ನನ್ನ ಕನಸಿನ ಮನೆ ಚಿತ್ರ ಸ್ಪರ್ಧೆಯಲ್ಲಿ ವೀರಮಂಗಲ ಶಾಲೆಯ ಶ್ರೀಹಾನ್ ಎಚ್.ಎಸ್.ಗೆ ಪ್ರಥಮ

0

ಪುತ್ತೂರು: ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಪ್ರಯುಕ್ತ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ‘ನನ್ನ ಕನಸಿನ ಮನೆ’ ಚಿತ್ರ ಸ್ಪರ್ಧೆಯಲ್ಲಿ ಪಿಎಂಶ್ರೀ ಕೆಪಿಎಸ್ ವೀರಮಂಗಲ ಶಾಲೆಯ 4ನೇ ತರಗತಿಯ ವಿದ್ಯಾರ್ಥಿ ಶ್ರೀಹಾನ್ ಎಚ್.ಎಸ್. ಪ್ರಥಮ ಸ್ಥಾನ ಪಡೆದಿದ್ದಾನೆ.

ಕಾರ್ಯಕ್ರಮವನ್ನು ಪುತ್ತೂರು ಸೆಂಟರ್ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಆಯೋಜಿಸಿತ್ತು.ವಿದ್ಯಾರ್ಥಿಗೆ ಶಾಲಾ ಮುಖ್ಯಗುರು ತಾರಾನಾಥ ಪಿ ಮಾರ್ಗದರ್ಶನ ಮಾಡಿದ್ದರು. ಇವನು ಸಾರಕೂಟೇಲು ನಿವಾಸಿ ಹರೀಶ್ ಮತ್ತು ಜಯಶ್ರೀ ದಂಪತಿಗಳ ಪುತ್ರ.

LEAVE A REPLY

Please enter your comment!
Please enter your name here