







ಪುತ್ತೂರು: ಪುತ್ತೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಯೋಗಾಸನ ಸ್ಪರ್ಧೆ ಪಿಎಂಶ್ರೀ ಕೆಪಿಎಸ್ ವೀರಮಂಗಲದಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಪಿಎಂಶ್ರೀ ಕೆಪಿಎಸ್ ವೀರಮಂಗಲ ಶಾಲೆಯ ಯೋಗಪಟುಗಳು ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.


ಬಾಲಕರ ವಿಭಾಗದಲ್ಲಿ ರಿದಮಿಕ್ ಯೋಗ ಜೋಡಿಯಲ್ಲಿ ಬಿ. ಸಾತ್ವಿಕ್ ಮತ್ತು ಪ್ರಣ್ವಿತ್ ಪ್ರಥಮ, ಆರ್ಟಿಸ್ಟಿಕ್ ಯೋಗ ಜೋಡಿಯಲ್ಲಿ ಪ್ರಣ್ವಿತ್ ಮತ್ತು ಚಿರಾಗ್ ವಿ. ಪ್ರಥಮ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಆರ್ಟಿಸ್ಟಿಕ್ ಯೋಗ ಜೋಡಿಯಲ್ಲಿ ಶ್ರೀದೇವಿ ಮತ್ತು ಅಮೂಲ್ಯ ಪ್ರಥಮ, ರಿದಮಿಕ್ ಯೋಗ ಜೋಡಿಯಲ್ಲಿ ಇಶಾನಿ ಮತ್ತು ಶ್ರೀಯಾ ಪ್ರಥಮ ಸ್ಥಾನ ಪಡೆದರು.



ಆರ್ಟಿಸ್ಟಿಕ್ ಸಿಂಗಲ್ ನಲ್ಲಿ ಶ್ರೀಹಾನ್ ಎಚ್.ಎಸ್. 4ನೇ ಸ್ಥಾನ, ಪ್ರಣೀತ್ ಗೌಡ ವಿ.ಎಸ್. 5ನೇ ಸ್ಥಾನ, ಶ್ರೀಯಾ ದ್ವಿತೀಯ, ಶ್ರಾವಣಿ ತೃತೀಯ ಸ್ಥಾನ ಪಡೆದರು. ಆರ್ಟಿಸ್ಟಿಕ್ ಯೋಗ ಜೋಡಿಯಲ್ಲಿ ಅನನ್ಯ ಮತ್ತು ಪ್ರೇಕ್ಷಿತಾ ದ್ವಿತೀಯ, ಪ್ರಣವಿ ಮತ್ತು ಅನನ್ಯ ತೃತೀಯ, ರಿದಮಿಕ್ ಜೋಡಿಯಲ್ಲಿ ಶ್ರಾವಣಿ ಮತ್ತು ಆದ್ಯಾ ದ್ವಿತೀಯ ಸ್ಥಾನ ಪಡೆದರು ಎಂದು ಶಾಲಾ ಮುಖ್ಯಗುರು ತಾರಾನಾಥ ಪಿ ತಿಳಿಸಿದ್ದಾರೆ. ಹೇಮಾವತಿ ಅವರು ತರಬೇತಿ ನೀಡಿದ್ದರು.










