ ದೀಪೋತ್ಸವ, ವಠಾರದಲ್ಲಿ ಮೋದಿ ಚಹಾ ವಿತರಣೆ ವಿಶೇಷವಾಗಿತ್ತು.



ಬೆಳಿಗ್ಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಮಾಡಿ, ತುಪ್ಪದ ದೀಪ ಬೆಳಗಿಸಲಾಯಿತು. ಬಳಿಕ ಬಿಜೆಪಿ ಕಚೇರಿಯಲ್ಲಿ ದೀಪ ಪ್ರಜ್ವಲನೆಯ ಮೂಲಕ ಎಲ್ಲರು ಹಣತೆ ಬೆಳಗಿಸಿ ದೀಪೋತ್ಸವ ಆಚರಿಸಿ, ಬಿಜೆಪಿ ಕಚೇರಿ ವಠಾರದಲ್ಲಿ ಮೋದಿ ಚಹಾ ವಿತರಣೆ ಕಾರ್ಯಕ್ರಮ ವಿಶೇಷವಾಗಿ ನಡೆಯಿತು.




ದೇಶ ಮೊದಲು ಎಂಬ ಸಂದೇಶ ಜನರಿಗೆ ತಲುಪಲಿ:
ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಮತದಾರರು ಕೂಡ ದೇಶಕ್ಕಾಗಿ ಬದುಕಬೇಕು. `ದೇಶ ಮೊದಲು’ ಎಂಬ ಚಿಂತನೆ ಹಾಗೂ ಸಂದೇಶವನ್ನು ಜನರಲ್ಲಿ ಬಿತ್ತುವ ಕಾರ್ಯವಾಗಬೇಕು. ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಎಲ್ಲರೂ ಪ್ರಾರ್ಥಿಸಿ, ಅವರಿಗೆ ಭಗವಂತ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ಕರುಣಿಸಲಿ ಎಂದು ಹಾರೈಸಬೇಕು. ಇದೇ ಸಂದರ್ಭದಲ್ಲಿ ಕಾರ್ಯಕರ್ತರು ವಿರಮಿಸದೆ ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಬಡವರ ಸೇವೆ, ಆರೋಗ್ಯ ರಕ್ಷಣೆ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ವಿಚಾರಗಳಿಗೆ ಆದ್ಯತೆ ನೀಡುವುದರ ಜೊತೆಗೆ ದೇಶದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಕೆಲಸ ನಡೆಯಬೇಕು. ಮುಂದಿನ ಒಂದು ತಿಂಗಳ ಕಾಲ ಈ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದರು. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಮಾಸಿಕ ಕಾರ್ಯಕ್ರಮಗಳನ್ನು ಅ.17ರವರೆಗೆ ವಿವಿಧ ಸೇವಾ ಹಾಗೂ ಜನಸಂಪರ್ಕ ಚಟುವಟಿಕೆಗಳನ್ನು ನಡೆಸಬೇಕು. ಈ ಮೂಲಕ ಜನಸಾಮಾನ್ಯರೊಂದಿಗೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಇದ್ದಾರೆ ಎಂಬ ಸಂದೇಶವನ್ನು ತಲುಪಿಸುವ ಕಾರ್ಯವಾಗಬೇಕು ಎಂದು ಸಂಜೀವ ಮಠಂದೂರು ಕರೆ ನೀಡಿದರು.

ಮೋದಿ ಚಾಹ ವಿತರಣೆ:
ಬಿಜೆಪಿ ಕಚೇರಿ ವಠಾರದಲ್ಲಿ ಸ್ಥಳದಲ್ಲೆ ಚಹಾ ಮಾಡಿ ಕಾರ್ಯಕರ್ತರಿಗೆ ಸಾರ್ವಜನಿಕರಿಗೆ ಚಹಾ ಮತ್ತು ಬಿಸ್ಕತ್ ವಿತರಿಸಲಾಯಿತು.
ಈ ಸಂದರ್ಭ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಎಸ್ ಅಪ್ಪಯ್ಯ ಮಣಿಯಾಣಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಗೋಪಾಲಕೃಷ್ಣ ಹೇರಳೆ, ವಿಠಲದಾಸ್ ಹೆಗ್ಡೆ ಪರ್ಲಡ್ಕ, ಜಯಂತಿ ನಾಯಕ್, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ್ ಚಾಕೋಟೆ, ಸುನಿಲ್ ದಡ್ಡು, ಶಶಿಧರ್ ನಾಯಕ್, ಯುವರಾಜ್, ಜಯಲಕ್ಷ್ಮೀ ಶಗ್ರಿತ್ತಾಯ, ಮಹಿಳಾ ಮೋರ್ಚಾ ನಗರ ಮಂಡಲದ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷೆ ಯಶೋದಾ ಗೌಡ, ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಮಾದ್ಯಮ ವಕ್ತಾರ ರಾಜೇಶ್ ಬನ್ನೂರು, ಗ್ರಾಮಾಂತರ ಮಾದ್ಯಮ ವಕ್ತಾರ ಮಹೇಶ್ ಕೇರಿ, ನಗರಸಭೆ ನಿಟಕಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಸ್ಥಾಯಿ ಸಮಿತಿ ನಿಕಟಪೂರ್ವ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಶಿವರಂಜನ್, ನಿರಂಜನ್ ಮಾನ್ಯ, ರವಿ ಕುಮಾರ್, ಸತೀಶ್ ನಾಕ್, ವಿದ್ಯಾಧರ್ ಜೈನ್, ಚಂದ್ರಶೇಖರ್ ರಾವ್ ಬಪ್ಪಳಿಗೆ, ನಾಗೇಶ್ ಟಿ.ಎಸ್, ಜ್ಯೋತಿ ಆರ್ ನಾಯಕ್, ಹರಿಪ್ರಸಾದ್ ಯಾದವ್, ಶಶಿಕಲಾ ಸಿ.ಎಸ್, ಸುನಿತ್ ಭಟ್, ಅಣ್ಣಪ್ಪ ಕಾರೆಕ್ಕಾಡು, ವಸಂತಲಕ್ಷ್ಮೀ, ವಿನಯ ಭಂಡಾರಿ, ವಿರೂಪಾಕ್ಷ್ ಭಟ್, ನಾಗೇಂದ್ರ ಬಾಳಿಗ, ಸುರೇಂದ್ರ ಆಳ್ವ, ಸುರೇಶ್ಚಂದ್ರ ರೈ, ಗೌರಿ ಬನ್ನೂರು, ಪ್ರೇಮಲತಾ ನಂದಿಲ, ಜಯಶ್ರೀ ಎಸ್ ಶೆಟ್ಟಿ, ಯು ಲೋಕೇಶ್ ಹೆಗ್ಡೆ, ಅಭಿಜಿತ್ ಕೊಡಿಪ್ಪಾಡಿ, ಸುರೇಶ್ ಅತ್ರಿಮಜಲು, ಭುಜಂಗ ಆಚಾರ್ಯ, ಉಲ್ಲಾಸ ಪೈ ಡಾ. ಕೃಷ್ಣಪ್ರಸನ್ನ, ಉಷಾ ಮುಳಿಯ, ಸುಮತಿ, ಚಿತ್ರಪ್ರಸಾದ್ ರೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.










