ಸೆ.20: ಉಪ್ಪಿನಂಗಡಿ ಕಥೋಲಿಕ್ ವಿವಿಧೋದ್ಧೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

ಪುತ್ತೂರು:ಉಪ್ಪಿನಂಗಡಿ ಬ್ಯಾಂಕ್ ರಸ್ತೆಯ ಕಾಮತ್ ಕಟ್ಟಡದ ಒಂದನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಉಪ್ಪಿನಂಗಡಿ ಕಥೋಲಿಕ್ ವಿವಿಧೋದ್ಧೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಜೋಸೆಫ್ ವಿ.ಎಂರವರ ಅಧ್ಯಕ್ಷತೆಯಲ್ಲಿ ಸೆ.20 ರಂದು ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಸಭಾಂಗಣದಲ್ಲಿ ಜರಗಲಿದೆ.


ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಜೆರಾಲ್ಡ್ ಮಸ್ಕರೇನ್ಹಸ್, ನಿರ್ದೇಶಕರಾದ ಜೋನ್ ಫೆರ್ನಾಂಡೀಸ್, ಜೊಸ್ಸಿ ಸ್ಟೀವನ್ ಮೊಂತೇರೊ, ಇನಾಸ್ ರೊಡ್ರಿಗಸ್, ರೋಬರ್ಟ್ ಡಿ’ಸೋಜ, ವಿನ್ಸೆಂಟ್ ಬ್ರ್ಯಾಗ್ಸ್, ಸುನಿಲ್ ಬ್ರ್ಯಾಗ್ಸ್, ಶ್ರೀಮತಿ ಪ್ರೆಸಿಲ್ಲ ಡಿ’ಸೋಜ, ಸವಿತಾ ರೀಟಾರವರು ಭಾಗವಹಿಸಲಿದ್ದಾರೆ. ಸಂಘದ ಸದಸ್ಯರು ಸಭೆಯಲ್ಲಿ ಹಾಜರಿದ್ದು ಸೂಕ್ತ ಸಲಹೆ-ಸೂಚನೆಗಳನ್ನು ನೀಡಬೇಕಾಗಿ ಸಹಕಾರಿ ಸಂಘದ ಕಾರ್ಯದರ್ಶಿ ಲ್ಯಾನ್ಸಿ ಡಿ’ಸೋಜರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here