







ಬಡಗನ್ನೂರುಃ ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಶ್ರಾವಣ ಸಂಕ್ರಮಣದ ಅಂಗವಾಗಿ ಸೆ. 17 ರಂದು ಕೊರಗಜ್ಜನಿಗೆ ಸಂಕ್ರಮಣ ಪೂಜೆ ಹಾಗೂ ಶ್ರೀ ಗುಳಿಗರಾಜನಿಗೆ ಕಲಶ ಸೇವೆ ನಡೆದು ಪ್ರಸಾದ ವಿತರಣೆ ನಡೆಯಿತು.


ಈ ಸಂಧರ್ಭದಲ್ಲಿ ಊರ ಪರವೂರ ಭಕ್ತಾದಿಗಳಿಂದ ಹರಕೆ ರೂಪದ ಕಲಶ ಸೇವೆ ನಡೆಯಿತು.ಬಳಿಕ ಅನ್ನ ಪ್ರಸಾದ ವಿತರಣೆ ಮಾಡಲಾಯಿತು ಸುಮಾರು 400 ಕ್ಕೂ ಮಿಕ್ಕಿ ಭಕ್ತಾಧಿಗಳು ಭಾಗವಹಿಸಿ ಶ್ರೀ ದೖೆವದ ಅನ್ನ ಪ್ರಸಾದ ಸ್ವೀಕರಿಸಿದರು.



ಈ ಸಂಧರ್ಭದಲ್ಲಿ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ, ಉಪಾಧ್ಯಕ್ಷ ಸದಾನಂದ ರೖೆ ಬೊಳಕೂಡ್ಲು, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮರದಮೂಲೆ, ಜತೆ ಕಾರ್ಯದರ್ಶಿ ವಿನಾಯ ಕುಮಾರ್ ದೇವಸ್ಯ ಕೋಶಾಧಿಕಾರಿ ಚಂದ್ರಶೇಖರ ರೖೆ ಬಜ ನಿಕಟಪೂರ್ವ ಕೋಶಾಧಿಕಾರಿ ಭಾಸ್ಕರ ಹೆಗಡೆ, ಪೂಜಾಕರ್ಮಿ ದಿನೇಶ್ ಮರದ ಮೂಲೆ ಹಾಗೂ ಸಮಿತಿ ಸದಸ್ಯರು ಮತ್ತು ಊರಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.










