ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪುತ್ತೂರು ಶಾಖೆಯಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ಪುತ್ತೂರು ಶಾಖೆಯಲ್ಲಿ ಸೆ.11 ರಂದು ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ ನಡೆಯಿತು.

ಶಾಖಾ ವ್ಯವಸ್ಥಾಪಕ ಹರೀಶ್ ಪಿ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಬ್ಯಾಂಕಿನ ಪ್ರಗತಿ ಬಗ್ಗೆ ತಿಳಿಸಿ ಗ್ರಾಹಕರ ಸಹಕಾರ ಕೋರಿದರು. ನಿವೃತ್ತ ಸಿಬ್ಬಂದಿ ಸುರೇಶ್ ಕುಮಾರ್ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿ ಬ್ಯಾಂಕು ಬೆಳೆದು ಬಂದ ಹಾದಿ, ಪ್ರಗತಿ ಹಾಗೂ ಗ್ರಾಹಕ ಸೇವೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಆರ್ಥಿಕ ಸಾಕ್ಷರತಾ ಸಮಾಲೋಚಕಿ ಗೀತಾ ವಿಜಯ್ ಅವರು ವಿವಿಧ ವಿಮಾ ಸೌಲಭ್ಯ, ಉಳಿತಾಯ ಖಾತೆಗೆ ಆಧಾರ್ ಜೋಡಣೆ, CKYC, RE-KYC, ಅಟಲ್ ಪಿಂಚಣಿ, PM ಕಿಸಾನ್ ಸಮ್ಮಾನ್, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ, ಸುರಕ್ಷಾ ಬಿಮಾ ಯೋಜನೆ, ಗ್ಯಾಸ್ ಸಬ್ಸಿಡಿ, ಡಿಜಿಟಲ್ ಬ್ಯಾಂಕಿಂಗ್‌ನಲ್ಲಿ ಸೈಬರ್ ವಂಚನೆಗಳ ಬಗ್ಗೆ ಮಾಹಿತಿ ನೀಡಿದರು.

ಪುತ್ತೂರು ವಲಯ-1ರ ಮೇಲ್ವಿಚಾರಕ ಶರತ್ ಡಿ ಅವರು ಬ್ಯಾಂಕಿನ ವಿವಿಧ ಠೇವಣಿ, ಸಾಲ ಸೌಲಭ್ಯಗಳು, ಫಸಲ್ ಬಿಮಾ, ಹವಾಮಾನ ಆಧಾರಿತ ವಿಮೆ, UPI, IMPS, RTGS, NEFT, ಮೊಬೈಲ್ ಬ್ಯಾಂಕ್ ಆ್ಯಪ್, Google Pay, PhonePe, BHIM, Paytm, RuPay Debit Card, RuPay Kisan Card, QR Code, ಉಳಿತಾಯ ಖಾತೆಯ ಅಪಘಾತ ವಿಮಾ ಯೋಜನೆ ಮತ್ತಿತರ ಸೌಲಭ್ಯಗಳ ಬಗ್ಗೆ ತಿಳಿಸಿದರು.

ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಪುತ್ತೂರು ವಲಯ ಮೇಲ್ವಿಚಾರಕ ಹರೀಶ್ ಕುಲಾಲ್ ಅವರು ನವೋದಯ ಸ್ವಸಹಾಯ ಸಂಘಗಳ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ವಲಯ-2ರ ಮೇಲ್ವಿಚಾರಕ ವಸಂತ ವಂದಿಸಿದರು. ಶಾಖಾ ಸಿಬ್ಬಂದಿ ದೀಕ್ಷಿತ್ ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here